ಸ್ಮಾರಕಗಳ ರಕ್ಷಣೆ ನಮ್ಮೆಲರ ಹೊಣೆ: ಡಾ. ಶಂಭುಲಿಂಗ ವಾಣಿ

0
48

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ. ಎಸ್. ಇರಾಣಿ ಪದವಿ ಕಾಲೇಜು ಇತಿಹಾಸ ವಿಭಾಗ ಮತ್ತು ಪುರಾತತ್ವ ಸಂಗ್ರಾಹಲಯ ಮತ್ತು ಪುರಾತತ್ವ ಇಲಾಖೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ಪರಂಪರೆ ಕೂಟದ ಕಾರ್ಯ ಚಟುವಟಿಕೆಗಳನ್ನು ಕಲಬುರಗಿಯ ವಸ್ತು ಸಂಗ್ರಾಹಲಯದಲ್ಲಿ ಆಯೋಜಿಸಲಾಗಿತ್ತು. ಶಿವಪ್ರಕಾಶ ಪುರಾತತ್ವ ಸಹಾಯಕರು ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಮಾರಕಗಳ ಮಹತ್ವವನ್ನು ಹಾಗೂ ಅವುಗಳ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಶಂಭುಲಿಂಗ ವಾಣಿಯವರು ಸ್ಮಾರಕಗಳ ರಕ್ಷಣೆ ನಮ್ಮೆಲರ ಹೊಣೆ ಎಂದು ಹೇಳಿದರು. ಸ್ಮಾರಕಗಳು ನಮ್ಮ ಇತಿಹಾಸವನ್ನು ತಿಳಿದುಕೊಳ್ಳುವ ಒಂದು ಮಾರ್ಗ ಎಂದು ವಿದ್ಯಾರ್ಥಿಗಳಿಗೆ ತಿಳಿಪಡಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ ಕಾಲೇಜಿನ್ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಈಶ್ವರಯ್ಯ ಮಠರವರು ವಿದ್ಯಾರ್ಥಿಗಳಿಗೆ ಸ್ಮಾರಕಗಳ ಮಹತ್ವ ಕುರಿತು ತಿಳಿ ಹೇಳಿದರು. ವಸ್ತು ಸಂಗ್ರಾಹಲಯದ ಪ್ರಾಂಗಣವನ್ನು ವಿದ್ಯಾರ್ಥಿಗಳು ಸೂಚಿಗೊಳಿಸಿದರು.

ಇತಿಹಾಸ ವಿಭಾಗದ ಮುಖ್ಯಾತರಾದ ಶ್ರೀಮತಿ ಶಿವಲೀಲಾ ಧೋತ್ರೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕು. ಜಯಲಷ್ಮಿ ಪ್ರಾರ್ಥನೆ ಗೀತೆ ಪ್ರಸ್ತುತ ಪಡಿಸಿದರು. ಡಾ. ಪ್ರಾಣೇಶ್ ಎಸ್. ಅವರು ಸ್ವಾಗತ ಕೋರಿದರು. ಡಾ. ಲಿಂಗಬಸವ ಪಾಟೀಲ ಅವರು ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಯ್.ಕ್ಯೂ.ಎ. ಸಿ. ಸಂಯೋಜಕರಾದ ಡಾ. ಪ್ರೇಮಚಂದ ಚವ್ಹಾಣ, ದೈಹಿಕ ನಿರ್ದೇಶಕ ಶ್ರೀ ಸಂಕ್ರಪ್ಪ ಕೆ., ಶ್ರೀಮತಿ ಮಯೂರಿ ಚಿಂಚೋಳಿ, ಶ್ರೀಮತಿ ಗೀತಾ ಪಾಟೀಲ್, ಶ್ರೀಮತಿ ಶಶಿಕಲಾ, ಶ್ರೀಮತಿ ವಿಜಯಲಕ್ಷ್ಮಿ ವಾರದ, ಕು. ಮೇಘಾ, ಕು. ಬಬಿತಾ, ಕು. ಐಶ್ವರ್ಯಾ, ಕು. ರಾಜೇಶ್ವರಿ, ಡಾ. ಶ್ರೀದೇವಿ ಸರಡಗಿ, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗ ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here