ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜನ ಸಂಪರ್ಕ ಸಭೆ:ಎಸ್.ಪಿ ಭಾಗಿ

0
112

ಸುರಪುರ: ಸಾರ್ವಜನಿಕರು ತಮ್ಮ ಯಾವುದೆ ಸಮಸ್ಯೆಗಳ ಬಗ್ಗೆ ದೂರುಗಳಿದ್ದರೆ ನೇರವಾಗಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ,ಯಾವುದೆ ಕಾರಣಕ್ಕೂ ಮದ್ಯವರ್ತಿಗಳ ಬಳಿಗೆ ಹೋಗಬೇಡಿ ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೀನವಾನೆ ತಿಳಿಸಿದರು.

ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಮಾಡಲು ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಪೊಲೀಸರು ಜನಸ್ನೇಹಿಯಾಗಿದ್ದು ಅಮಾಯಕ ಜನರಲ್ಲಿಯ ಭಯವನ್ನು ದೂರಮಾಡಲು ಈ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.

Contact Your\'s Advertisement; 9902492681

ನಗರದಲ್ಲಿರುವ ಟ್ರಾಫಿಕ್ ಸಮಸ್ಯೆ, ಅಕ್ರಮ ಮರಳು ಸಾಕಾಣಿಕೆ, ಮಟಕಾ, ಇಸ್ಪೀಟು ಇನ್ನಿತರ ಅಕ್ರಮ ಚಟುವಟಿಕೆಗಳನ್ನು ಹತ್ತಿಕಲು ಕ್ರಮ ಕೈಗೊಳ್ಳಬೇಕು ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಜನರು ಸಲಹೆಗಳನ್ನು ನೀಡಿದರು.ಇದಕ್ಕೆ ಎಸ್.ಪಿ ಋಷಿಕೇಶ ಭಗವಾನ ಸೋನವಾನೆ ಮಾತನಾಡಿ,ಟ್ರಾಫಿಕ್ ಸiಸ್ಯೆ ದೂರಮಾಡಲು ಕ್ರಮ ಕೈಗೊಳ್ಳುವುದಾಗಿ ಹಾಗು ಟ್ರಾಫಿಕ್ ನಿಯಮಗಳನ್ನು ಪಾಲಿಸಲು ತಿಳಿಸಿದರು.

ಸಾರ್ವಜನಿಕರು ಅಕ್ರಮ ಚಟುವಟಿಕೆಗಳನ್ನು ನಡೆಸುವವರ ಮಾಹಿತಿ ನೀಡಿದರೆ ಅಂತವರ ವಿರುಧ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇಷ್ಟೆಲ್ಲಾ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಇದ್ದರುಸಹ ಸಾರ್ವಜನಿಕರಿಂದ ನಿಖರ ಮಾಹಿತಿ ಕೊಡಿ ಎಂದು ತಿಳಿಸಿದ್ದಕ್ಕೆ ಜನರು ಬೇಸರ ವ್ಯಕ್ತಪಡಿಸಿದರು. ಇತ್ತೀಚಿಗೆ ಆಗಮಿಸಿರುವ ಡಿವೈಎಸ್‌ಪಿ ವೆಂಕಟೇಶ ಹೊಗಬಂಡಿಯವರು ತೆಗೆದುಕೊಂಡಿರುವ ಕಠಿಣ ಕ್ರಮಗಳಿಂದಾಗಿ ತಾಲೂಕಿನಲ್ಲಿಯ ಮಟಕಾ, ಇಸ್ಪೀಟ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ದಿಟ್ಟ ಕ್ರಮಕ್ಕೆ ಮುಂದಾಗಿರುವುದರಿಂದ ಸ್ವಲ್ಪಮಟ್ಟಿಗೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬೀಳುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿರುವುದು ಕಂಡುಬಂತು.ಜನಸಂಪರ್ಕ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸದಿರುವುದರಿಂದ ಸಭೆಯು ಸಪ್ಪೆ ಎನಿಸಿತು.

ಆರಕ್ಷಕ ನೀರಿಕ್ಷಕ ಆನಂದರಾವ್, ಪಿಎಸ್‌ಐ ಶರಣಪ್ಪ ಹವಾಲ್ದಾರ, ವೆಂಕೋಬ ದೊರೆ, ಚಂದ್ರಶೇಖರ ಜೆಡಿಮರಳ, ರಾಹುಲ್ ಹುಲಿಮನಿ, ಉಸ್ತಾದ್ ವಜಾಹತ್ ಹುಸೇನ್, ಭೀಮಾಶಂಕರ ಬಿಲ್ಲವ್, ಭೀಮರಾಯ ಸಿಂದಗಿರಿ, ಶರಣಪ್ಪ, ಅಪ್ಸರ್ ಹುಸೇನ್, ಖಾಲೀದ್ ಅಹ್ಮದ್ ತಾಳಿಕೋಟಿ,ದಾನಪ್ಪ ಲಕ್ಷ್ಮೀಪುರ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here