ಕಲಬುರಗಿ: ಕಿಡಿಗೇಡಿಗಳು ಹಫ್ತ್ ಗುಂಬಜ್ ಗೋಡೆಯ ಮೇಲೆ ಮಾ. 1 ರಂದು ಪಾಕಿಸ್ತಾನ್ ಜಿಂದಾಬಾದ್ ಮತ್ತು ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣ ಕರ್ನಾಟಕ ಪೀಪಲ್ಸ್ ಫೋರಂ ಖಂಡಿಸಿದೆ. ಹೋಳಿ ಹಬ್ಬದಲ್ಲಿ ಸೂಕ್ತ ಭದ್ರತೆ ಮತ್ತು ಶಾಂತಿ ಸೌಹಾರ್ದತೆಗೆ ಧಕ್ಕೆ ಯಾಗ ರೀತಿಯಲ್ಲಿ ಮುನ್ನೆಚರಿಕೆ ವಹಿಸಬೇಕೆಂದು ಫೋರಂ ಸಂಸ್ಥಾಪಕ ಅಧ್ಯಕ್ಷ ಡಾ. ಅಜಗರ್ ಚುಲಬುಲ್ ಪೊಲೀಸ್ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕೃತ್ಯ ವೇಸಗಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಕೇಲಸದಲ್ಲಿ ತೊಡಗಿರುವ ಯಾರೆ ಆದರು ನಿರ್ದಾಕ್ಷಣ್ಯ ಕ್ರಮಕೈಗೊಂಡು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಕೋಮುಸೌಹರ್ದತೆ ಕದಡುವ ಕೃತ್ಯ ನಡೆಸಲು ಸಂಚು ರೂಪಿಸಿದ ಆರೋಪಿಗಳಿಗೆ ಧರ್ಮ ಮತ್ತು ಜಾತಿ ಇರುವುದಿಲ್ಲ. ಮಾನವ ವಿರೋಧಿ, ಸಮಾಜ ಘಾತಕರು ಇಂತಹ ನೀಚರನ್ನು ಪೊಲೀಸ್ ಇಲಾಖೆ ಕೂಡಲೆ ಪತ್ತೆ ಹಚ್ಚಿ ಬಂಧಿಸಬೇಕು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲೆಯಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದ್ದು, ಹೋಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಕೋಮು ಗಲಭೆ ನಡೆಸಬಹುದೆಂಬ ಆತಂಕ ಅನುಮಾನ ಇದ್ದು, ಹಬ್ಬದಲ್ಲಿ ಸಿಸಿ ಕ್ಯಾಮರಾ, ಪೊಲೀಸ್ ಬಿಗಿ ಬಂದೋಬಸ್ತ ವಹಿಸಿ ಸಮಾಜ ಘಾತುಕ ಶಕ್ತಿಗಳು ತಲೆ ಎತ್ತದ ರೀತಿ ಮುನ್ನಚರಿಗೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.
ಅಲ್ಲದೇ ಬಿಜೆಪಿ ಪಕ್ಷ ಮತ್ತು ಹಿಂದೂ ಪರ ಸಂಘಟನೆಗಳ ಮುಖಂಡರು ಉದ್ರೇಕ ಹೇಳಿಕೆ ನೀಡುವ ಮೂಲಕ ಸಾಮರಸ್ಯಕ್ಕೆ ಹಾನಿ ತರುವ ಪ್ರಯತ್ನ ಸಲ್ಲದು. ಮುಖಂಡರು ಭಾವೈಕ್ಯತೆಗೆ ಧಕ್ಕೆ ತರಬಾರದು ಎಂದು ಈ ಸಂದರ್ಭದಲ್ಲಿ ಕಿವಿ ಮಾತು ಹೇಳಿದರು.
ಈ ವೇಳೆಯಲ್ಲಿ ನಾಸೀರ್ ಹುಸೇನ್ ಉಸ್ತಾದ್, ಬಾಬಾ ಖಾನ್, ಮಾರುತಿ ಮಾನ್ಪಡೆ ಸೇರಿದಂತೆ ಮುಂತಾದವರು ಇದ್ದರು.