ಶೋಭಾಯಾತ್ರೆ ಮೆರವಣಿಗೆಯೊಂದಿಗೆ ಕಣ್ವಮಠ ಯತಿಗಳ ಪುರಪ್ರವೇಶ

0
63

ಸುರಪುರ: ತಾಲೂಕಿನ ವೀರಘಟ್ಟ ಹುಣಸಿಹೊಳೆಯ ಪ್ರಸ್ತುತ ಪೀಠಾಧೀಶರಾದ ವಿದ್ಯಾಕಣ್ವ ವಿರಾಜತೀರ್ಥ ಯತಿಗಳ ಪುರಪ್ರವೇಶ ಹಾಗೂ ಶೋಭಾಯಾತ್ರೆ ಮೆರವಣಿಗೆ ನಗರದಲ್ಲಿ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ನಗರಕ್ಕೆ ಆಗಮಿಸಿದ ಯತಿಗಳನ್ನು ವೇದಘೋಷ, ಭಜನೆ ಹಾಗೂ ಮಂಗಲವಾದ್ಯಗಳೊಂದಿಗೆ ನಗರದ ರಾಜಬೀದಿಗಳಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು ನಂತರ ಅರಮನೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸುರಪುರ ಸಂಸ್ಥಾನರ ಅರಸು ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕ ಹಾಗೂ ಪರಿವಾರದವರು ದರ್ಬಾರನಲ್ಲಿ ಯತಿಗಳ ಪಾದಪೂಜೆಯನ್ನು ನೆರವೇರಿಸಿದರು, ಸಂಸ್ಥಾನದ ರಾಜಪುರೋಹಿತರಾದ ರಾಘವೇಂದ್ರಾಚಾರ್ಯ ಜಹಾಗೀರದಾರ ಅವರು ಪೂಜಾ ಕೈಂಕರ್ಯ ನಡೆಸಿಕೊಟ್ಟರು, ನಂತರ ದರಬಾರ ದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಬಸ್ ನಿಲ್ದಾಣದ ಬಳಿ ಶ್ರೀಕೃಷ್ಣದ್ವೈಪಾಯನ ತೀರ್ಥರ ಮಠದವರೆಗೆ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ಶೋಭಾಯಾತ್ರೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

Contact Your\'s Advertisement; 9902492681

ನಂತರ ವಿದ್ಯಾಕಣ್ವ ವಿರಾಜತೀರ್ಥ ಶ್ರೀಗಳಿಂದ ಶ್ರೀಕೃಷ್ಣದ್ವೈಪಾಯನ ತೀರ್ಥರ ವೃಂದಾವನಕ್ಕೆ ಸಂಪ್ರೋಕ್ಷಣ ಕಾರ್ಯಕ್ರಮ ನಡೆಯಿತು ನಂತರ ಬೃಂದಾವನ ಹಾಗೂ ಕಣ್ವಮಠ ಸಂಸ್ಥಾನದ ಪೂಜೆ ನೆರವೇರಿಸಿದರು, ನಂತರ ನೈವೇದ್ಯ ಹಾಗೂ ಅನ್ನ ಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ವಿದ್ಯಾಕಣ್ವ ವಿರಾಜತೀರ್ಥ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿ ಸುರಪುರ ಸಂಸ್ಥಾನಕ್ಕೂ ಹಾಗೂ ಹುಣಸಿಹೊಳೆ ಕಣ್ವಮಠಕ್ಕೂ ಅವಿನಾಭಾವ ಸಂಬಂಧವಿದ್ದು ಮೊದಲಿನಿಂದಲೂ ಸಂಸ್ಥಾನದ ರಾಜಾಶ್ರಯ ಪಡೆದು ಸಂಸ್ಥಾನದ ಗುರುಗಳಾಗಿ ಇತಿಹಾಸ ಕಾಲದಿಂದಲೂ ನಡೆದುಕೊಂಡು ಬಂದಿದ್ದು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗತಕ್ಕದ್ದು ಎಂದು ಹೇಳಿದರು, ಇಡೀ ದೇಶದಲ್ಲಿಯೇ ಏಕೈಕ ಪೀಠವನ್ನು ಹೊಂದಿರುವ ಹುಣಸಿಹೊಳೆ ಕಣ್ವಮಠದ ಶ್ರೇಯೋಭಿವೃದ್ಧಿಗಾಗಿ ಶ್ರೀಮಠದ ಎಲ್ಲಾ ಶಿಷ್ಯರು ಸೇವೆ ಸಲ್ಲಿಸಬೇಕು ದೇವರ ಹಾಗೂ ಪೀಠದ ಗುರುಗಳ ಅನುಗೃಹಕ್ಕೆ ಪಾತ್ರರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಪ್ರ ಸಮಾಜದ ಪ್ರಮುಖರಾದ ಗೋಪಾಲಚಾರ್ಯ ಅಗ್ನಿಹೋತ್ರಿ, ಶ್ರೀಹರಿರಾವ ಆದವಾನಿ, ರಾಘವೇಂದ್ರಾಚಾರ್ಯ ಹಳ್ಳದ, ಮಲ್ಲಾರಾವ ಕುಲಕರ್ಣಿ ಸಿಂದಗೇರಿ, ಭೀಮಶೇನಾಚಾರ್ಯ ಜೋಷಿ ಮಂಗಳೂರು, ಶ್ರೀನಿವಾಸ ದೇವರು, ವೆಂಕಪ್ಪಾಚಾರ್ಯ ಜಾಗೀರದಾರ ಶಾಂತಪುರ, ಲಕ್ಷ್ಮೀಕಾಂತ ಕುಲಕರ್ಣಿ ಅಮ್ಮಾಪುರ, ಮಲ್ಲಾರಾವ ಪಟವಾರಿ, ಚಂದ್ರಕಾಂತ ನಾಡಿಗೇರ, ವೆಂಕಟೇಶ ಜೋಷಿ ಕುರಿಹಾಳ, ಗುಂಡೇರಾವ ಕುಲಕರ್ಣಿ ಆರಳಹಳ್ಳಿ, ಶ್ರೀನಿವಾಸ ಸಿಂದಗೇರಿ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ಪ್ರಕಾಶ ಕುಲಕರ್ಣಿ, ಗಿರೀಶ ಕುಲಕರ್ಣಿ, ಶ್ರೀನಿವಾಸ ದೇವಡಿ, ವೆಂಕಟೇಶ ರಾಯನಪಾಳ್ಯ, ರಾಘವೇಂದ್ರ ಮುನಮುಟಗಿ, ಗುರುರಾಜ ಅಗ್ನಿಹೋತ್ರಿ, ವೆಂಕಟೇಶ ಕಾಮನಟಗಿ, ಮುರುಳಿಧರ ಜಾಗೀರದಾರ, ಪ್ರಾಣೇಶರಾವ ಕುಲಕರ್ಣಿ ಬೋನಾಳ ಇತರರು ಹಾಗೂ ವೇಣುಗೋಪಾಲಸ್ವಾಮಿ ಮಹಿಳಾ ಭಜನಾ ಮಂಡಳಿ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಿಂದ ಹಾಗೂ ಬೇರೆ ಕಡೆಗಳಿಂದ ಆಗಮಿಸಿದ್ದ ಹಲವರು ಮತ್ತು ಮಹಿಳೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here