ಕಲಬುರಗಿ: ಇತ್ತೀಚಿಗೆ ಕಲಬುರಗಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದ ಸಂಬಂಧಿಕರಿಗೆ ನಾಲ್ವರನ್ನು ಕೊರೋನ ವೈರಸ್ ಇದೆ ಎಂದು ಶಂಕಿಸಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತಿದ್ದು, ಇವರ ವೈರಸ್ ಮಾದಾರಿಯನ್ನು ಬೆಂಗಳೂರು ಲ್ಯಾಬ್ ಗೆ ಪರೀಕ್ಷೆಗೆ ರವಾನಿಸಲಾಗಿತ್ತು. ಈ ಪೈಕಿ ಮೂವರರಿಗೆ ಕೊರೋನಾ ಇಲ್ಲ ಎಂಬುದು ಸಾಬಿತಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಇಂದು ನಗರ ಭೇಟಿ ನೀಡಿದ ಸಚಿವ ಸುದ್ದಿಗಾರೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದ್ದಾರೆ. ಮೂವರಿಗೆ ಸೋಂಕು ಇಲ್ಲಿ ಎಂದು ದೃಢಪಟ್ಟಿದ್ದು, ಇನ್ನೂಬ್ಬ ವ್ಯಕ್ತಿಯ ವರದಿ ನಾಳೆ ಬರಲಿದೆಎಂದು ತಿಳಿಸಿದ್ದಾರೆ.
ಇಂದು ಕಲಬುರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.