ಗ್ರಾಮ ದೇವತೆ ಜಾತ್ರೆಯಲ್ಲಿ ಕುರಿ-ಕೋಣ ಬಲಿ ತಡೆಯಲು ದಂ.ಸ.ಸ. ಒತ್ತಾಯ

0
48

ಸುರಪುರ: ಹುಣಸಗಿ ಪೋಲಿಸ್ ಠಾಣಾ ವ್ಯಾಪ್ತಿಯ ಕಲ್ಲದೇವನಹಳ್ಳಿ ಮತ್ತು ಅರಕೇರಾ(ಜೆ) ಗ್ರಾಮಗಳಲ್ಲಿ ಫೆ೧೭ ಮತ್ತು ೧೮ ರಂದು ನಡೆಯಲಿರುವ ಗ್ರಾಮ ದೇವತೆ ದ್ಯಾವಮ್ಮ, ಮರೆಮ್ಮ, ಕೆಂಚಮ್ಮ ಜಾತ್ರೆ ಪ್ರಯುಕ್ತ ಕುರಿ-ಕೋಣ ಬಲಿ ನೀಡುವದನ್ನು ತಡೆಹಿಡಿಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಒತ್ತಾಯಿಸಿದೆ.

ಎರಡು ದಿನಗಳವರೆಗೆ ನಡೆಯಲಿರುವ ಈ ಜಾತ್ರೆಯಲ್ಲಿ ದಲಿತರನ್ನು ಉಪಯೋಗಿಸಿಕೊಂಡು ಮೂಢನಬಿಕೆ ಹಾಗೂ ಕೆಲವೊಂದು ಅನಿಷ್ಠ ಪದ್ಧತಿಯನ್ನು ಆಚರಿಸಲಾಗುವುದು ಇದನ್ನು ತಡೆಗಟ್ಟಲು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳಂದು ಪೋಲಿಸ್ ಬಂದೋಬಸ್ತು ಕೈಗೊಂಡು ಕುರಿ, ಕೋಣ ಬಲಿ ನಡೆಯದಂತೆ ತಡೆಗಟ್ಟಬೇಕು ಹಾಗೂ ಯಾವುದೇ ಗಲಭೆಯಾಗದಂತೆ ಬಿಗಿ ಬಂದೋಬಸ್ತು ಒದಗಿಸಬೇಕು ಎಂದು ಸಮಿತಿಯ ಮುಖಂಡರು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಮನವಿ ಪತ್ರವನ್ನು ಉಪ ವಿಭಾಗದ ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ ಅವರಿಗೆ ಸಲ್ಲಿಸಲಾಯಿತು, ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ, ತಾಲೂಕು ಸಂಚಾಲಕ ಶಿವಶಂಕರ ಹೊಸಮನಿ, ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ತಳವಾರಗೇರಿ, ಹುಣಸಗಿ ತಾಲೂಕು ಸಂಚಾಲಕ ಶರಣಪ್ಪ ತೆಗ್ಗೆಳ್ಳಿ ಮತ್ತು ಸಂಘಟನಾ ಸಂಚಾಲಕ ರೇವಣಸಿದ್ದ ಬಲಶೆಟ್ಟಿಹಾಳ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here