ಶಾಲಾ ದಾಖಲಾತಿ ಹೆಚ್ಚಿಸಲು ಸಮುದಾಯದವರು ಮುಂದಾಗುವುದು ಶ್ಲಾಘನೀಯ: ನಾಗರತ್ನ ಓಲೇಕಾರ್

0
103

ಸುರಪುರ: ಶಾಲಾಭಿವೃದ್ಧಿ ಸಮಿತಿಯು ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ ಶಾಲೆಯ ಪ್ರತಿಯೊಂದು ಕಾರ್ಯಕ್ರಮವನ್ನು ಸರ್ಕಾರದ ಅನುದಾನಕ್ಕೆ ಕಾಯದೆ ತಮ್ಮ ವೈಯಕ್ತಿಕ ಖರ್ಚಿನಿಂದ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಮೆಚ್ಚುಗೆ ಪಡುವಂಥದ್ದು ಜೊತೆಗೆ ಈ ಶಾಲೆಯ ದಾಖಲಾತಿ ಹೆಚ್ಚಿಸಲು ಸಮುದಾಯದವರು ಮತ್ತು ಪಾಲಕರು ಸೇರಿ ಉರ್ದು ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸಿದ್ದು ಕೂಡ ಬೇರೆ ಶಾಲೆಗಳಿಗೆ ಮಾದರಿಯಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ನಾಗರತ್ನಾ ಓಲೆಕಾರ್ ಮಾತನಾಡಿದರು.

ನಗರದ ದರ್ಬಾರ ಉರ್ದು ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಕಲಿಕೆಯಲ್ಲಿ ಶಾಲೆಯೊಂದಿಗೆ ಅಭಿವೃದ್ಧಿ ಸಮಿತಿ ಸಹಕರಿಸಿದರೆ ಶಾಲೆಯ ಫಲಿತಾಂಷವು ವೃದ್ಧಿಯಾಗುವುದಲ್ಲದೆ ಮಕ್ಕಳು ಸಾಧನೆಮಾಡಲು ಸಹಕಾರಿಯಾಗುತ್ತೆ.ಈ ಉರ್ದು ಶಾಲಾ ಅಭಿವೃದ್ಧಿ ಸಮಿತಯ ಕಾರ್ಯವನ್ನು ಶ್ಲಾಘಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಅನೇಕ ದೇಶಭಕ್ತಿ ಗೀತೆಗಳು ಹಾಗೂ ಶಿಕ್ಷಣದ ಮಹತ್ವ ಕುರಿತು ಕಿರು ನಾಟಕಗಳನ್ನು ಪ್ರದರ್ಶಿಸಿದರು.

ಪ್ರಮುಖರಾದ ಅಬ್ದುಲ್ ಗಫಾರ್ ನಗನೂರಿ, ನಗರಸಭೆ ಮಾಜಿ ಅಧ್ಯಕ್ಷರು ಮಹಿಬೂಬ್ ಒಂಟಿ, ನಗರಸಭೆ ಸದಸ್ಯರಾದ ಖಮರುದ್ದೀನ್ ನಾರಾಯಣಪೆಟ್, ಖಾಜಾ ಖಲೀಲ್ ಅಹ್ಮದ್ ಅರಕೇರಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೋಮರೆಡ್ಡಿ ಮಂಗಿಹಾಳ, ಬಿಅರಪಿ ಖಾದರ್ ಪಟೇಲ್, ಆರ್ ಕೆ ಕೋಡಿಹಾಳ, ಅಬ್ದುಲ್ ಮಜೀದ್, ಇಸಾಕ್ ಶಕೀಲ್ ಅಹ್ಮದ್, ಎಸ್ಡಿಎಂಸಿ ಅಧ್ಯಕ್ಷರು ಆಬಿದ್ ಹುಸೇನ್ ಪಗಡಿ, ಶಿಕ್ಷಕರಾದ ಫರೀದಾಬೇಗಂ, ನೂರ್ ಜಹಾನ್, ಘನಲಿಂಗಯ್ಯ, ಸಾಜಿದಾ ಬೇಗಂ, ಕೌಸರ್ ಬಾನು, ಶಬಾನಾ ಯೂನೂಸ್ ಬೇಪಾರಿ, ಎಪಿಎಫ್ನ ಅಜೀಮ್ ಫರೀದಿ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here