ಕಲಬುರಗಿ: ಬಸವೇಶ್ವರ ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಅವರ ಸಹಯೋಗದಲ್ಲಿ ಈಚೆಗೆ ಪಾಣೆಗಾಂವ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ೨೭೧ ಜನರ ನೇತ್ರ ತಪಾಸಣೆ ನಡೆಸಿ ಅದರಲ್ಲಿ ೩೮ ಜನರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಮಾಡಲಾಯಿತು.
ಅಲ್ಲಮಪ್ರಭು ಪಾಟೀಲ್, ಎಂ.ಆರ್.ಮೇಡಿಕಲ್ ಕಾಲೇಜಿನ ಡೀನ ಡಾ.ಉಮೇಶಚಂದ್ರ ಡಿ.ಜಿ, ಖ್ಯಾತ ನೇತ್ರ ತಜ್ಞರಾದ ಡಾ. ವಿಶ್ವನಾಥ ರೆಡ್ಡಿ, ಡಾ.ಎಂ.ಆರ್.ಪೂಜಾರಿ, ಡಾ. ರಾಜೇಶ್ವರಿ ರೆಡ್ಡಿ, ಡಾ. ಕವಿತಾ ಸಲಗರ, ಡಾ. ಮಂಜುಳಾ ಮಂಗಣೆ, ಡಾ. ಪ್ರಜ್ವಲಿ ರೆಡ್ಡಿ, ಡಾ. ಸುಮಿತ ದೇಶಪಾಂಡೆ, ಡಾ. ಜ್ಞಾನಜ್ಯೋತಿ ಬಡಾ, ಡಾ. ವಿರೇಶ ಕೋರವಾರ, ಡಾ. ಅಂಬಿಕಾ ಪಾಟೀಲ್, ಡಾ. ವಿನೀತ ಬಿ. ಭೀಮಶೆಟ್ಟಿ, ಡಾ. ಕಿರಣ ದೇಶಮುಖ, ಮುಖಂಡರಾದ ಲಿಂಗರಾಜ ಕಣ್ಣಿ, ಸುಭಾಶ್ಚಂದ್ರ ಡೆಂಕಿ, ನಾಗಣ್ಣ ಶೇರಿಕರ, ರಾಜು ಮಾಳಗಿ, ಮಂಜುನಾಥ ಬಿರಾದಾರ, ನಾಗೇಶ ಮುಚಕೋಡ, ಪ್ರಕಾಶ ಕೋರನಳ್ಳಿ ಇದ್ದರು.