ಶಹಾಬಾದ: ನಗರದ ನಗರಸಭೆಯಲ್ಲಿ ಪೌರಾಯುಕ್ತ ವೆಂಕಟೇಶ ಮತ್ತು ಪ್ರೋಬೇಶನರಿ ಐಎಎಸ್ ಅಧಿಕಾರಿ ಡಾ. ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಬಜೆಟ್ ಮತ್ತು ಸಾರ್ವಜನಿಕರ ಸಲಹೆ ಸೂಚನಾ ಸಭೆಯಲ್ಲಿ ಸುಮಾರು ೧೭೮.೧೧ ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.
ನಗರಸಭೆಯ ೨೦೨೦-೨೧ನೇ ಸಾಲಿನ ಆರಂಭಿಕ ಶುಲ್ಕ ೮೪೨.೧೧ ಲಕ್ಷ ರೂ, ನಿರೀಕ್ಷಿತ ಆದಾಯ ೧೭೮೦ ಲಕ್ಷ ಸೇರಿದಂತೆ ಸೇರಿದಂತೆ ಒಟ್ಟು ೨೬೨೨.೧೧ ಲಕ್ಷ ರೂ. ಗಳ ಬಜೆಟನಲ್ಲಿ ನಿರೀಕ್ಷಿತ ಖರ್ಚು ೨೪೪೪ ಲ್ಷ ರೂ.ಗಳಾಗಲಿದ್ದು, ಒಟ್ಟು ೧೭೮.೧೧ ಲಕ್ಷ ರೂ. ಉಳಿತಾಯ ಬಜೆಟ್‌ನ್ನು ಸಾಬಣ್ಣ ಸುಂಗಲಕರ್ ಮಂಡಿಸಿದರು.
ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ ಹಾಗೂ ನಗರಸಭೆಯ ಸದಸ್ಯ ಸೂರ್ಯಕಾಂತ ಕೋಬಾಳ ಮಾತನಾಡಿ, ಸುಮಾರು ಹತ್ತು ವರ್ಷಗಳಿಂದ ಸಭೆಗೆ ಹಾಜರಾಗುತ್ತೆವೆ.ನಮ್ಮ ಅಭಿಪ್ರಾಯ ಸಲ್ಲಿಸುತ್ತೆವೆ.ಆದರೆ ಅದು ಅನುಷ್ಠಾನಕ್ಕೆ ಬರೋದಿಲ್ಲ. ನಗರದಲ್ಲಿ ಸಾರ್ವಜನಿಕರಿಗೆ ಒಂದು ಮೂತ್ರಾಲಯವಿಲ್ಲ ಎಂದರೇ ನಾಚಿಕೆ ಬರಬೇಕು.ಮೊದಲು ಮಹಿಳೆಯರಿಗಾದರೂ ಮೂತ್ರಾಲಯ ಸ್ಥಾಪಿಸಿ ಎಂದರು.ಈಗಾಗಲೇ ಸುಮಾರು ಏಳೆಂಟು ಕಡೆಗಳಲ್ಲಿ ಸ್ಥಳವನ್ನು ನಿಗದಿಪಡಿಸಲಾಗಿದೆ.ಆದಷ್ಟು ಬೇಗನೆ ಮಾಡಲಾಗುವುದು ಎಂದು ಪೌರಾಯುಕ್ತರು ಹೇಳಿದರು.
ನಂತರ ಮಾತನಾಡಿದ ನಗರಸಭೆಯ ಸದಸ್ಯ ರವಿ ರಾಠೋಡ, ನಗರದ ಸಾರ್ವಜನಿಕ ವಸತಿ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ನಡೆಸುತ್ತಿರುವುದು ಅಕ್ರಮ. ಈ ಅಕ್ರಮವನ್ನು ತಡೆಗಟ್ಟಿ ಅಲ್ಲಿಂದ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಸ್ಥಾನಂತರಿಸಿ.ಇಷ್ಟೊಂದು ಅಕ್ರಮ ಕೆಲಸಗಳು ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲವೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಯಿಸಿದ ಮಹ್ಮದ್ ಬಾಕರ್ ಅವರು ಈಗಾಗಲೇ ಹಲವು ವರ್ಷಗಳಿಂದ ಅಲ್ಲಿ ಪಾಲಿಷ್ ಮಶಿನ್ ನಡೆಯುತ್ತಿವೆ.ಅಲ್ಲದೇ ನಗರಸಭೆಗೆ ತೆರಿಗೆ ನೀಡುತ್ತಿದ್ದೆವೆ ಎಂದರು.
