ಸುರಪುರ: ಇಡೀ ಜಗತ್ತೆ ಇಂದು ಕೊರೊನಾ ವೈರಸ್‌ಗೆ ನಲುಗಿದೆ.ನಾಲ್ಕಕ್ಕಿಂತ ಹೆಚ್ಚು ಜನ ಕಂಡಬಂದಲ್ಲಿ ಕಾನೂನು ಕ್ರಮ ಜರುಗಿಸುವ ಆದೇಶವಿದೆ.ಆದರೆ ಮಸೀದಿಗಳಲ್ಲಿ ಗುಂಪು ಗುಂಪಾಗಿ ಜನ ಸೇರಿ ನಮಾಜ್ ಮಾಡುವುದರಿಂದ ಸೊಂಕು ಹರಡುವ ಸಾಧ್ಯತೆ ಇರುತ್ತದೆ.ಆದ್ದರಿಂದ ನಿಮ್ಮ ಮನೆU?ಳಲ್ಲಿ ನಮಾಜ್ ಮಾಡಿ ಕೊರೊನಾ ದಿಂದ ಇಡೀ ದೇಶವೆ ಲಾಕ್‌ಡೌನ್ ಇರುವಾಗ ಮಸೀದಿಗಳಲ್ಲಿ ನಮಾಜ್ ಮಾಡಬೇಡಿ ಎಂದು ಆರಕ್ಷಕ ನಿರೀಕ್ಷಕ ಎಸ್.ಎಮ್.ಪಾಟೀಲ ತಿಳಿಸಿದರು.
ನಗರದ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಮುಸ್ಲಿಂ ಸಮುದಾಯದ ಮೌಲ್ವಿಗಳು ಹಾಗು ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಎ.೧೪ ರ ವರೆಗೆ ಹೆಚ್ಚು ಜನ ಸೇರದಂತೆ ನಿರ್ಬಂಧವಿದೆ ಎಲ್ಲಾ ಮಸೀದಿ, ಚರ್ಚ, ದೇವಸ್ಥಾನಗಗಳನ್ನು ಲಾಕಡೌನ ಮಾಡಿಸಲಾಗಿದೆ ಆದರು ಕೆಲವರು ಮಸೀದಿಗಳಿಗೆ ಬಂದು ನಮಾಜ ಮಾಡುವುದು ಸರಿಯಲ್ಲಾ ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳುವಂತೆ ತಿಳಿಸಿದರು.
ನಂತರ ಮುಸ್ಲೀಂ ಬಾಂಧವರು ಮಾತನಾಡಿ, ಮಸೀದಿಯಲ್ಲಿ ನಮಾಜ ಮಾಡಲು ಐದು ಜನರಿಗೆ ಅವಕಾಶ ಕಲ್ಪಸಬೇಕು ಎಂದು ವಿನಂತಿಸಿದರು,ಇದಕ್ಕೆ ಒಪ್ಪದ ಪಿಐ ಮೇಲಾಧಿಕಾರಿಗಳೂಂದಿಗೆ ಮಾತನಾಡಿದ ನಂತರ ಇಬ್ಬರಿಗೆ ಅವಕಾಶ ಕಲ್ಪಸಲು ಮೇಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ,ಅದರಂತೆ ಇಬ್ಬರು ಮಾತ್ರ ನಮಾಜ್ ಮಾಡಿ ಐದು ನೀಮಿಷದ ವರೆಗೆ ನಂತರ ಮಸೀದಿಯಿಂದ ಕಂಕೈರ್ಯಗಳನ್ನು ಮುಗಿಸಿಕೊಂಡು ತಮ್ಮ ಮನೆಗಳಿಗೆ ತೆರಳಬೇಕು ಊಳಿದ ಜನ ನಮಾಜನ ಸಮಯಕ್ಕೆ ಅವರವರ ಮನೆಯಲ್ಲಿಯೆ ಪ್ರಾರ್ಥಿಸಬೇಕು ಹಾಗೇನಾದರು ಮತ್ತೆ ಮಸೀದಿಯಲ್ಲಿ ಜನ ಜಾಸ್ತಿ ಕಂಡರೆ ಅವರ ಮೇಲೆ ಪ್ರಕರಣವನ್ನು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಇದಕ್ಕೆ ಒಪ್ಪಿದ ಮುಖಂಡರು ಇಬ್ಬರು ನಮಾಜ್ ಮಾಡುತ್ತಾರೆ ಈದು ನಿಮಿಷದ ನಂತರ ತೆರಳುವುದಾಗಿ ಒಪ್ಪಿದರು.
ಈ ಸಂದರ್ಭದಲ್ಲಿ ಪೇದೆಗಳಾದ ಚಂದ್ರಶೇಖರ,ಶಿವಪ್ಪ,ಮಂಜುನಾಥ ಸ್ವಾಮಿ,ಉಮಾಕಾಂತ ಹಾಗು ಮುಖಂಡರಾದ ನಗರಸಭಾ ಸದಸ್ಯ ನಾಸೀರ ಹುಸೇನ್ ಕುಂಡಾಲೆ, ಖಾಜಾ ಸೈಮ್ಯೂಲ ರೆಹಮಾನ ಅನ್ಸಾರಿ, ಖಾಜಾ ಖಲೀಲ ಅಹ್ಮದ್ ಅರಕೇರಿ, ಲೀಯಾಖತ್ ಹುಸೇನ ಉಸ್ತಾದ್, ಅಬ್ದುಲ್ ಮಜೀದ ಖುರೇಶಿ, ಖಾಲೀದ್ ಅಹ್ಮದ್ ತಾಳಿಕೊಟಿ, ಅಬೀದ್ ಹುಸೇನ ಪಗಡಿ, ಸೈಯದ್ ಭಕ್ತಿಯಾರ್, ಶಕೀಲ್ ಅಹ್ಮದ್ ಸೌದಾಗರ್ ಸೇರಿದಂತೆ ಇನ್ನಿತರರಿದ್ದರು.