ಸುರಪುರ: ಕರೊನಾ ಕಾಯಿಲೆ ಈಗಾಗಲೆ ೬೦ಕ್ಕೂ ಹೆಚ್ಚಿನ ರಾಷ್ಟ್ರಗಳಲ್ಲಿ ಇದರ ಹಾವಳಿ ಹೆಚ್ಚಾಗಿದ್ದು ಭಾರತದಲ್ಲಿಯೂ ೨೮ ಪ್ರಕರಣಗಳು ಪತ್ತೆ ಹಚ್ಚಲಾಗಿದೆ.ಇದು ಎಲ್ಲರಲ್ಲಿ ಭಯ ಹುಟ್ಟಿಸಿದ್ದು ನಿಜವಾದರು ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ.ನಾಯಕ ತಿಳಿಸಿದರು.
ತಮ್ಮನ್ನು ಭೇಟಿ ಮಾಡಿದ ವರದಿಗಾರರೊಂದಿಗೆ ಮಾತನಾಡಿ,ಕರೊನಾ ವೈರಸ್ ಅಪಾಯಕಾರಿಯಾಗಿದೆ,ವ್ಯಕ್ತಿಯಿಂದ ವ್ಯಕ್ತಿಗೆ ಬೇಗನೆ ಹರಡುತ್ತದೆ.ಆದರೆ ಜನರು ಹೆಚ್ಚು ಬಾರಿ ಕೈ ತೊಳೆಯುವುದು,ಸ್ವಚ್ಛವಾಗಿರುವುದು,ಹೊರಗೆ ಪ್ರಯಾಣ ಮಾಡುವಾಗ ಮಾಸ್ಕ್ ಧರಿಸುವುದು ಒಳ್ಳೆಯದು. ವಿದೇಶಿ ವ್ಯಕ್ತಿಗಳೊಂದಿಗೆ ಮಾತನಾಡುವಾಗ ದೂರವಿರುವುದು. ಅಲ್ಲದೆ ವಿದೇಶದಿಂದ ಬರುವವರನ್ನು ವಿಮಾಣ ನಿಲ್ದಾಣಗಳಲ್ಲಿಯೆ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಕಾಯಿಲೆ ಹರಡುವುದಿಲ್ಲ. ಇನ್ನು ಬಿಸಿಲಿನ ಸೆಕೆ ಹೆಚ್ಚಾದಂತೆ ಕರೊನಾ ವೈರಸ್ ಸಾಯುತ್ತದೆ.ಸುಂಆರು ೨೮ ಡಿಗ್ರಿ ಬಿಸಿಲಿನ ತಾಪಮಾನ ಹೆಚ್ಚಿದರೆ ವೈರಸ್ ನಾಶವಾಗುತ್ತದೆ. ಇದರಿಂದ ರೋಗ ಹರಡುವುದು ತಪ್ಪಲಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ ಕರೊನಾ ಕಾಯಿಲೆ ಪೀಡಿತರಿಗಾಗಿ ಮುಂಜಾಗ್ರತೆಗಾಗಿ ಈಗಾಗಲೆ ತಾಲೂಕು ಆಸ್ಪತ್ರೆಯಲ್ಲಿ ಹತ್ತು ಬೆಡ್‌ಗಳನ್ನು ಮತ್ತು ಅವಶ್ಯವಿರುವ ಔಷಧಿಗಳನ್ನು ಸಿಧ್ಧ ಮಾಡಿಕೊಳ್ಳಲಾಗಿದೆ.ಯಾರೂ ಆತಂಕ ಪಡಬೇಕಾಗಿಲ್ಲ ಎಂದು ತಿಳಿಸಿದರು.