ಸುರಪುರ: ಸುಮಾರು ಎರಡು ವರ್ಷಗಳಿಂದ ಅರ್ಧಕ್ಕೆ ನಿಂತಿರುವ ನಾಗರಾಳ ದಿಂದ ಕೋನಾಳವರೆಗಿನ ಸುಮಾರು ಐದು ಕಿಲೋ ಮೀಟರ್ ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ನಿತ್ಯವು ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ.ಶೀಘ್ರದಲ್ಲಿ ರಸ್ತೆ ಕಾಮಗಾರಿ ಮುಗಿಸದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಸರಕಾರಕ್ಕೆ ಆಗ್ರಹಿಸಿದರು.
ತಾಲೂಕಿನ ದೇವಾಪುರ ಕ್ರಾಸಲ್ಲಿ ಹಮ್ಮಿಕೊಂಡಿದ್ದ ರಸ್ತೆ ತಡೆ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಈ ರಾಜ್ಯ ಹೆದ್ದಾರಿಯ ಮೂಲಕ ವಿವಿಧ ಜಿಲ್ಲೆಗಳಾದ ವಿಜಯಪುರ,ಬಾಗಲಕೋಟ ಹಾಗು ಮಿರಾಜ್ ಮತ್ತಿತರೆ ಹೊರ ರಾಜ್ಯಕ್ಕೂ ಹೋಗಲು ಇರುವ ಈ ರಸ್ತೆಯಲ್ಲಿನ ನಾಗರಾಳದಿಂದ ಕೋನಾಳವರೆಗಿನ ಕೇವಲ ೫ ಕೀಲೊ ಮೀಟರ್ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಅನೇಕಬಾರಿ ಸರಕಾರಕ್ಕೆ ಮನವಿ ಮಾಡಿದರು ಪ್ರಯೋಜನೆಯಾಗುತ್ತಿಲ್ಲ.ಕೇವಲ ಐದು ಕಿಲೋ ಮೀಟರ್ ಪ್ರಯಾಣಕ್ಕೆ ಸುಮಾರು ಅರ್ಧಗಂಟೆ ಸಮಯ ತಗಲುತ್ತಿದೆ.ಅಲ್ಲದೆ ವಾಹನಗಳು ಹಾಳಾಗುತ್ತಿವೆ.ನಿತ್ಯವು ಇಲ್ಲಿ ಪ್ರಯಾಣಿಸುವವರು ಸರಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ.ಅಧಿಕಾರಿಗಳು ರೈತರು ನ್ಯಾಯಾಲಯದಲ್ಲಿ ಕೇಸು ಹಾಕಿದ್ದಾರೆಂದು ಸಿದ್ಧ ಉತ್ತರ ನೀಡುತ್ತಾರೆ.ಆದರೆ ಪ್ರಯಾಣಿಕರ ಗೋಳನ್ನು ನೋಡುತ್ತಿಲ್ಲ.
ಕೂಡಲೆ ಜಿಲ್ಲಾಡಳಿತ ಮದ್ಯಸ್ಥಿಕೆ ವಹಿಸಿ ರಸ್ತೆ ಕಾಮಗಾರಿಗೆ ಭೂಮಿ ನೀಡಿದ ರೈತರಿಗೆ ಬರಬೇಕಾದ ಬಾಕಿ ಹಣವನ್ನು ನೀಡಬೇಕು ಮತ್ತು ಶೀಘ್ರದಲ್ಲಿ ರಸ್ತೆ ಕಾಮಗಾರಿ ಮುಗಿಸಬೇಕು.ಒಂದು ವೇಳೆ ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ರಸ್ತೆ ತಡೆ ನಡೆಸಿದ್ದರಿಂದ ಎರಡು ಗಂಟೆಗು ಹೆಚ್ಚುಕಾಲ ವಾಹನ ಸವಾರರು ಪರದಾಡಬೇಕಾಯಿತು.ರಸ್ತೆ ತಡೆಯಿಂದಾಗುವ ಸಮಸ್ಯೆಗಳ ಕುರಿತು ಆರಕ್ಷಕ ನಿರೀಕ್ಷರಾದ ಎಸ್.ಎಮ್.ಪಾಟೀಲವರು ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿದ್ದರಿಂದ ತಹಸೀಲ್ದಾರ ನಿಂಗಣ್ಣ ಬಿರಾದಾರವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಿಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ವಿದ್ಯಾರ್ಥಿ ಘಟಕದ ಜಿಲ್ಲಾ ಸಂಚಾಲಕ ಡಾ: ಮಲ್ಲಿಕಾರ್ಜುನ ಆಶನಾಳ,ಜಿಲ್ಲಾ ಸಂಘಟನಾ ಸಂಚಾಲಕ ಅಜೀಜ್ ಸಾಬ್ ಐಕೂರ,ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಿಗಿ,ಜೆಟ್ಟೆಪ್ಪ ನಾಗರಾಳ, ಮಾನಪ್ಪ ಶೆಳ್ಳಿಗಿ,ಮರಲಿಂಗಪ್ಪ ಹುಣಸಿಹೊಳೆ,ಖಾಜಾಹುಸೇನ್ ಗುಡಗುಂಟಿ,ಮಲ್ಲಿಕಾರ್ಜುನ ಮಳ್ಳಳ್ಳಿ,ಬಸವರಾಜ ಗೋನಾಲ,ಮಹಿಬೂಬಸಾಬ್ ನಾಯಕೋಡಿ,ಶರಣಪ್ಪ ಉಳ್ಳೆಸುಗೂರ,ಗೌತಮ್ ಕ್ರಾಂತಿ,ಬಸವರಾಜ ಶೆಳ್ಳಿಗಿ,ಬಸವರಾಜ ಕಲ್ಲದೇವನಹಳ್ಳಿ,ಬಸಪ್ಪ ಅಗತೀರ್ಥ,ಯಲ್ಲಾಲಿಂಗ ಗುಂಡಲಗೇರಿ,ಶೇಖಪ್ಪ ಭಂಡಾರಿ,ಮಲ್ಲಪ್ಪ ಖಾನಾಪುರ,ಮಹೇಶ ಸುಂಗಲಕರ್,ಹಣಮಂತ ಗೋಡಿಹಾಳ ಸೇರಿದಂತೆ ಅನೇಕರಿದ್ದರು.
Super Sir