ಓದಿದರೆ ಸಾಳದು ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಸಾಧ್ಯ: ಸಾಹುಕಾರ

0
93

ಸುರಪುರ: ಬಹಳಷ್ಟು ವಿದ್ಯಾರ್ಥಿಗಳು ಬರಿ ಓದುವುದರೆ ಸಾಕು ಎಂದುಕೊಳ್ಳುತ್ತಾರೆ ಅದರಿಂದ ಯಶಸ್ಸು ಸಾಧ್ಯವಾಗುವುದಿಲ್ಲ ನಿಜಾವದ ಯಶಸ್ಸು ನೀವು ಕಲಿತಿರುವ ವಿದ್ಯಯನ್ನು ನಿಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಕೊಂಡಾಗ ಮಾತ್ರ ಯಶಸ್ಸು ದೊರುಕುತ್ತದೆ ಎಂದು ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹುಕಾರ ಹೇಳಿದರು.

ನಗರದ ಎನ್ ಎನ್ ಶೆಟ್ಟಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಸಸಿಗೆ ನೀರೂಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ದಿನಮಾನದಲ್ಲಿ ಮೌಲ್ಯಾಧಾರಿತ ಶಿಕ್ಷಣವು ದೊರಕುವುದು ಕಷ್ಟವಾಗಿದೆ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಾಮಾಜಿಕ ಮೌಲ್ಯಗಳ ಕುರಿತು ತಿಳಿದುಕೊಳ್ಳುವ ಅವಷ್ಯಕತೆ ಇದೆ ಪರೀಕ್ಷೆಗಳು ಹತ್ತಿರ ಬರುತ್ತಿವೆ ಜನ್ನಾಗಿ ಓದಿ ಕಾಲೇಜಿಗೆ ಮತ್ತು ತಾಲೂಕಿನ ಕೀರ್ತಿ ಹೆಚ್ಚಿಸುವತ್ತ ಗಮನ ಹರಿಸಬೇಕು ಸ್ವಲ್ಪದಿನದ ಮಟ್ಟಿಗೆ ಮೊಬೈಲ ಟಿವಿಗಳತ್ತ ಗಮನಹರಸಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

Contact Your\'s Advertisement; 9902492681

ಸಂಸ್ಥೆಯ ಅಧ್ಯಕ್ಷ ಬೂದೆಪ್ಪ, ಕಾರ್ಯದರ್ಶಿಗಳಾದ ತಿರುಪತಿ ಏನ್ ಶೆಟ್ಟಿ ಮಾತನಾಡಿದರು ಭೀಮರಾಯ ಎಸ್ ಚಟ್ನಳ್ಳಿ, ಸಿದ್ದಪ್ಪ ದೇಸಾಯಿ ಹಾಗೂ ಸಾಯಿಬಣ್ಣ ಪುರ್ಲೆ ವೇದಿಕೆಯಲ್ಲಿದ್ದರು ಲಕ್ಷ್ಮಿ ಬಿ ಶೆಟ್ಟಿ, ಚರಿಷ್ಮಾ, ಗುರುರಾಜ ಕುಲಕರ್ಣಿ, ರಾಜಶೇಖರ್ ದೇಸಾಯಿಮಠ, ರಾಜೇಶ್ ಗೌಡ, ಕಾಳಪ್ಪ ಪತ್ತಾರ್, ಶಿವಕುಮಾರ್, ಹಳ್ಳೆಪ್ಪ ಲಿಂಗದಳ್ಳಿ, ನಾಗರಾಜ ಇದ್ದರು ನಮಿತಾ ಠಾಕೂರ್ ಕಾರ್ಯಕ್ರಮವನ್ನು ನಿರೂಪಿಸಿದರು ನಾಗಲಕ್ಷ್ಮಿ ವಂದಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here