ಆತ್ಮವಿಶ್ವಾಸವೊಂದಿದ್ದರೇ ಸಾಧನೆಗೆ ಯಾವುದು ಅಡ್ಡಿಯಾಗುವುದಿಲ್ಲ: ಕೋಟನೂರ್

0
272

ಶಹಾಬಾದ: ಮನುಷ್ಯ ಜೀವನದಲ್ಲಿ ಸಾಧನೆ ಮಾಡಲು ದೃಢವಾದ ಆತ್ಮವಿಶ್ವಾಸ ಮತ್ತು ಛಲವೇ ಮುಖ್ಯ.ವ್ಯಕ್ತಿಯ ಸಾಧನೆಗೆ ವಯಸ್ಸು, ಅಂತಸ್ತು ಯಾವುದು ಅಡಿಯಾಗದು ಎಂದು ಭಂಕೂರ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ದತ್ತಪ್ಪ ಕೋಟನೂರ್ ಹೇಳಿದರು.

ಅವರು ಭಂಕೂರಿನ ಶಾಂತನಗರದ ಬಸವ ಸಮಿತಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಅಚಲವಾದ ಆತ್ಮವಿಶ್ವಾಸ ಇರಬೇಕು. ಸಾಧಿಸುವ ಮನೋಭಾವನೆಯೊಂದಿಗೆ ಕಲಿಕೆಯ ಹಂಬಲ ಜತೆಗೆ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು.ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸತತ ಪ್ರಯತ್ನ, ಶ್ರಮದೊಂದಿಗೆ ಕೆಲಸ ಮಾಡಿದಾಗ ಜಗತ್ತು ನಮ್ಮನ್ನು ವಿಶಿಷ್ಟವಾಗಿ ಗುರುತಿಸುತ್ತದೆ.ಅದಕ್ಕೆ ಉದಾಹರಣೆಯಂತೆ ಅನೇಕ ಮಹನೀಯರು ಉದಾಹರಣೆಯಾಗಿದ್ದಾರೆ. ಸಾಧನೆಯ ಸಂದರ್ಭದಲ್ಲಿ ಅನೇಕ ಕಷ್ಟಗಳು, ತೊಂದರೆಗಳು ಬರುವುದು ಸಹಜ.ಆದರೆ ಅದಕ್ಕೆ ಮೆಟ್ಟಿ ನಿಂತು ಮುಂದೆ ಸಾಗಿದರೆ ಗುರಿ ಮುಟ್ಟಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಶಿವಶರಣಪ್ಪ ಜೆಟ್ಟೂರ್, ಮಕ್ಕಳು ಸತತ ಓದು, ಪರಿಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸುವುದರ ಜತೆಗೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.ಮೊಬೈಲ್,ಟಿವಿಗಳನ್ನು ತೊರೆದು ಆದಷ್ಟು ಅಭ್ಯಾಸದ ಕಡೆಗೆ ಲಕ್ಷ್ಯ ವಹಿಸಿ ಎಂದು ಹೇಳಿದರು.
ಅತಿಥಿಗಳಾಗಿ ಶರಣಬಸಪ್ಪ ನಂದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಸವ ಸಮಿತಿ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ವೀಣಾ ನಾರಾಯಣ, ಶಿಶುವಿಹಾರದ ಮುಖ್ಯಗುರುಮಾತೆ ರಾಜೇಶ್ವರಿ ಹಿರೇಮಠ,ಪ್ರೌಢಶಾಲೆಯ ಮುಖ್ಯಗುರು ರಮೇಶ ಅಳೋಳ್ಳಿ ವೇದಿಕೆಯ ಮೇಲಿದ್ದರು. ಬಸವ ಸಮಿತಿ ಇತರರು ಇದ್ದರು.

ಗಾಯತ್ರಿ ಹಾಗೂ ಕೀರ್ತನಾ ಪ್ರಾರ್ಥಿಸಿದರು, ಹೆಚ್.ಬಿ.ತೀರ್ಥೆ ಪ್ರಾಸ್ತಾವಿಕ ನುಡಿದರು, ಸವಿತಾ ಹೆಬ್ಬಾಳ/ಅನ್ನಪೂರ್ಣ ಸಿಂಘೆ ನಿರೂಪಿಸಿದರು, ಗೀತಾ ಕೋಟನೂರ್ ಸ್ವಾಗತಿಸಿದರು, ಸವಿತಾ ಸುಗಂಧಿ ವಂದಿಸಿದರು.
ಸಮಿತಿ ಕಾರ್ಯದರ್ಶಿ ರೇವಣಸಿದ್ದಪ್ಪ ಮುಸ್ತಾರಿ, ಶಾಲಾ ಕಾರ್ಯದರ್ಶಿ ನೀಲಕಂಠ ಮುದೋಳಕರ್, ಆಡಳಿತ ಮಂಡಳಿ ಸದಸ್ಯರಾದ ಅಮರಪ್ಪ ಹೀರಾಳ,ವೀರಭದ್ರಪ್ಪ ಕಲಶೆಟ್ಟಿ, ಶಿವಪುತ್ರ ಕುಂಬಾರ, ಗುರಲಿಂಗಪ್ಪ ಪಾಟೀಲ, ಶಾಂತಪ್ಪ ಬಸಪಟ್ಟಣ, ಶರಣಬಸಪ್ಪ ನಾಗನಳ್ಳಿ, ಚಂದ್ರಕಾಂತ ಅಲಮಾ, ಹಣಮಂತರಾವ ದೇಸಾಯಿ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here