ಕಲಬರುಗಿ: ವಿಶ್ವದಲ್ಲಿ ಕಾಣಿಸಿಕೊಂಡಿರುವ ಕೂರೋನಾ ವೈರಸ್ನಿಂದ ಜನತೆ ಭಯ ಬಿತಿಗೊಂಡಿದ್ದು ಜನರ ಆರೋಗ್ಯದ ಹಿತ ದೃಷ್ಟಿಯಿಂದ ಜಿಡಗಾ ಮುಗುಳಖೋಡ ಸೇರಿದಂತೆ ಕರ್ನಾಟಕ. ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಮೊದಲು ಮಾಡಿಕೊಂಡು ನಮ್ಮ ಭವ್ಯ ಶ್ರೀಮಠದ ಪರಂಪರೆಯಲ್ಲಿರುವ 380ಕ್ಕಿಂತ ಹೆಚ್ಚಿನ ಶಾಖಾಮಠಗಳ ಆಶ್ರಮಗಳ ನಡೆಯುವ ಉತ್ಸವ ಜಾತ್ರೆ ಸೇರಿದಂತೆ ವಿವಿಧ ಭಕ್ತ ಸಮೂಹ ಒಂದುಗೂಡಿ ಆಚರಿಸುವ ಸಮಾರಂಭಗಳನ್ನು ಮುಂದೂಡಲಾಗಿದೆ ಎಂದು ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಡಾ ಮುರುಘಾ ರಾಜೇಂದ್ರ ಮಹಾಶಿವಯೋಗಿಗಳು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಪೂಜ್ಯರು ಕೂರೋನಾ ಹರಡದಂತೆ ತಡೆಗಟ್ಟುವುದು ಅವಶ್ಯವಾಗಿದ್ದು ಈಗಾಗಲೇ ಸರ್ಕಾರ ಅತಂತ್ಯ ಕಾಳಜಿಯಿಂದ ರೋಗ ಹತೋಟಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು ಜನ ಸಹ ಸರ್ಕಾರದ ಅದರೊಟ್ಟಿಗೆ ಕೈಗೃಡಿಸುವುದು ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಶ್ರೀ ಮಠದ ಸಭೆ ಸಮಾರಂಭ ವಾತಾವರಣ ತಿಳಿಗೊಳ್ಳುವ ತನಕ ಮುಂದೂಡಲಾಗಿದ್ದು ಭಕ್ತಾದಿಗಳು ಸರ್ಕಾರ ಮತ್ತು ವೈದ್ಯರು ಸೂಚಿಸಿದ ಸಲಹೆ ಸೂಚನೆಯಂತೆ ನಡೆದುಕೊಳ್ಳುವಂತೆ ಪೂಜ್ಯರು ಭಕ್ತರಿಗೆ ಕರೆ ನೀಡಿದ್ದಾರೆ.
ಜನ ಸೇರುವ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟು ತಹ ಪೂಜಿ ಪ್ರಾರ್ಥಿನೆ ಮಾಡುವ ಬದಲು ತಮ್ಮ ತಮ್ಮ ಮನೆಯಲ್ಲಿ ಕುಳಿತು ಪೂಜಿ ಪುನಾಸ್ಕಾರ ಮಾಡುವಂತೆ ಸೂಚಿಸಿದ್ದಾರೆ.