ಕೊರೋನಾ ತಡೆಗೆ ಮಹತ್ವದ ನಿರ್ಣಯ ಕೈಗೊಳ್ಳಲು ಡಾ. ಚುಲಬುಲ್ ಆಗ್ರಹ

0
34

ಕಲಬುರಗಿ: ಕೊರೋನಾ ವೈರಸ್ ದಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆ ಇನ್ನೂ ಕೇಲವು ಮುಂಜಾಗ್ರತಾ ಮಹತ್ವ ನಿರ್ಣಯ ತೆಗೆದುಕೊಳ್ಳಬೇಕೆಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಮೊಹಮ್ಮದ್ ಅಜಗರ್ ಚುಲಬುಲ್ ಒತ್ತಾಯಿಸಿದ್ದಾರೆ.

ಪೊಲೀಸ್, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗ ಕಲಬುರಗಿಯಲ್ಲಿ ಕೊರೋನಾ ವಿರುದ್ಧ ಉತ್ತಮ ಹಾಗೂ ಸೂಕ್ಷ್ಮವಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ರಕ್ಷಣೆಗೆ ಹಗಲಿರುಳು ಶ್ರಮಿಸುತಿರುವುದು ಶ್ಲಾಘನೀಯ, ಇಂತಹ ಜಿಲ್ಲಾಧಿಕಾರಿಗೆ ಕಲಬುರಗಿ ನಿವಾಸಿ ಹಾಗೂ ಪ್ರಜೆಗಳು ಸರ್ವ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸಿ ಪತ್ರದಲ್ಲಿ ಅಭಿನಂದಿಸಿದ್ದಾರೆ.

Contact Your\'s Advertisement; 9902492681

ವೈರಸ್ ಹಾವಳಿ ಮತ್ತಷ್ಟು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾ.31ರ ವರೆಗೆ ಸೋಂಕು ತಡೆಗೆ ಬಂದ್ ವಿಸ್ತರಣೆ ಹಾಗೂ ತುರ್ತು ಪರಿಸ್ಥಿತಿ ಘೋಷಿಸಿದ್ದು, ಕೋವಿಡ್-19 ನಾವು ಖಂಡಿತವಾಗಿ ಸೋಲಿಸಬಹುದು. ತಕ್ಷಣ ಜಿಲ್ಲಾದ್ಯಂತ ಕೊರೋನಾ ವೈರಸ್ ಪತ್ತೆ ಹಚ್ಚು ಪ್ರಯಕೊರೋನಾ ವೈರಸ್ ಟೆಸ್ಟಿಂಗ್ ಲ್ಯಾಬಗಳನ್ನು ತೆರೆಯಬೇಕು. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರ ಜಿಲ್ಲೆಯ ಎಲ್ಲಾ ತಾಲ್ಲೂಕು ವಿಶೇಷವಾಗಿ ನಗರದ, ಸೋನಿಯಾ ಗಾಂಧಿ, ಎಸ್.ಎಂ ಕೃಷ್ಣ, ಜಫರಾಬಾದ್ ಹಾಗೂ ಇತರೆ ಆಶ್ರಯ ಕಾಲೋನಿ, ಡಾ. ಅಂಬೇಡ್ಕರ್ ಹಾಗೂ ಅಟಲ್ ಬಿಹಾರಿ ವಾಜಪೇಯಿ ಆಶ್ರಯ ಕಾಲೋನಿ ಬಡಾವಣೆಗಳ ಕೂಲಿ ಕಾರ್ಮಿಕರಿಗೆ 15 ದಿನ ಉಟ, ರೋಷನ್‌, ಸನಿಟೈಜರ್ ಮತ್ತು ಮಾಸ್ಕ್ ಕಲ್ಪಿಸಬೇಕು.

ಕಾರ್ಖಾನೆ ಮತ್ತು ವಾಣಿಜ್ಯಾ ಉದ್ಯೋಮಗಳು ಬಂದ್ ಇರುವ ವಿದ್ಯುತ್ ಬಳಕೆಯಲ್ಲಿ ಕುಂಟಿತವಾಗಿದ್ದು,ಗೃಹ ಬಳಕೆಗೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಕೊರೋನಾ ವೈರಸ್ ಹರಡುವಿಕೆ ಕುರಿತು ಅವಿದ್ಯವಂತರಿಗೂ ಸಹ ಕಾರ್ಯ ನಡೆಸಬೇಕಿದ್ದು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವಶ್ಯಕ ಔಷಧಿ ಮತ್ತು ವೈದ್ಯರು ಉಪಸ್ಥಿತಿ ಇರು ರೀತಿಯಲ್ಲಿ ಕ್ರಮ ಜರುಗಿಸಬೇಕೆಂದರು.

ಕೋವಿಡ್-19 ಜಾಗ್ರತಿ ಕರ ಪತ್ರ, ಹ್ಯಾಂಡ್ ಬಿಲ್ ಗಳು ಕನ್ನಡ, ಇಂಗ್ಲಿಷ್ ಮತ್ತು ಉರ್ದುವಿನಲ್ಲಿ ಪ್ರಕಟಿಸಿ, ಪಾಲಿಕೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಗೆ ಮತ್ತು ಪೌರಕಾರ್ಮಿಕರಿಗೆ ಕೊರೋನಾ ತಗಲದಿರುವ ರೀತಿಯಲ್ಲಿ ಮತ್ತು ಮುನ್ನೆಚ್ಚರಿಗಾಗಿ ಮಾಸ್ಕ್, ಹ್ಯಾಂಡ್ ಗ್ಲೋಸ್ ಮತ್ತು ಸನಿಟೈಜರ್ ಗಳು ಉಚಿತವಾಗಿ ವಿತರಿಸಲು ಸೂಚಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here