ಹಾಗಾದರೇ ನಾನು ಕೂಡ ನಗರದ ಸಾರ್ವಜನಿಕರ ಪ್ರದೇಶದಲ್ಲಿ ಕೈಗಾರಿಕೆ ನಿರ್ಮಾಣ ಮಾಡಲು ಅರ್ಜಿ ಸಲ್ಲಿಸುತ್ತೆನೆ.ಅದಕ್ಕೆ ಪೌರಾಯುಕ್ತರು ಅನುಮತಿ ನೀಡಿ.ಇಲ್ಲವಾದರೇ ಅಲ್ಲಿಂದ ಆ ಕೈಗಾರಿಕಾ ಮಶಿನ್‌ಗಳನ್ನು ಸ್ಥಳಾಂತರಿಸಿ ಎಂದು ಪಟ್ಟು ಹಿಡಿದರು.ಅಲ್ಲದೇ ನಗರಸಭೆಯ ಆಸ್ತಿಯನ್ನು ಬಹಳಷ್ಟು ಜನರು ಒತ್ತುವರಿ ಮಾಡಿಕೊಂಡಿದ್ದಾರೆ.ಕೆಲವು ಕಡೆಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡರು ಅಧಿಕಾರಿಗಳು ಮಾತ್ರ ಏನು ಮಾಡುತ್ತಿಲ್ಲ ಎಂದು ದೂರಿದರು. ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೆನೆ ಎಂದು ಪೌರಾಯುಕ್ತರು ತಿಳಿಸಿದರು.
ಡಾ.ಅಹ್ಮದ್ ಪಟೇಲ್ ಹಾಗೂ ಶರಣು ಪಗಲಾಪೂರ ಮಾತನಾಡಿ, ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೋಟಿಗಟ್ಟಲೇ ಹಣ ಬಿಡುಗಡೆಯಾಗಿದೆ. ಮಶಿನ್‌ಗಳು ಬಂದಾಯ್ತು.ಆದರೆ ಸುಮಾರು ವರ್ಷಗಳಿಂದ ಒಂದು ಚೀಲ ಗೊಬ್ಬರವಾದರೂ ರೈತರಿಗೆ ನೀಡಿದ್ದೀರಾ. ಅಲ್ಲದೇ ಸೆಪ್ಟಿಕ್ ಟ್ಯಾಂಕ್ ತುಂಬಿದನ್ನು ತೆಗೆಯಲು ಕಲಬುರಗಿಯಿಂದ ಖಾಸಗಿಯವರು ಬಂದು ತೆಗೆಯಲು ೨೫೦೦ ರೂ. ತೆಗೆದುಕೊಳ್ಳುತ್ತಿದ್ದಾರೆ.ಆದರೆ ನಮ್ಮ ನಗರಸಭೆಯಲ್ಲಿ ಸಕಿಂಗ್ ವಾಹನವಿದ್ದರೂ ೪ ವರ್ಷದಿಂದ ರಿಪೇರಿ ಮಾಡಿಲ್ಲ. ಇದಕ್ಕೆ ಬೇಜವಬ್ದಾರಿ ಅಧಿಕಾರಿಗಳೇ ಕಾರಣ ಎಂದರು.
ನಗರಸಭೆಯ ಎಇಇ ಪುರುಷೋತ್ತಮ, ನಗರಸಭೆಯ ಸದಸ್ಯರಾದ ಲಕ್ಷ್ಮಿಬಾಯಿ ಕುಸಾಳೆ, ಪಾರ್ವತಿ ಪವಾರ, ಸಾಬೇರಾ ಬೇಗಂ, ತಿಮ್ಮಬಾಯಿ ಕುಸಾಳೆ,ಮಲ್ಲಿಕಾರ್ಜುನ ವಾಲಿ,ರವಿ ಮೇಸ್ತ್ರಿ, ಮುಖಂಡರಾದ ಶಿವರಾಜ ಕೋರೆ, ನಾಗಪ್ಪ ಬೆಳಮಗಿ, ಫಜಲ್ ಪಟೇಲ್,ಶಿವಕುಮಾರ ತಳವಾರ, ಕಸಾಪ ಅಧ್ಯಕ್ಷ ಶರಣಗೌಡ ಪಾಟೀಲ ಇತರರು ಇದ್ದರು.