ಕಲಬುರಗಿ ಮಹಾಜನತೆ ಭಯಪಡುವ ಅವಶ್ಯಕತೆವಿಲ್ಲ: ಸಚಿವ ಬಿ.ಶ್ರೀರಾಮುಲು

0
104
ಕಲಬುರಗಿ: ಕೊರೋನಾ ವೈರಸ್ ಸೊಂಕು ಕುರಿತು ಕಲಬುರಗಿ ಮಹಾಜನತೆ ಅನಗತ್ಯವಾಗಿ ಭಯಪಡುವ ಅವಶ್ಯಕತೆ ಇಲ್ಲ. ಸರ್ಕಾರವು ಎಲ್ಲಾ ಮುನ್ನೆಚರಿಕೆ ಕ್ರಮ ಕೈಗೊಂಡಿದೆ ಎಂದು ಅರೋಗ್ಯ ಸಚಿವ ಬಿ‌.ಶ್ರೀರಾಮುಲು ಹೇಳಿದ್ದಾರೆ.
ರವಿವಾರ ಇಲ್ಲಿನ್ ಜಿಮ್ಸ್ ಅಸ್ಪತ್ರೆಗೆ ಭೇಟಿ ನೀಡಿದ ಸಚಿವರು ಮುಂಜಾಗ್ರತವಾಗಿ ಕೊರೋನಾ ವೈರಸ್ ಶಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸ್ಥಾಪಿಸಲಾಗಿರುವ ತಲಾ 6 ಬೆಡ್ ಗಳ ಪುರುಷ ಮತ್ತು ಮಹಿಳಾ ಐಸೋಲೇಷನ್ಸ್ ವಾರ್ಡ್ ವೀಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ವಿದೇಶದಿಂದ ಮರಳಿದ ಕಲಬುರಗಿ ವಯೋವೃದ್ಧ ಕೊರೋನಾ ಸೊಂಕಿನಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸದರಿ ವ್ಯಕ್ತಿಯ ವಾಸದ ವಾರ್ಡನ್ನು ಕಂಟೇನ್ ಮೆಂಟ್ ಝೋನ್ ಎಂದು ಮತ್ತು ಕಂಟೇನ್ಮೆಂಟ್ ಝೋನ್ ನಿಂದ ಐದು ಕಿ.ಮಿ. ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಗುರುತಿಸಿ ಸ್ಕ್ರೀನಿಂಗ್ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಭರದಿಂದ ನಡೆಯುತ್ತಿದೆ. ಹೀಗಾಗಿ ಅನಗತ್ಯ ಆತಂಕ ಬೇಡ, ಎಚ್ಚರಿಕೆಯಿಂದಿದ್ದರೆ ಸಾಕು ಎಂದು ಸಚಿವರು ಹೇಳಿದರು.
ಎಲ್ಲರು ಮಾಸ್ಕ್ ಧರಿಸುವ ಅವಶ್ಯಕತೆವಿಲ್ಲ. ಅಗತ್ಯ ವ್ಯಕ್ತಿಗಳು ಧರಿಸಿದರೆ ಸಾಕು. ಹೀಗಾಗಿ ರಾಜ್ಯದ ಜನತೆ ಕೊರೋನಾ ವೈರಸ್ ಪಾಸಿಟಿವ್ ಅಥವಾ ನೆಗೆಟಿವ್ ಕುರಿತು ಭಯಪಡಬೇಕಿಲ್ಲ. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿ ಸೊಂಕು ಹರಡದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.
ಕಲಬುರಗಿಗೆ ವಿದೇಶದಿಂದ ಮರಳಿದ ಎಲ್ಲಾ ವ್ಯಕ್ತಿಗಳಿಗೆ ಹೋಮ್ ಐಸೊಲೇಷನ್ನಲ್ಲಿ ಇಟ್ಟು ನಿಗಾ ವಹಿಸಲಾಗುತ್ತಿದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಸಚಿವರು ನಂತರ ಇ.ಎಸ್.ಐ.ಸಿ ಅಸ್ಪತ್ರೆಗೂ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಡಾ.ಅವಿನಾಶ್ ಜಾಧವ್, ಕನೀಸ್ ಫಾತಿಮಾ, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್ , ಕಲಬುರಗಿ ಜಿಮ್ಸ್ ಆಸ್ಪತ್ರೆಯ ಡೀನ್ ಡಾ.ಕವಿತಾ ಪಾಟೀಲ್, ವೈದ್ಯಕೀಯ ಅಧೀಕ್ಷಕ ಡಾ.ಮಹಮ್ಮದ್ ಶಫಿಯುದ್ದಿನ್, ಇ‌.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ಡೀನ್ ಡಾ.ಎಲ್.ನಾಗರಾಜ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here