ಹನ್ನೆರಡನೆಯ ಶತಮಾನ ಮಹಿಳೆಯರು ಬೆಳಕು ಕಂಡ ಕಾಲ

0
97

ಕಲಬುರಗಿ: ಪುರಷ ಪ್ರಧಾನವಾದ ಸಮಾಜದಲ್ಲಿ ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದಂತಹ ಮಹಿಳೆಯರು ಸಂಘಟಿತರಾಗಿ ಹೋರಾಟ ಪ್ರಾರಂಭ ಮಾಡಿದ ದಿನವೇ ಮಾರ್ಚ್ ೮ನೆಯ ತಾರೀಕು. ಈ ದಿನ ಮಹಿಳೆಯರ ಘನತೆ, ಗೌರವ ಕೆಚ್ಚು, ಧೈರ್ಯಕ್ಕೆ ಪ್ರತೀಕವಾಗಿ ನಿಂತಿದೆ.ಜರ್ಮನಿಯಕಮ್ಯುನಿಸ್ಟ್ ನಾಯಕಿಕ್ಲಾರಾಜೆಟ್‌ಕಿನ್‌ಎನ್ನುವವರುಕ್ರಿ. ಶ ೧೯೧೦ ರಲ್ಲಿ ಈ ಹೋರಾಟ ಪ್ರಾರಂಭ ಮಾಡಿದರು.

ಬಸವ ಸಮಿತಿಯ ಅಕ್ಕನ ಬಳಗ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿಅನುಭವ ಮಂಟಪದಲ್ಲಿ ಲಿಂ. ಸಿದ್ರಾಮಪ್ಪ ಅಯ್ಯಪ್ಪಕಿಣಗಿ ಸ್ಮರಾಣಾರ್ಥಅರಿವಿನ ಮನೆ ೬೨೯ ನೆಯದತ್ತಿಕಾರ‍್ಯಕ್ರಮ, ಶನಿವಾರ ಲಿಂಗೈಕ್ಯರಾದ ಮಹಾಯೋಗಿಣಿ ಮಾತಾ ಮಾಣಿಕೇಶ್ವರಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನುಅರ್ಪಿಸುವ ಮೂಲಕ ಪ್ರಾರಂಭವಾಯಿತು.

Contact Your\'s Advertisement; 9902492681

ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಶಿವಶರಣೆಯರುಎನ್ನುವ ವಿಷಯಕುರಿತುಅನುಭಾವ ನೀಡಿದ ವಿಶ್ರಾಂತ ಪ್ರಾಧ್ಯಾಪಕರಾದಡಾ.ನೀಲಮ್ಮ ಕತ್ನಳ್ಳಿಯವರು ಮಹಿಳೆಯರಿಗೆ ಈ ಮೊದಲು ಮತದಾನದ ಹಕ್ಕು ಸಹ ಇರಲಿಲ್ಲ. ಇದನ್ನೇ ಪ್ರಧಾನವಾದ ಬೇಡಿಕೆಯನ್ನಾಗಿಟ್ಟುಕೊಂಡು ೧೯೧೦ ರಲ್ಲಿಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರಾರಂಭ ಮಾಡಿದರು.ಮಹಿಳೆಯರ ಶೋಷಣೆಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ವಿಶ್ವದಾದ್ಯಂತ ವ್ಯಾಪಿಸಿತ್ತು.ಕ್ಲಾರಾಜೆಟ್‌ಕಿನ್ ಮಡಿದರೂ ಸರಿ ನಮ್ಮ ಹಕ್ಕಿಗಾಗಿ ಹೋರಾಡೋಣವೆಂದು ಸ್ತ್ರೀ ವಿಮುಕ್ತಿ ಅಂದೋಲವನ್ನೇ ಪ್ರಾರಂಭಿಸಿದ್ದರು.ಅದರ ಪ್ರತಿಫಲವಾಗಿ ಇಂದು ಮಹಿಳೆ ಬಸ್ ಕಂಡಕ್ಟರ್‌ನಿಂದ ಹಿಡಿದು ವಿಮಾನದ ಪೈಲಟ್, ಸೇನೆ, ಮುಂತಾದ ವಿಭಾಗಗಳಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾಳೆ.ಪುನೀತಾಆರೋರಾ, ಗುಂಜನಾ ಸಕ್ಸೆನಾ, ಮಿಲಿಟರಿಯಲ್ಲಿತಮ್ಮ ಸಾಹಸವನ್ನು ಪ್ರದರ್ಶಿಸಿದ್ದಾರೆ.

