ಸಮಾನತೆ ಕ್ರಾಂತಿಯ ಹರಿಕಾರರು ಕಾಯಕದ ಶರಣರು: ರಾಜು ಕುಂಬಾರ

0
80

ಸುರಪುರ: ೧೨ನೇ ಶತಮಾನ ಜಗತ್ತಿನ ಇತಿಹಾಸದ ಸುವರ್ಣ ಯುಗವಾಗಿದ್ದು ಭಕ್ತಿ ಮತ್ತು ಸಮಾನತೆಯ ಬಹುದೊಡ್ಡ ಕ್ರಾಂತಿಯಿಂದಾಗಿ ಬಸವಾದಿ ಶರಣರು ಜಗತ್ತಿಗೆ ಇಂದಿಗೂ ಪ್ರಾಥಸ್ಮರಣಿಯರಾಗಿದ್ದಾರೆ.ಸಮಾನತೆ ಕ್ರಾಂತಿಯ ಹರಿಕಾರರು ಕಾಯಕದ ಶರಣರು ಎಂದು ಪತ್ರಕರ್ತ ರಾಜು ಕುಂಬಾರ ಮಾತನಾಡಿದರು.

ನಗರದ ತಹಸೀಲ್ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಾಯಕದ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾದಾರ ಚನ್ನಯ್ಯ,ಡೋಹರಾ ಕಕ್ಕಯ್ಯ,ಸಮಗಾರ ಹರಳಯ್ಯ,ಮಾದಾರ ಧೂಳಯ್ಯ ಹಾಗು ಉರಿಲಿಂಗ ಪೆದ್ದಿ ಶರಣರ ಬಗ್ಗೆ ಮಾತನಾಡಿ,ಕಲ್ಯಾಣದಲ್ಲಿ ಹರಳಯ್ಯನವರ ಮಗನಿಗು ಮತ್ತು ಮಧುವರಸರ ಮಗಳಿಗು ವಿವಾಹ ಮಾಡಿಸಿದ್ದರಿಂದ ಕಲ್ಯಾಣದಲ್ಲಿ ಸಮಾನತೆಯ ಕ್ರಾಂತಿ ನಡೆಯಿತು.ಅದು ಇಂದಿಗೂ ಅಂತರ್ಜಾತಿ ವಿವಾಹಗಳಿಗೆ ಪ್ರೇರಣೆಯಾಗಿದೆ.

Contact Your\'s Advertisement; 9902492681

ಅನುಭವ ಮಂಟಪದಲ್ಲಿದ್ದ ಎಲ್ಲಾ ಶರಣರು ಕಾಯಕದ ಶರಣಾರಾಗಿದ್ದಾರೆ.ಆದ್ದರಿಂದ ಕೇವಲ ಐದು ಜನ ಶರಣರನ್ನು ಕಾಯಕದ ಶರಣರೆಂದು ಜಯಂತಿ ಮಾಡುವ ಬದಲು ಎಲ್ಲಾ ಶರಣರ ಜಯಂತಿ ಎಂದು ಆಚರಿಸಿದರೆ ಅರ್ಥಪೂರ್ಣವಾಗಿರಲಿದೆ ಎಂದರು.ವಚನಗಳು ಎಲ್ಲರ ಬದುಕಿನ ದಾರಿದೀಪಗಳಾಗಿದ್ದು,ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ವಚನಗಳ ಕೃತಿಗಳನ್ನಿಟ್ಟು ನಿತ್ಯವು ಒಂದು ವಚನ ಓದುವ ಮೂಲಕ ಬದುಕು ಹಸನಾಗಿಸಿಕೊಳ್ಳುವಂತೆ ತಿಳಿಸಿದರು.

ನಂತರ ಮುಖ್ಯ ಅತಿಥಿಗಳಾಗಿದ್ದ ವಕೀಲ ಎಂ.ಎಸ್.ಹಿರೇಮಠ ಮಾತನಾಡಿ,ಬಸವಾದಿ ಶರಣರ ವಿಚಾರಗಳು ಎಲ್ಲರಿಗೂ ಮಾದರಿಯಾಗಿವೆ.ಅವುಗಳ ಆಧಾರದಲ್ಲಿಯೇ ರಚನೆಗೊಂಡಿರುವ ಭಾರತದ ಸಂವಿಧಾನ ಎಲ್ಲಾ ಧರ್ಮಗ್ರಂಥಗಳಿಗಿಂತ ಶ್ರೇಷ್ಠವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷ ನಂದಕುಮಾರ ಕನ್ನೆಳ್ಳಿ,ಪಂಡೀತ ನಿಂಬೂರ ಮಾತನಾಡಿ,ಅಧಿಕಾರಿಗಳ ಗೈರಿಗೆ ಬೇಸರ ವ್ಯಕ್ತಪಡಿಸಿದರು ಹಾಗು ದಲಿತ ವಚನಕಾರರೆಂದು ಸರಕಾರ ವಚನಕಾರರಲ್ಲಿ ಭೇದ ಮಾಡುತ್ತಿದೆ,ಇದು ಸರಿಯಲ್ಲ ಎಲ್ಲ ವಚನಕಾರರನ್ನು ಶರಣರನ್ನಾಗಿ ಕಂಡು ಎಲ್ಲಾ ಶರಣರ ಜಯಂತಿ ಒಟ್ಟಾಗಿ ಆಚರಿಸುವಂತೆ ಸರಕಾರಕ್ಕೆ ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ನಿಂಗಣ್ಣ ಬಿರಾದಾರ ಮಾತನಾಡಿ,ಸತತ ಮೂರು ದಿನಗಳ ಜಯಂತಿಗೂ ಎಲ್ಲಾ ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ,ನೋಟಿಸ್ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ನಂತರ ಶರಣರ ವಚನಗಳ ವಿಚಾರವನ್ನು ಬದುಕಲ್ಲಿ ಎಲ್ಲರು ಅಳವಡಿಸಿಕೊಳ್ಳೋಣ ಎಂದರು.

ಶರಣಬಸವ ಅನಕಸುಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು,ವಕೀಲ ಯಲ್ಲಪ್ಪ ಹುಲಕಲ್ ನಿರೂಪಿಸಿ ಸ್ವಾಗತಿಸಿದರು,ಮಲ್ಲಿಕಾರ್ಜುನ ಮಂದಾಲೆ ವಂದಿಸಿದರು.ಚಂದ್ರಶೇಖರ ಕವಡಿಮಟ್ಟಿ,ನಿಂಗಣ್ಣ ಗೋನಾಲ,ಭೀಮಣ್ಣ ಬೋನಾಳ,ಬಸವರಾಜ ಮುಷ್ಠಳ್ಳಿ,ಚಂದ್ರು ದೀವಳಗುಡ್ಡ,ನಾಗರಾಜ ಓಕಳಿ,ಬಸವರಾಜ ಲಕ್ಷ್ಮೀಪುರ,ಭೀಮಣ್ಣ ದೀವಳಗುಡ್ಡ,ಮಲ್ಲು ಹೆಮ್ಮಡಗಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here