ಜಯಕರ್ನಾಟಕ ಸಂಸ್ಥಾಪಕ ಅಧ್ಯಕ್ಷರ ಆರೋಗ್ಯ ಸುಧಾರಣೆಗೆ ತಾಯಮ್ಮ ದೇವಿಗೆ ಪೂಜೆ

0
73

ಸುರಪುರ: ರಾಜ್ಯದಲ್ಲಿನ ಅಸಂಖ್ಯಾತ ಕನ್ನಡಪರ ಯುವಕರಿಗೆ ಮಾದರಿಯಾಗಿರು ನಮ್ಮ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪ ರೈ ಅಣ್ಣನವರು ಶೀಘ್ರ ಗುಣಮುಖರಾಗಲೆಂದು ದೇವಿಯಲ್ಲಿ ಪ್ರಾರ್ಥಿಸುವುದಾಗಿ ಸಂಘಟನೆ ಯಾದಗಿರಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ತುಳೇರ ಮಾತನಾಡಿದರು.
ನಂತರ ತಾಲೂಕು ಅಧ್ಯಕ್ಷ ರವಿಕುಮಾರ ನಾಯಕ ಬೈರಿಮಡ್ಡಿ ಮಾತನಾಡಿ, ನಮ್ಮ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷರಾದ ಎನ್.ಮುತ್ತಪ್ಪ ರೈ ಅವರು ಶೀಘ್ರ ಗುಣಮುಖರಾಗಲೆಂದು ತಾಯಮ್ಮ ದೇವಿಯಲ್ಲಿ ಜಯಕರ್ನಾಟಕ ತಾಲೂಕು ಘಟಕದಿಂದ ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು.

ನಗರದ ಕಬಾಡಗೇರಿಯ ತಾಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವ ಮೂಲಕ ಮಾತನಾಡಿ, ಕನ್ನಡ ಭಾಷೆ, ಜಲ, ನೆಲ, ಗಡಿಗೆ ಧಕ್ಕೆ ಬಂದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದಾರೆ. ಕಾವೇರಿ ವಿವಾದದ ಹೋಗೆನಕಲ್ ಹೋರಾಟದಲ್ಲಿ ಅವರ ಪಾತ್ರ ಸ್ಮರಣೀಯ. ಅವರ ದೂರದೃಷ್ಟಿಯ ಫಲವಾಗಿ ಇಂದು ರಾಜ್ಯದಲ್ಲಿ ಸಂಘಟನೆಯ ೪೦ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಸಂಘಟನೆಯನ್ನು ಬೆಳೆಸಿದ್ದಾರೆ.ತಮ್ಮ ಸ್ವಂತ ಹಣದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.

Contact Your\'s Advertisement; 9902492681

ಕ್ಯಾನ್ಸರ್‌ನಂತಹ ಮಾರಕ ರೋಗದಿಂದ ಬಳಲುತ್ತಿರುವ ಅವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಸಂಘಟನೆಯ ಸದಸ್ಯರು ಮತ್ತು ಜನರು ಪ್ರಾರ್ಥಿಸುತ್ತೆವೆ ಎಂದರು.ಇದೇ ಸಂದರ್ಭದಲ್ಲಿ ನೂರಾರು ಜನರಿಗೆ ಅನ್ನಸಂತರ್ಪಣೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ನಾಗಭೂಷಣ ಸ್ವಾಮೀಜಿ ಬಿಲ್ಲಂಕೊಂಡಿಮಠ ಹಾಗೂ ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ಕಬಾಡಗೇರಾ, ರಾಜು ದರಬಾರಿ, ಸೋಪಣ್ಣ ಹಳಿಸಗರ, ಮಲ್ಲಿಕಾರ್ಜುನ ಶ್ರೀನಿವಾಸಪುರ, ಶರಣಪ್ಪ ಡಿಬಾಸ್, ಯಲ್ಲಪ್ಪ ಕಲ್ಲೋಡಿ, ರಾಘವೇಂದ್ರ ಗೋಗಿಕರ್, ಬಸವರಾಜ ಪಾಟೀಲ ಶಾಖಾಪುರ, ರವಿ ಹೊಸಸಿದ್ದಾಪುರ, ದೇವುನಾಯಕ ಜಾಲಿಬೆಂಚಿ, ಹಣಮಂತ ಶಿಬಾರಬಂಡಿ,ವಾಸುದೇವ ನಾಯಕ,ದೇವು ನಾಯಕ ಕಬಾಡಗೇರಾ, ರಾಕೇಶ ಕಬಾಡಗೇರಾ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here