ಭಾರತದಇತಿಹಾಸವನ್ನು ಅವಲೋಕಿಸಿದರೆ ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಮೂರು ಘಟ್ಟಗಳಲ್ಲಿ ಮೊದಲನೆಯದು ವೇದಗಳ ಕಾಲ,ಎರಡನೆಯದಾಗಿ ಹನ್ನೆರಡನೆಯ ಶತಮಾನದ ಶಿವಶರಣೆಯರ ಕಾಲ, ಮೂರನೆಯದುಇಪ್ಪತ್ತೊಂದನೆಯಶತಮಾನದ ಈ ಪ್ರಸ್ತುತ ಸಂದರ್ಭ. ಯತ್ರ ನಾರೇಸ್ತು ಪೂಜ್ಯಂತೆ, ರಮಂತೆತತ್ರದೇವತಾ ಎನ್ನುವಂತೆಎಲ್ಲಿ ಮಹಿಳೆಯರಿಗೆ ಗೌರವಿಸುತ್ತಾರೋಅಲ್ಲಿ ದೇವತೆಗಳು ವಾಸಮಾಡುತ್ತಾರೆ. ಹನ್ನೊಂದನೆಯ ಶತಮಾನದಲ್ಲಿ ಮುಸಲ್ಮಾನರ ದಾಳಿಯಿಂದಾಗಿ ಶೀಲ ರಕ್ಷಣೆಗಾಗಿ ಮಹಿಳೆ ನಾಲ್ಕು ಗೋಡೆಗಳ ಮದ್ಯೆ ಸೀಮಿತಗೊಳಿಸಿ ಅಡುಗೆ ಮನೆ ಮತ್ತು ಭೋಗದ ವಸ್ತುವಾಗಿ ಉಳಿದು ಬಿಟ್ಟುಳು. ಆದರೆ ನಿಜವಾಗಿ ಮಹಿಳೆಯ ಬದುಕಿನಲ್ಲಿ ಬೆಳಕು ಬಂದಿದ್ದು ಹನ್ನೆರಡನೆಯ ಶತಮಾನದಲ್ಲಿ.ಬಸವಣ್ಣನವರು ಮಹಿಳೆಯರಲ್ಲಿನ ಶಕ್ತಿಯನ್ನು ಮನಗಂಡವರಾಗಿದ್ದರು.೨೧ ಶತಮಾನದಲ್ಲಿ ಸಾಧಿಸಲುಅಸಾಧ್ಯವಾದಂತಹ ಕೆಲಸಗಳನ್ನು ಹನ್ನೆರಡೆನೆಯಶತಮಾನದಲ್ಲಿಬಸವಣ್ಣನವರ ನೇತ್ರತ್ವದಲ್ಲಿಮಾಡಲಾಯಿತು.

ಬಸವಣ್ಣನವರುತಮ್ಮ ಸಹೋದರಿ ಅಕ್ಕ ನಾಗಮ್ಮನಿಗಿಲ್ಲದ ಜನಿವಾರತನಗೇಕೆಎಂದು ಜನಿವಾರವನ್ನೆ ಬಿಸುಟು ಮನೆಯನ್ನುತೊರೆದದ್ದುಅಸಾಧಾರಣಘಟನೆ. ಬಸವಣ್ಣನವರುಉದ್ಧಾರ ಮಾಡಿದ್ದು, ಎರಡು ವರ್ಗಗಳನ್ನು. ಒಂದುದಲಿತವರ್ಗ ಮತ್ತೊಂದು ವರ್ಗವೆಂದರೆ ಮಹಿಳೆಯರು.ಅಕ್ಷರಜ್ಞಾನವನ್ನು ಮಹಿಳೆಯರಿಗೆ ಕಲಿಸಿ, ಸಾಮಾಜಿಕ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯಗಳನ್ನು ನೀಡಿಅನುಭವ ಮಂಟಪದಲ್ಲಿ ಭಾಗವಹಿಸುವ ಅವಕಾಶವನ್ನು ಮಾಡಿಕೊಟ್ಟರು.ಆ ಕಾಲದ ಶರಣ ಚಳುವಳಿಯಲ್ಲಿ ಅನೇಕ ಮಹಿಳೆಯರು ಅನುಭವ ಮಂಟಪದಲ್ಲಿ ವಚನಕಾರ್ತಿಯರಾಗಿ, ಶಿವಶರಣೆಯರಾಗಿ ರೂಪಾಂತರಗೊಂಡುಅಸಂಖ್ಯ ವಚನಗಳನ್ನು ರಚಿಸುತ್ತಾರೆ.ನಮಗೆ ಸಿಕ್ಕಿದ್ದು ಕೇವಲ ೩೫ ಜನ ಶಿವಶರಣೆಯರ ವಚನಗಳು ಮಾತ್ರ. ಅಧ್ಯಕ್ಷತೆ ಮಹಿಸಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ವಿಭಾಗದಜಂಟಿ ಸಾರಿಗೆಆಯುಕ್ತರಾದ ಶ್ರೀಮತಿ ಎಂ.ಪಿ.ಓಂಕಾರೇಶ್ವರಿಯವರು ಮಹಿಳೆಯರು ಹಕ್ಕುಗಳಿಗಾಗಿ ಹೊರಾಟ ಮಾಡದೆ ಸುಶಿಕ್ಷಿತರಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಕಾಲ ಇದಾಗಿದೆ ಎಂದರು.

ವೇದಿಕೆ ಮೇಲೆ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ.ಜಯಶ್ರೀದಂಡೆ, ದತ್ತಿ ದಾಸೋಹಿಗಳಾದ ಮಾಧವಿ ಕಿಣಗಿ ಉಪಸ್ಥಿತರಿದ್ದರು. ಜಯನಗರದ ನೀಲಮ್ಮನ ಬಳಗದ ಸಹೋದರಿಯರ ಶಿವಶರಣೆಯರ ವಚನ ಭಜನೆಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.ಡಾ. ಸುನಿತಾಗುಮ್ಮಾಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here