ಕಲಬುರಗಿಯಲ್ಲಿ ಮತ್ತೋರ್ವ ಕೊರೋನಾ ವೈರಸ್ ಕೇಸ್ ದೃಢ

0
138

ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ದಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಅವರ ಕುಟುಂಬದ ಇನ್ನೋರ್ವನಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದ್ದಾರೆ.

76 ವರ್ಷದ ವೃದ್ಧ ಮೃತಪಟ್ಟ ನಂತರ ಇವರ ಕುಟುಂಬ, ಸಂಬಂಧಿಕರನ್ನು ತಪಾಸಣೆಗೆ ಒಳಪಡಿಸಿದ್ದು, ಒಟ್ಟು ನಾಲ್ಕು ಜನರಿಗೆ ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೇ ಇವರ ಗಂಟಲು ಹಾಗೂ ಸೋಂಕಿನ ಮಾದರಿಯನ್ನು ಬೆಂಗಳೂರು ಲ್ಯಾಬ್ ಗೆ ರವಾನೆ ಮಾಡಿತು.

Contact Your\'s Advertisement; 9902492681

ಈ ನಾಲ್ವರಲ್ಲಿ ಮೂವರ ವರದಿ ನೆಗೆಟಿವ್ ಬಂದಿರುವುದಾಗಿ ನಿನ್ನೆ ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು. ಇನ್ನೋರ್ವ ವ್ಯಕ್ತಿಯ ವರದಿಯಲ್ಲಿ ಕೊರೋನಾ ವೈರಸ್ ಪಾಸಿಟಿವ್ ಅಂಶ ಇರುವುದು ಬೆಳಕಿಗೆ ಬಂದಿದೆ. ಮೃತ ವೃದ್ಧನ ಜೊತೆ ನೇರ ಸಂಪರ್ಕ ಹೊಂದಿದ್ದ 45 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ರೋಗಿಗೆ ಇ.ಎಸ್.ಐ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here