ಯಶಸ್ವಿ ಇಂಟರ್ನ್ಯಾಷನಲ್ ಶಾಲೆಯ 2ನೇ ವರ್ಷದ ವಾರ್ಷಿಕೋತ್ಸವ

0
42

ಶಹಾಪುರ: ಇಂಟರ್ನ್ಯಾಷನಲ್ ಸ್ಕೂಲ್ ನ 2ನೇ ವರ್ಷದ ವಾರ್ಷಿಕೋತ್ಸವವನ್ನು ಅಂಬರೀಷ್ ಗೌಡ ದರ್ಶನಾಪುರ್ ಅವರು ಉದ್ಘಾಟಿಸಿದರು.

ಬೀರನೂರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಮಕ್ಕಳ ಶಿಕ್ಷಣ ವಿಕಾಸಕ್ಕೆ ಕೈಗೊಂಡಿರುವ ಶೈಕ್ಷಣಿಕ ಪ್ರಕಲ್ಪಗಳ ಸ್ಥಾಪನೆ ಒಳ್ಳೆಯ ನಿರ್ಧಾರವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ನಂತರ ಮಾತನಾಡಿದ ಡಾ. ಮಲ್ಲಾರಡ್ಡಿ ಬಿ. ಸಾಹುಕಾರ ಮಾತನಾಡುತ್ತಾ ಗ್ರಾಮದ ಈಚೆಗೆ ಯಶಸ್ವಿ ಇಂಟರ್ನ್ಯಾಷನಲ್ ಸ್ಕೂಲ್ ನ 2 ನೇಯ ವಾರ್ಷಿಕೋತ್ಸವ ಮಾಡುತ್ತಿರುವುದು ಒಳ್ಳೆಯ ಮಕ್ಕಳಲ್ಲಿ ಪ್ರತಿಭೆ ಗುರುತಿಸಿ ಅವುಗಳಿಗೆ ಅವರಿಗೆ ಬಹುಮಾನ ಕೊಡುವುದು ಸೂಕ್ತವಾದ ವೇದಿಕೆ ಕಲ್ಪಿಸಿ ಕೊಡುವುದು ಬಹಳ ಮುಖ್ಯವಾದ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಶ್ರೀ ಬಿ. ಎಸ್ ಮಾಲಿಪಾಟೀಲ್ ಆಡಳಿತಾದಿಕಾರಿಗಳು, ವಿಶ್ವಜ್ಯೋತಿ ಪ. ಪೂ. ವಿಜ್ಞಾನ ಮಹಾವಿದ್ಯಾಲಯ ಶಹಪುರ ಮಾತನಾಡಿˌ ಮಕ್ಕಳ ಸಂಪತ್ತಿಗೆ ಜ್ಞಾನಸಂಪತ್ತು ಹೆಚ್ಚಿಸಲು ರೇವಣ್ಣಸಿದ್ದರಡ್ಡಿ ಬಿ. ಸಾಹುಕಾರ ಅವರು ಹಳ್ಳಿ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಹುಟ್ಟುಹಾಕಿ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಸ್ಥಳೀಯ ಹಿರೇಮಠದ ವೇದಮೂರ್ತಿ ಸಿದ್ದರಾಮಯ್ಯ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸುತ್ತˌ”ಹಣ ಇದ್ದವರು ಜಗತ್ತಿನಲ್ಲಿ ಬಹಳಷ್ಟು ಜನರಿದ್ದಾರೆ. ಆದರೆ ಗ್ರಾಮೀಣ ಜನರ ಶಿಕ್ಷಣ ಸುಧಾರಿಸಬೇಕು ಎಂಬ ಗುಣ ಇದ್ದವರು ವಿರಳ. ಅಂಥವರಲ್ಲಿ ಈ ಕಾರ್ಯಕ್ರಮದ ಅಧ್ಯಕ್ಷರಾದ ರೇವಣ್ಣಸಿದ್ದರಡ್ಡಿ ಬಿ. ಸಾಹುಕಾರˌ ಯಶಸ್ವಿ ಇಂಟರ್ನ್ಯಾಷನಲ್ ಸ್ಕೂಲ್ ಬೀರನೂರ ಸ್ಥಾಪಕರು ಒಬ್ಬರಾಗಿದ್ದಾರೆ” ಎಂದು ಶ್ರೀಗಳು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶರಣು ಪಾಟೀಲ್, ಸ್ವಾಮಿ ವಿವೇಕಾನಂದ ಶಾಲೆ, ಶಹಪುರ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅತಿಥಿಗಳು ಬಿ.ಎಸ್. ಮಾಲಿ ಪಾಟೀಲ್, ಬಸವರಾಜ ರಡ್ಡಿ ಚೆನ್ನೂರ, ಕೌನ್ಸಿಲರ್ ಶಹಪೂರ್, ಸಾಹೇಬ್ ಗೌಡ ಮಾಲಿ ಪಾಟೀಲ್ ಅನಕಾಸೂಗುರ ಮತ್ತು ಶಾಂತಗೌಡ ಆಲ್ದಾಳ್ ಅವರು ವೇದಿಕೆಯಲಿದ್ದರು.

ಸಂಯೋಜಕರಾದ ಡಾ. ಮಲ್ಲಾರಡ್ಡಿ ಬಿ. ಸಾಹುಕಾರˌ ಪ್ರಶಾಂತ್ ಎಸ್. ಪಾಟೀಲ್ ಮತ್ತು ನಾಗರಾಜ್. ಎಸ್.ಪಾಟೀಲ್, ಜ್ಯೋತಿ.ಎಸ್. ಹರವಾಳ್ ಸ್ವಾಗತಿಸಿದರು. ಆನಂದ ಕುಮಾರ ಗೋಗಿˌ ವಾರ್ಷಿಕ ವರದಿ ಓದಿ, ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here