ಸುರಪುರ: ಸಗರನಾಡಿನ ಈ ಭಾಗದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಹಾಗೂ ಸಾಧನೆಮಾಡುವ ಅನೇಕ ಪ್ರತಿಭೆಗಳಿದ್ದು ಅಂತಹ ಪ್ರತಿಭೆಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ ಎಂದು ತಾಲೂಕಾ ವೀರಶೈವ ಸಮಿತಿಯ ಅಧ್ಯಕ್ಷ ಸುರೇಶ ಆರ್ ಸಜ್ಜನ್ ಹೇಳಿದರು.
ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಬಸವೇಶ್ವರ ಕಾಲೇಜಿನ ವತಿಯಿಂದ ಆಯೋಜಿಸಿದ್ದ ಸಂಸ್ಥೆಯ ೪ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪಿ.ಯು.ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಭಾಗದ ಶೈಕ್ಷಣಿಕ ಪ್ರಗತಿಯಲ್ಲಿ ಸರಕಾರಿ ಶಾಲಾ ಕಾಲೇಜುಗಳ ಜೋತೆಗೆ ಖಾಸಗಿ ಶಾಲಾ ಕಾಲೇಜುಗಳ ಕೊಡುಗೆ ಕೂಡ ಮಹತ್ತರದಾಗಿದ್ದು, ಆ ದಿಶೇಯಲ್ಲಿ ಈ ಭಾಗದಲ್ಲಿ ನಿರಂತರವಾಗಿ ಶೈಕ್ಷಣಿಕ ಕ್ರಾಂತಿ ನಡೆಯಬೇಕಿದೆ, ಶಿಕ್ಷಣದಿಂದ ಮಾತ್ರ ವ್ಯಕ್ತಿ, ಸಮಾಜ, ಸಮುದಾಯ, ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಆ ದಿಶೇಯಲ್ಲಿ ಶೈಕ್ಷಣಿಕ ಪ್ರಗತಿ ಈ ಭಾಗದಲ್ಲಿ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ ಕಳೆದ ೩-೪ ವರ್ಷಗಳ ಅವಧಿಯಲ್ಲಿ ಬಸವಪ್ರಭು ವಿದ್ಯಾವರ್ಧಕ ಸಂಸ್ಥೆಯ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳನ್ನು ಈ ಭಾಗದಲ್ಲಿ ಸ್ಥಾಪಿಸಿ ಆ ಮೂಲಕ ಶೈಕ್ಷಣಿಕವಾಗಿ ಅಳಿಲು ಸೇವೆ ಮಾಡುತ್ತಿದ್ದೆವೆ ಎಂದರು.
ಕೆಂಭಾವಿ ಹಿರೇಮಠದ ಪೂಜ್ಯ ಶ್ರೀ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸಗರನಾಡು ಪ್ರೌಢ ಶಾಲೆ ಪೇಠ ಅಮ್ಮಾಪೂರ ಪ್ರಧಾನ ಗುರುಗಳಾದ ಚಂದಪ್ಪ ಯಾದವ, ಸುರಪುರ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಜಗದೀಶ ಪಾಟೀಲ್ ಸುಗೂರು ವೇದಿಕೆಮೇಲಿದ್ದರು. ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ ವಾರ್ಷಿಕವರದಿ ವಾಚಿಸಿದರು, ಬಿರೇಶಕುಮಾರ ದೇವತಕಲ್ ನಿರೂಪಿಸಿದರು, ರುದ್ರಪ್ಪ ಕೆಂಭಾವಿ ಸ್ವಾಗತಿಸಿದರು, ಬಲಭೀಮ ಪಾಟೀಲ್ ವಂದಿಸಿದರು, ಭಾರತಿ ಪೂಜಾರಿ ಪ್ರಾರ್ಥಿಸಿದರು.