- ಸಾಜಿದ್ ಅಲಿ
ಯಾದಗಿರಿ: ರಾಜ್ಯ ಮಹಾಮಾರಿ ಕೊರೋನಾ ವೈರಸ್ ಜನರು ಆತಂಕ ಪಡುತಿದ್ದು ಇಂತಹ ಸಂದರ್ಭದಲ್ಲಿ ಔಷದಿ ಅಂಗಡಿ ಮಾಲೀಕರು ಇದನ್ನೇ ಬಂಡವಾಳವಾಗಿ ಮಾಡಿಕೊಳ್ಳು ಹೋರಟ್ಟಿರುವ ಘಟನೆ ಯಾದಗಿರಿ ಜಿಲ್ಲಾದ್ಯಾಂತ ನಡೆಯುತಿದೆ.
ಕೊರೋನಾ ಭೀತ್ತಿಯಿಂದ ಜನರು ಔಷದಿ ಅಂಗಡಿಗೆಯಿಂದ 5 ರೂಪಾಯಿಗೆ ಸಿಗಬೇಕಾದ ಮಾಸ್ಕ್ 25 ರಿಂದ 30 ರೂಪಾಯಿಗಳಿಗೆ ಮಾರಾಟ ಮಾಡುತಿರುವ ಘಟನೆಗಳು ಬೇಳಕಿಗೆ ಬರುತಿವೆ.
ಜನರು ಕೊರೋನಾ ಭೀತ್ತಿಯಿಂದ ಮುಂಜಾಗ್ರತೆಗೆ ಮಾಸ್ಕ್ ಮೊರೆ ಹೊಗುತ್ತಿದ್ದು, ಮಾಸ್ಕ್ ಮಾರಾಟಗಾರರು ನಿಗದಿತ ಬೆಲೆಗಿಂತ ಹೆಚ್ಚು ಹಣದಲ್ಲಿ ಮಾರಾಟ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ. – ಮೊಹಮ್ಮದ್ ವಸೀಮ್, ಶಿಕ್ಷಕ.
ಗ್ರಾಹಕರು ಅಂಗಡಿ ಮಾಲೀಕರಿಗೆ ಪ್ರಶ್ನಿಸಿದ್ದಾಗ ಡೀಲರ್ಸ್ ಗಳು ಹೆಚ್ಚಿನ ದರದಲ್ಲಿ ನೀಡುತಿರುವುದರಿಂದ, ಸಾರ್ವಜನಿಕರಿಗೆ 25 ರಿಂದ 30 ಕ್ಕೂ ಹೆಚ್ಚು ರೂಪಾಯಿಗೆ ಮಾರಾಟ ಮಾಡಲಾಗುತಿದೆ ಎಂದು ತಿಳಿಸಿದ್ದಾರೆ.
ಯಾದಗಿರಿ, ಶಹಾಪುರ, ಸುರಪುರ್ ಸೇರಿದಂತೆ ಜಿಲ್ಲಾದ್ಯಾಂತ ನಿಗದಿತ ದರಕಿಂತ ಹೆಚ್ಚಿನ ಬೆಲೆಯಲ್ಲಿ ಮಾಸ್ಕ್ ಮಾರಾಟದಿಂದ ಕೆಲವರು ಹಣ ನೀಡಿ ಕೊಂಡುಕೊಂಡಿದ್ದಾರೆ, ಇನ್ನೂ ಕೆಲವರು ಗೋಳು ಹೊಡೆದುಕೊಂಡು ಸುಮ್ಮನೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.
ಕೊರೋನಾ ವೈರಸ್ ದಿಂದ ರಕ್ಷಣೆಯ ಪ್ರಥಾಮಿಕ ಅಸ್ತ್ರ ಆಗಿರುವುದು, ಇದನ್ನು ನಿಗದಿತ ದರದಲ್ಲಿ ಪಡೆಯಲು ಕಿತ್ತಾಟ ನಡೆಸುವ ಸನ್ನಿವೇಶ ನಿರ್ಮಾಣವಾಗುತ್ತಿರುವುದು ನೋವಿನ ಸಂಗತಿಯಾಗಿದೆ.