ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು: ನಾನಾಗೌಡ ಹಿಪ್ಪರಗಿ

0
98

ಶಹಾಬಾದ: ಸರಕಾರ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡುವ ದೃಷ್ಠಿಯಿಂದ ಸರಕಾರ ಉಚಿತ ವಸತಿ ನಿಲಯಗಳನ್ನು ಸ್ಥಾಪಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿವೆ. ಪೋಷಕರು ತಮ್ಮ ಮಕ್ಕಳಿಗೆ ವಸತಿ ನಿಲಯಕ್ಕೆ ಕಳುಹಿಸಿ, ಸುಮ್ಮನಾಗದೆ, ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕೆಂದು ಕೂಡಲ ಸಂಗಮ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ನಾನಾಗೌಡ ಹಿಪ್ಪರಗಿ ಸಲಹೆ ನೀಡಿದರು.

ಅವರು ನಗರದ ಹನುಮಾನ ನಗರದಲ್ಲಿರುವ ಮ್ಯಾಟ್ರಿಕ್ ಪೂರ್ವ ಬಾಲಕ ವಸತಿ ನಿಲಯದಲ್ಲಿ ವಸತಿ ನಿಲಯದ ವತಿಯಿಂದ ಆಯೋಜಿಸಲಾದ ವಿದ್ಯಾರ್ಥಿಗಳ, ಪೋಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಮಕ್ಕಳ ವಿದ್ಯಾಭ್ಯಾಸ, ಶಾಲೆಗೆ ಹೋಗುತ್ತಿರುವ ಬಗ್ಗೆ, ಮಕ್ಕಳ ಊಟ, ತಿಂಡಿಗಳ ಬಗ್ಗೆ ಗಮನ ಹರಿಸುವದು ಸಹ ಪೋಷಕರ ಕರ್ತವ್ಯವಾಗಿದೆ. ಸರಕಾರ ಬಡಜನರಿಗೆ ಒಳ್ಳೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಸ್ಥಾಪಿಸಿರುವ ವಸತಿ ನಿಲದ ಲಾಭವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಉಪನ್ಯಾಸಕ ಪೀರ ಪಾಶಾ ಮಾತನಾಡಿ, ಮಕ್ಕಳಿಗೆ ವಸತಿ ನಿಲಯಕ್ಕೆ ದಾಖಲಾತಿ ಮಾಡಿದರೇ ನಮ್ಮ ಕರ್ತವ್ಯ ಮುಗಿಯಿತು ಎಂದು ಕೈಚೆಲ್ಲಿ ಪಾಲಕರು ಕೂಡದಿರಿ.ಮಕ್ಕಳ ವಿದ್ಯಾಭ್ಯಾಸ, ಅವರ ಚಲನ,ವಲನಗಳ ಬಗ್ಗೆ ಆಗಾಗ ಮಾಹಿತಿ ಪಡೆದುಕೊಳ್ಳಿ. ನಿಮ್ಮ ಮಕ್ಕಳ ಬಗ್ಗೆ ನಿಗಾವಹಿಸಿ. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿ ಮಾಡುವ ನಿಟ್ಟಿನಲ್ಲಿ ಪಾಲಕರು ಲಕ್ಷ್ಯ ವಹಿಸಬೇಕು.ಅಲ್ಲದೇ ಮಕ್ಕಳ ಕೈಯಲ್ಲಿ ಮೋಬೈಲ್ ಫೋನ್, ಹಣ ನೀಡಿ ಅವರನ್ನು ಹಾಳು ಮಾಡದೇ, ಅವರನ್ನು ಕಲಿಕೆಯಲ್ಲಿ ಮುಂದುವರೆಯುಂಥ ವಾತಾವರಣವನ್ನು ನಿರ್ಮಾಣ ಮಾಡಿ. ಆಗ ಮಾತ್ರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಲು ಸಾಧ್ಯ ಎಂದು ಹೇಳಿದರು.

ಉಪನ್ಯಾಸಕಗುರುಲಿಂಗ ತುಂಗಳ, ಪತ್ರಕರ್ತ ಕೆ.ರಮೇಶ ಭಟ್ಟ ಮಾತನಾಡಿದರು. ಮೇಲ್ವಿಚಾರಕ ರವಿಕುಮಾರ ನಿರೂಪಿಸಿದರು. ವಸತಿ ನಿಲಯದ ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here