ಕಲಬುರಗಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಪ್ರಕಟಿಸಿದ್ದಾರೆ.
ನಗರದಲ್ಲಿ ಇಂದು ನಡೆದ ಕಸಾಪ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಕಾರಿ ಯಲ್ಲಿ ಚಿಕ್ಕಬಳ್ಳಾಪುರ ಹಾಗೂ ಹಾವೇರಿ ನಡುವೆ ಪೈಪೋಟಿ ಕಂಡು ಬಂತು. ಅಂತಿಮ ಕ್ಷಣದಲ್ಲಿ ಹಾವೇರಿಗೆ ಅವಕಾಶ ಒಲಿದು ಬಂದಿದೆ.
ಒಂದು ಗಂಟೆಗೆ ಅಧಿಕ ಕಾಲ ನಡೆದ ಸಭೆಯಲ್ಲಿ ಮಂಗಳೂರಿನ ಮೂಡಬಿದಿರೆಯಲ್ಲಿ ಸಮ್ಮೇಳನ ನಡೆಸುವ ಕುರಿತು ಪ್ರಸ್ಥಾಪ ಕೇಳುಬಂದಿತು. ಹಾವೇರಿ ಜಿಲ್ಲೆಯಾಗಿ ,೨೩ ವರ್ಷ ಕಳೆದರೂ ಒಂದು ಸಮ್ಮೇಳನ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಯಿತು ಎಂದು ಮನುಬಳಿಗಾರ್ ತಿಳಿಸಿದರು.
ಈ ವೇಳೆ ಕಸಾಪ ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ, ವ.ಚ.ಚನ್ನೇಗೌಡ, ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹೀರೇಮಠ ಸೇರಿದಂತೆ ಹಲವರಿದ್ದರು.