ಗರ್ಭಿಣಿಯರ ಆರೋಗ್ಯವೇ ಶಿಶುಗಳಿಗೆ ತಾಕತ್ತು

0
52

ವಾಡಿ: ಗರ್ಭಿಣಿ ಮಹಿಳೆಯರು ಪೌಷ್ಠಿಕ ಆಹಾರ ಸೇವೆನೆಗೆ ಹೆಚ್ಚಿನ ಅಧ್ಯತೆ ಕೊಡಬೇಕು. ತಾಯಿ ಆರೋಗ್ಯವಾಗಿದ್ದರೆ ಮಾತ್ರ ಜನಿಸುವ ಶಿಶು ಶಾರೀರಿಕವಾಗಿ ಸದೃಢವಾಗಿರುತ್ತದೆ ಎಂದು ಮಾರ್ಗದರ್ಶಿ ಸಂಸ್ಥೆಯ ಮಕ್ಕಳ ಸಹಾಯವಾಣಿ ತಂಡದ ಸದಸ್ಯ ಆನಂದ ಶರ್ಮಾ ಹೇಳಿದರು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಪಟ್ಟಣದ ವಾರ್ಡ್ ೧೧ರ ಕಲಕಂ ಏರಿಯಾದ ಅಂಗನವಾಡಿ ಕೇಂದ್ರದ ವತಿಯಿಂದ ಏರ್ಪಡಿಸಲಾಗಿದ್ದ ಪೌಷ್ಠಿಕ ಆಹಾರ ಶಿಬಿರ ಹಾಗೂ ಪೋಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಪೌಷ್ಠಿಕತೆಯಿಂದ ರಕ್ತಹೀನತೆ ಉಂಟಾಗುತ್ತದೆ. ತರಕಾರಿ, ಕಾಳುಪಲ್ಲೆ ಮತ್ತು ಬೇಯಿಸಿದ ಮೊಟ್ಟೆಯಂತಹ ಪೌಷ್ಠಿಕ ಆಹಾರವನ್ನು ನಿತ್ಯವೂ ಸೇವಿಸುವುದರಿಂದ ಗರ್ಭದೊಳಗೆ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಅಂಗವಿಕಲ ಮತ್ತು ಅಪೌಷ್ಠಿಕ ಮಕ್ಕಳ ಜನನ ಪ್ರಮಾಣ ತಗ್ಗಿಸಲು ಸರಕಾರ ಮಹತ್ವದ ಯೋಜನೆಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಸಾಕಾರಗೊಳಿಸುತ್ತಿದೆ. ಗರ್ಭಿಣಿ ಸ್ತ್ರೀಯರು ಇದರ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಪ್ರಾಸ್ತಾವಿಕವಾಗಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ ಮಠಪತಿ, ಆರೋಗ್ಯವಂತ ಕುಟುಂಬ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ನಾವು ಪೌಷ್ಠಿಕ ಆಹಾರಗಳ ಕುರಿತು ತಿಳಿದುಕೊಳ್ಳುವುದು ಇಂದಿನ ಅಗತ್ಯವಾಗಿದೆ. ಪೋಷಕಾಂಶಗಳಿರುವ ಊಟ ನಮ್ಮ ಆರೋಗ್ಯವನ್ನು ವೃದ್ಧಿಗೊಳಿಸುತ್ತದೆ. ಪೌಷ್ಠಿಕವಲ್ಲದ ಆಹಾರ ನಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಹಸಿ ತರಕಾರಿ, ಹಣ್ಣು, ಧಾನ್ಯಗಳ ಪದಾರ್ಥ ಸೇವನೆ ಮಹಿಳೆಯರ ದೇಹಕ್ಕೆ ಅತ್ಯಂತ ಉತ್ತಮ ಎಂದರು. ಈ ಸಂದರ್ಭದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ಸೇವಿಸಬೇಕಾದ ತರಕಾರಿ, ಹಣ್ಣು, ಧಾನ್ಯಗಳನ್ನು ಪ್ರದರ್ಶಿಸಿ ವಿವರಿಸಲಾಯಿತು. ಮಕ್ಕಳ ತೂಕ ಪರೀಕ್ಷಿಸುವ ಮೂಲಕ ಬಾಣಂತಿಯರಿಗೆ ಪೌಷ್ಠಿಕ ಆಹಾರ ಪದಾರ್ಥ ವಿತರಿಸಲಾಯಿತು. ಬಡಾವಣೆಯ ನೂರಜಾಹಬೇಗಂ ಸೇರಿದಂತೆ ಗರ್ಭಿಣಿಯರು ಹಾಗೂ ಬಾಣಂತಿಯರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here