ಪುರುಷರ ಆಲೋಚನೆಗಳನ್ನೇ ಮಹಿಳಾ ಆಲೋಚನೆ ಎಂದು ಬಿಂಬಿಸುತ್ತಿರುವುದು ವಿಷಾದನೀಯ: ಡಾ. ಬಿ.ಟಿ. ಲಲಿತಾನಾಯಕ್

0
66

ಕಲಬುರಗಿ: ಪುರುಷ ಪ್ರಧಾನ ಸಮಾಜದಲ್ಲಿ ಪುರುಷರ ಆಲೋಚನೆಗಳನ್ನೇ ಮಹಿಳಾ ಆಲೋಚನೆಗಳು ಎಂದು ಬಿಂಬಿಸುವ ಕೆಲಸ ದೇಶದಲ್ಲಿಆಗುತ್ತಿದೆ.ಆದರೆ ೧೨ ನೇ ಶತಮಾನದಲ್ಲಿಯೇ ಶರಣರ ಸರಿಸಮನಾಗಿ ವಚನಗಳನ್ನು ರಚಿಸಿದ್ದಾರೆ ಎಂದು ಹಿರಿಯ ಸಾಹಿತಿ, ಚಿಂತಕಿಡಾ.ಬಿ.ಟಿ. ಲಲಿತಾ ನಾಯಕ್‌ಅವರು ಪ್ರತಿಪಾದಿಸಿದರು.

ಕಲಬುರ್ಗಿಯ ವಿಶ್ವ ವಿದ್ಯಾಲಯಆವರಣದಲ್ಲಿ ನಡೆಯುತ್ತಿರುವ ೮೫ ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನದಂದು ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿಏರ್ಪಡಿಸಲಾಗಿದ್ದ ’ಸ್ತ್ರೀ ಲೋಕ : ತಲ್ಲಣಗಳು’ ಗೋಷ್ಠಿಯಅಧ್ಯಕ್ಷತೆವಹಿಸಿ ’ಬದಲಾಗುತ್ತಿರುವ ಮಹಿಳಾ ಸಂವೇದನೆಗಳು’ ಕುರಿತ ವಿಚಾರ ಮಂಡಿಸಿದರು.

Contact Your\'s Advertisement; 9902492681

ಮಹಿಳೆಯರು ಇದೀಗ ಶೋಷಿತಕಾಲಘಟ್ಟದಿಂದ ಹೊರಬಂದಿದ್ದೇವೆ.ಮೀಸಲಾತಿಕೊಡಿಎಂದು ಕೇಳುವ ಬದಲು, ಎಲ್ಲದಕ್ಕೂ ನಾವು ಶಕ್ತರಾಗಿದ್ದೇವೆಎಂಬುದನ್ನು ಸಾರಿ ಹೇಳಬೇಕಿದೆ.ಊಟ, ಬಟ್ಟೆ, ಧಾರ್ಮಿಕಆಚರಣೆ ನಮ್ಮಆಯ್ಕೆ.ಇದನ್ನು ನಮ್ಮ ಸಂವಿಧಾನವೇ ನಮಗೆ ಕೊಟ್ಟಿದೆ.ಆದರೆಅದು ಬೇಡ, ಇದು ಬೇಡಎಂದು ನಮ್ಮ ಮೇಲೆ ಹೇರುವುದನ್ನು ನಾವು ಪ್ರತಿಭಟಿಸಬೇಕಿದೆ.ವಚನಕಾರ್ತಿಅಕ್ಕಮಹಾದೇವಿಯವರತರ್ಕವನ್ನು ಇದೀಗ ಮರುಚಿಂತನೆ ಮಾಡುವಅಗತ್ಯ ಬಂದಿದೆ.ದೇಶದಲ್ಲಿಅನುಭವಿಸುವ ತಲ್ಲಣಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ನಾವು ಆಲೋಚಿಸಬೇಕು.೧೨ ನೇ ಶತಮಾನದಲ್ಲಿ ಶರಣರು ಪುರೋಹಿತ ಶಾಹಿ, ವೈದಿಕ ಶಾಹಿಯನ್ನು ಧಿಕ್ಕರಿಸಿ ತಮ್ಮತನವನ್ನು ಮೆರೆದರು.ಈ ಕಾಲದಲ್ಲಿಯೇ ಮಹಿಳೆಯರು ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿತಮ್ಮ ಪ್ರಾತಿನಿಧ್ಯವನ್ನು ಸಾಬೀತುಪಡಿಸಿದ್ದಾರೆ.ಇದೀಗ ನಮ್ಮನ್ನು ಆಳುವ ಸರ್ಕಾರಗಳು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನುಚಿಂತಿಸುವಅಗತ್ಯವಿದೆ.

ಈ ಚಿಂತನೆಯಲ್ಲಿ ಮಹಿಳೆಯರೂ ಚಿಂತನೆಯ ಭಾಗವಾಗಬೇಕಿದೆ.ಮಹಿಳೆಯರನ್ನು ವ್ಯಾವಹಾರಿಕವಾಗಿ ಬಿಂಬಿಸುತ್ತಿರುವುದು ಸರಿಯಲ್ಲ.ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಜಾತಿ ಬೇಧ, ಲಿಂಗ ಬೇಧ ಮರೆತು ಮಹಿಳೆಯರೂ ಧುಮುಕಿದ್ದರು.ನಮ್ಮನ್ನು ನಾವು ಘನತೆಯಿಂದ ಬದುಕುವರೀತಿ ಬಗ್ಗೆ ಚಿಂತನೆ ಮಾಡಬೇಕು.ಆದರೆಅಂತಹ ಶಿಕ್ಷಣವನ್ನು ನಾವು ಕಲಿಯುತ್ತಲೇಇಲ್ಲ.ರಾಜ್ಯದಲ್ಲಿ ಮೌಢ್ಯ ವಿರೋಧಿ ಕಾನೂನು ರಚಿಸಿ ಸರ್ಕಾರಉತ್ತಮಕಾರ್ಯ ಮಾಡಿದೆ. ಆದರೆ ಈ ಕಾಯ್ದೆ ವ್ಯಾಪ್ತಿಗೆಜ್ಯೋತಿಷ್ಯ ಹಾಗೂ ವಾಸ್ತುವನ್ನೂ ಸೇರಿಸಲಿ ಎಂದುಡಾ.ಬಿ.ಟಿ. ಲಲಿತಾ ನಾಯಕ್ ಒತ್ತಾಯಿಸಿದರು.

ಗೋಷ್ಠಿಯಲ್ಲಿಪ್ರೊ. ತಾರಿಣಿ ಶುಭದಾಯಿನಿ ಅವರು ಮಹಿಳೆ ಮತ್ತು ಸೃಜನಶೀಲತೆ ಕುರಿತು ಹಾಗೂ ಡಾ. ಆರ್.ಪೂರ್ಣಿಮಾಅವರು ಮಹಿಳೆ ಮತ್ತು ಪ್ರಭುತ್ವಕುರಿತು ವಿಚಾರ ಮಂಡಿಸಿದರು.ಡಾ. ಎಸ್.ಪಿ.ಉಮಾದೇವಿ ಸ್ವಾಗತಿಸಿದರೆ, ರಮಾಕುಮಾರಿ ನಿರೂಪಿಸಿದರು, ಮಂಗಳಾ ಮೇಟಗುಡ್ಡ ವಂದಿಸಿದರು.ರಮಾ ನಂದೂರಕರ ಗೋಷ್ಠಿ ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here