ಶಹಾಬಾದ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಸೋಮವಾರ ನಗರದ ರೇಲ್ವೆ ನಿಲ್ದಾಣದಿಂದ ತಹಸೀಲ್ದಾರ ಕಛೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಮಾತನಾಡಿ,ಮಾನ್ಯ ಮುಖ್ಯಮಂತ್ರಿಗಳು ಹಸಿರು ಶಾಲು ಹಾಕಿಕೊಂಡು ರೈತರ ಮೇಲೆ ಪ್ರಮಾಣ ವಚನ ಮಾಡುತ್ತಾರೆ.ಆದರೆ ಬೆಂಬಲ ಬೆಲೆ ನೀಡುವಲ್ಲಿ ಮೃದುಧೋರಣೆ ತೋರುತ್ತಿರುವುದು ದುರದೃಷ್ಟಕರ. ಡಾ.ಸ್ವಾಮಿನಾಥನ ವರದಿಯಂತೆ ತೊಗರಿಗೆ ೭೫೦೦ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕಿತ್ತು.ಆದರೆ ಕೇವಲ ೬೧೦೦ ರೂ. ನಿಗದಿಪಡಿಸಿ ರೈತರಿಗೆ ಅನ್ಯಾಯ ಮಾಡಲಾಗಿದೆ.ಅಲ್ಲದೇ ಬೀದರಿನಲ್ಲಿ ನಡೆದ ಪಶು ಸಮ್ಮೇಳನದಲ್ಲಿ ರೈತರಿಂದ ೨೦ ಕ್ವಿಂಟಾಲ್ ತೊಗರಿ ಬೀಜ ಖರೀಸುತ್ತೆವೆ ಎಂದು ಹೇಳಿ, ಇಲ್ಲಿಯವರೆಗೆ ಆದೇಶ ಹೊರಡಿಸಿಲ್ಲ. ರೈತರಿಗೆ ಕೊಟ್ಟ ಮಾತು ತಪ್ಪಿದ ಮುಖ್ಯಮಂತ್ರಿಯವರು ಈಗಲಾದರೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆದೇಶ ಹೊರಡಿಸಬೇಕು ಎಂದರು.ಅಲ್ಲದೇ ಮನಮೋಹನಸಿಂಗ್ ಅವರ ಸರ್ಕಾರವಿದ್ದಾಗ ೮೪ ಸಾವಿರ ಕೋಟಿ ಹಣ ಉದ್ಯೋಗ ಖಾತಿಗೆ ಮೀಸಲಿಟ್ಟಿತ್ತು.ಆದರೆ ಕಳೆದ ಬಿಜೆಪಿ ಸರ್ಕಾರ ೭೧ ಸಾವಿರ ಕೋಟಿಗೆ ತಂದರು.ಮತ್ತೆ ಅಧಿಕಾರ ಬಂದು ಬಜೆಟ್‌ನಲ್ಲಿ ೬೧ ಸಾವಿರ ಕೋಟಿಗೆ ತಂದು ನಿಲ್ಲಿಸಿ, ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರನ್ನು ಗೂಳೆ ಹೋಗುವ ಪರಿಸ್ಥಿಗೆ ತಂದಿದ್ದಾರೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಕೆಕೆಆರ್‌ಡಿಬಿ ನಿಧಿಯಿಂದ ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಕೆಲಸ ಮಾಡದೇ ಹಣ ನುಂಗಿ ಹಾಕಿದ್ದಾರೆ.ಆ ಅವ್ಯವಹಾರಕ್ಕೆ ಅಧಿಕಾರಿಗಳು ಸಾಥ ನೀಡಿದ್ದಾರೆ.ಈ ಬಗ್ಗೆ ತಣಿಖೆ ನಡೆಸಬೇಕು. ತಾಲೂಕಾ ಕೇಂದ್ರದ ಕಛೇರಿಗಳನ್ನು ಪ್ರಾರಂಭ ಮಾಡಬೇಕು. ಕಳೆದ ನಾಲ್ಕು ತಿಂಗಳಿಂನಿಂದ ವಿವಿಧ ಗ್ರಾಪಂಗಳಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡಬೇಕು. ಹೊನಗುಂಟಾ ಗ್ರದಲ್ಲಿ ನಮ್ಮ ಹೊಲ,ನಮ್ಮ ದಾರಿ ನಡೆದಿರುವ ಅವ್ಯವಹಾರ ಮಾಡಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.ಅಲ್ಲದೇ ಕೂಲಿ ಕಾರ್ಮಿಕರಿಗೆ ವರವಾದ ಇಎಸ್‌ಐ ಆಸ್ಪತ್ರೆ ಇಲ್ಲಿಂದ ಬೇರೆ ಕಡೆ ಸ್ಥಳಾಂತರ ವಾಗುವುದನ್ನು ತಡೆಗಟ್ಟಬೇಕು ಹಾಗೂ ಇಲ್ಲಿಯೇ ಕಾರ್ಯನಿರ್ವಹಿಸಬೇಕೆಂದು ಒತ್ತಾಯಿಸಿದರು.
ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ, ಮಲ್ಲಣ್ಣ ಕಾರೋಳ್ಳಿ, ವಿಶ್ವರಾಜ ಫಿರೋಜಾಬಾದ, ಶರಣು ಬನ್ನೆಪ್ಪ, ವಿಜಯಕುಮಾರ ಕಂಠಿಕರ್ ಸೇರಿದಂತೆ ಅನೇಕ ಜನರು ಹಾಜರಿದ್ದರು.