ಅಂಬೇಡ್ಕರ ನಾಮಫಲಕಕ್ಕೆ ಅಪಮಾನಿಸಿದವರ ಬಂಧನಕ್ಕೆ ಹೋರಾಟಗಾರರ ಆಗ್ರಹ

0
87

ಸುರಪುರ: ಇಂದು ದೇಶದ ೭೧ ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಬದಲ್ಲಿಯೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲ ಶಿರೂರ ಗ್ರಾಮದ ಸಂವಿದಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ,ಆರ್ ಅಂಬೇಡ್ಕರ್ ರವರ ನಾಮ ಫಲಕಕ್ಕೆ ಸಗಣಿ ಎರಚಿ ಚಪ್ಪಲಿ ನೇತಾಕಿ ವಿಕೃತ ಮನೊಭಾವನೆಯನ್ನು ಹೊಂದಿರುವ ದೇಶದ್ರೋಹಿಗಳನ್ನು ಕಿಡಿಗೆಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅನೇಕ ಪ್ರತಿಪರ ಮತ್ತು ದಲಿತ ಹೋರಾಟಗಾರರು ಆಗ್ರಹಿಸಿದರು.

ನಗರದ ತಹಸೀಲ್ ಕಚೇರಿ ಮುಂದೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಮಾತನಾಡಿ,ಈ ಘಟನೆ ಕೇವಲ ಒಬ್ಬರಿಂದ ನಡೆದಿರಲು ಸಾಧ್ಯವಿಲ್ಲ. ಇದಕ್ಕೆ ಕುಮ್ಮಕ್ಕು ನೀಡಿದ ಕಾಣದ ಕೈಗಳನ್ನು ಶಿಘ್ರದಲ್ಲಿಯೇ ಪತ್ತೆ ಹಚ್ಚಲು ಸರಕಾರಕ್ಕೆ ಒತ್ತಾಯಿಸುತ್ತೆವೆ.

Contact Your\'s Advertisement; 9902492681

ಒಂದು ವೇಳೆ ಕೂಡಲೆ ಬಾಬಾ ಸಾಹೇಬರ ನಾಮಫಲಕಕ್ಕೆ ಅಪಮಾನಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ತಿಳಿಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರ ನಿಂಗಣ್ಣ ಬಿರೆದಾರ ಮೂಲಕ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಬಹುಜನ ಕ್ರಾಂತಿ ಮೋರ್ಚಾ ಇದೇ ತಿಂಗಳು ೨೯ನೇ ತಾರೀಖಿನಂದು ಕೆರನೀಡಿರುವ ಭಾರತ ಬಂದ ಕಾರ್ಯಾಕ್ರಮಕ್ಕೆ ಬೆಂಬಲಿಸಿ ಸುರಪುರ ಬಂದ್ ಆಚರಿಸಲಾಗುವುದು ಹಾಗೂ ದಿನಾಂಕ ೩೦-೧-೨೦೨೦ ರಂದು ಗಾಂಧಿಜಿಯವರ ಹುತಾತ್ಮ ದಿನದ ಅಂಗವಾಗಿ ಸೌಹಾರ್ದ ಕರ್ನಾಟಕ ರಾಜ್ಯಾದಂತಹ ಹಮ್ಮಿಕೊಂಡಿರುವ ದೇಶದ ಅಗ್ರ ಗ್ರಂಥವಾದ ಸಂವಿದಾನ ರಕ್ಷಣೆ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಿ ಮಾನವ ಸರಪಳಿ ಕಾರ್ಯಾಕ್ರಮವನ್ನು ಹಮ್ಮಿಕೊಂಡು ದಿನಾಂಕ ೩೦ ರಂದು ಸಂವಿದಾನದ ಪೀಠಿಕೆಯನ್ನು ಗೌರವಿಸಿ ಪ್ರತಿಜ್ಷಾ ವಿಧಿಯನ್ನು ಬೋಧಿಸುವ ಕಾರ್ಯಕ್ರಮ ಆಚರಿಸಲಾಗುವುದು ಎಂದು ತಿಳಿಸಿದರು.

ರಾಹುಲ್ ಹುಲಿಮನಿ, ಯಲ್ಲಪ್ಪ ಚಿನ್ನಾಕರ್, ಸಿದ್ದಯ್ಯ ಸ್ಥಾವರಮಠ , ಮೂರ್ತಿ ಬೋಮ್ಮನಹಳ್ಳಿ ,ಖಾಜಾ ಖಲಿಲ್ ಅಹಮದ್ ಅರಿಕೇರಿ, ಶರಣಪ್ಪ ವಾಗನಗೇರಿ, ಮಾಳಪ್ಪ ಕಿರದಳ್ಳಿ, ನಿಂಗಣ್ಣ ಗೋನಾಲ್, ಲಿಯಾಖತ್ ಹುಸ್ತಾದ್ ನಿಜ್ಜು ,ಪ್ರಕಾಶ ಆಲ್ಹಾಳ, ರಾಜು ಬಡಿಗೇರ್, ಹಣಮಂತ ರತ್ತಾಳ, ಶರಣು ಹುಲಿಮನಿ, ಎಮ್,ಡಿ, ಇಶಿಯಾತ್,ಮಾನಪ್ಪ ಝಂಡದಕೇರಿ, ಮಾನಪ್ಪ ಹುಣಿಸಿಹೊಳೆ, ಮರೆಪ್ಪ ಮುದನೂರು,ಶ್ರೀಶೈಲ್, ಶಿವಪ್ಪ ನಾಗರಾಳ,ಮುಂತಾದವರು ಬಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here