ಕಲಬುರಗಿ: ಕೊರೋನಾ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಗಳನ್ನು ಇಂದಿನಿಂದ ಬಂದ್ ಮಾಡಲಾಗುತ್ತಿದೆ ಎಂದು ನಿನ್ನೆಯೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯ ವದಂತಿ ಹರಡಿಸಿದ ಹಿನ್ನೆಲೆ ಗಾಬರಿಗೊಂಡ ಬೈಕ್ ಸವಾರರು, ಕಾರಿನವರು ಒಮ್ಮೆಲೆ ಬಂಕ್ ಗಳತ್ತ ಧಾವಿಸಿದರು. ಕಳೆದ ರಾತ್ರಿಯು ರಶ್ಯ ಕಂಡಿತು. ಬೆಳ್ಳಂಬೆಳಗ್ಗೆಯೂ ವಾಹನಗಳು ಬಂಕ್ ತುಂಬಿದ್ದವು.
ಇದರಿಂದಾಗಿ ನಗರದ ಕೆಲ ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳು ರಶ್ ಆದವು. ಹೀಗೆ ಬಂದವರು ಸರದಿಯಲ್ಲಿ ನಿಂತು ವಾಹನಗಳಿಗೆ ಎಣ್ಣೆ ಹಾಕಿಸಿಕೊಂಡರು. ಆದರೆ, ಬಂಕ್ ಬಂದ್ ಆಗಲ್ಲ ಚಾಲೂ ಇರುತ್ತದೆ ಎಂದು ಬಂಕ್ ನವರು ಹೇಳಿದ ನಂತರ ಕೆಲವರು ವಾಪಸು ಹೋಗುತ್ತಿದ್ದಾರೆ. ಇದು ಕೇಳಿ ವಾನಹದವರು ನಿರುಮ್ಮಳಗೊಂಡರು.
ಈ ಮೊದಲೇ ಜಿಲ್ಲಾಧಿಕಾರಿಗಳು ಎಲ್ಲ ಅಗತ್ಯ ಸೇವೆ ಲಭ್ಯವಿರಲಿವೆ ಎಂದು ಹೇಳಿದ್ದರು.