ಕೊರೋನಾ ಭೀತಿ ಅಂಗಡಿಗಳು ಬಂದ್ ಜಿಲ್ಲಾಡಳಿತ ಆದೇಶ

0
115

ಶಹಾಬಾದ: ಕೊರೊನಾ ವೈರಸ್ ಮಹಾಮಾರಿ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ತಾಲೂಕಾಢಳಿತ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದರೂ, ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು ಅಂಗಡಿ ಮುಚ್ಚದೇ ನಿರ್ಲಕ್ಷ್ಯ ಭಾವನೆ ತೋರುತ್ತಿರುವುದು ಗಮನಿಸಿ ತಹಸೀಲ್ದಾರ ಸುರೇಶ ವರ್ಮಾ, ಪೌರಾಯುಕ್ತ ವೆಂಕಟೇಶ, ಪಿಐ ಅಮರೇಶ.ಬಿ, ಆರೋಗ್ಯ ನಿರೀಕ್ಷರಾದ ಶಿವರಾಜಕುಮಾರ ಅವರ ತಂಡ ನಗರದಲ್ಲಿ ಸಂಚರಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚಿಸಿದರು.

ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದ್ರಿಂದ ಸರ್ಕಾರದ ನಿರ್ಧೇಶನದಂತೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಆದೇಶ ಮಾಡಿದ್ದರೂ, ಜನರು ಅಸಡ್ಡೆ ತೋರುತ್ತಿದ್ದಾರೆ. ಕೊರೊನಾ ವೈರಸ್ ಹರಡದಂತೆ ಅಂಗಡಿಗಳನ್ನು ಮುಚ್ಚಲು ಹೇಳಿದ್ದರೂ ಮುಚ್ಚುತ್ತಿಲ್ಲ.ಅಲ್ಲದೇ ಸ್ಥಳಕ್ಕೆ ಹೋಗಿ ಮುಚ್ಚಿಸಲಾಗುತ್ತಿದೆ.ಆದರೂ ಮತ್ತೆ ಅಲ್ಲಿಂದ ಅಧಿಕಾರಿಗಳು ತೆರಳಿದ ನಂತರ ಮತ್ತೆ ಅಂಗಡಿಗಳನ್ನು ತೆರೆದು ಪ್ರಾರಂಭ ಮಾಡುತ್ತಿದ್ದಾರೆ. ದೇಶದ ಜನರ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮಕ್ಕೂ ಜನರು ಸಹಕಾರ ನೀಡದಿರುವುದರಿಂದ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

Contact Your\'s Advertisement; 9902492681

ಕಿರಾಣ ಅಂಗಡಿ, ಹಾಲು, ಹಣ್ಣು, ತರಕಾರಿ, ಔಷಧಿ ಮಳಿಗೆಗಳನ್ನು ಹೊರತು ಪಡಿಸಿ ಎಲ್ಲಾ ಅಂಗಡಿಗಳು ಬಂದ್ ಆಗಲಿವೆ. ಜನರಿಗೆ ಬೇಕಾದ ಅಗತ್ಯ ವಸ್ತುಗಳಾದ ಕಿರಾಣಾ ಅಂಗಡಿಯವರು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಸಾಯಂಕಾಲ 4 ಗಂಟೆಯಿಂದ 8 ಗಂಟೆಯವರೆಗ ಮಾತ್ರ ತೆರೆಯತಕ್ಕದ್ದು. ಯಾವುದೇ ಕಾರಣಕ್ಕೂ ಪಾನ್‍ಶಾಪ್ ತೆರೆಯುವಂತಿಲ್ಲ. ಒಂದು ವೇಳೆ ಆದೇಶ ಉಲ್ಲಂಘಿಸಿದರೇ ಅವರ ವಿರುದ್ಧ ಎಫ್‍ಆರ್‍ಐ ದಾಖಲಿಸಲಾಗುವುದು. – ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.

ಮುಂದಿನ ಏಳು ದಿನಗಳವರೆಗೆ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ತೆರೆಯುವಂತಿಲ್ಲ. ಅಲ್ಲದೇ ಕದ್ದು ಮುಚ್ಚಿ ಮದ್ಯ ಮಾರಾಟ ಹಾಗೂ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹವರು ಯಾರಾದರೂ ಸಿಕ್ಕಿ ಬಿದ್ದರೇ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೆವೆ. ಜನರಿಗೆ ಬೇಕಾದ ಅಗತ್ಯ ವಸ್ತುಗಳಾದ ಕಿರಾಣಾ ಅಂಗಡಿ, ಹಾಲು, ಹಣ್ಣು, ತರಕಾರಿ, ಔಷಧಿ ಮಳಿಗೆಗಳನ್ನು ಎಂದಿನಂತೆ ತೆರೆಯಲಿವೆ.ಯಾವುದೇ ಕಾರಣಕ್ಕೂ ಇದನ್ನು ಬಿಟ್ಟು ಬೇರೆ ಅಂಗಡಿಗಳು ತೆರೆದಿದ್ದು ಕಂಡು ಬಂದರೇ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು.ಅಲ್ಲದೇ ಜಿಲ್ಲಾಧಿಕಾರಿಗಳ ಆದೇಶ ಬರುವವರೆಗೂ ಈ ಕ್ರಮ ಮುಂದುವರಿಯುತ್ತದೆ ಎಂದು ತಿಳಿಸಲಾಗಿದೆ. ಆರೋಗ್ಯ ನಿರೀಕ್ಷರಾದ ಶಿವರಾಜಕುಮಾರ, ಶರಣು, ರಾಜೇಶ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here