ನಾಳೆಯಿಂದ ಜಿಲ್ಲಾದ್ಯಂತ ಪೆಟ್ರೋಲ್-ಡೀಸೆಲ್ ಸಿಗಲ್ಲ

0
109

ಕಲಬುರಗಿ, ಚಿತ್ತಾಪುರ: ಜಿಲ್ಲೆಯಲ್ಲಿ ಕೊರೊನ್ ವೈರಸ್ ಸೋಂಕಿಗೀಡಾಗಿದ್ದ ವೃದ್ಧರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಜರುಗಿಸುವ ನಿಟ್ಟಿನಲ್ಲಿ, ಕಲಬುರ್ಗಿ ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ ಪೆಟ್ರೋಲ್ ಡೀಸೆಲ್ ಬಂಕ್ ಮುಚ್ಚುವುದು ಅತ್ಯಾವಶ್ಯಕವಾಗಿ ಇರುತ್ತದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆ ಇಂದು ಚಿತ್ತಾಪುರ ಪಟ್ಟಣ ಸೇರಿ ಹಳ್ಳಿಗಳ ಜನರು ಪೆಟ್ರೋಲ್ ಡೀಸೆಲ್ ಭರಿಸಲು ಮತ್ತು ಕೆಲವು ದಿನಗಳಿಗಾಗಿ ಹೆಚ್ಚು ಪೆಟ್ರೋಲ್ ಪಡಿಬೇಕೆಂದು ಇಂದು ಸಂಜೆ ಸುಮಾರು 8 ಗಂಟೆಯಿಂದ  ಜನರು ಪೆಟ್ರೋಲ್ ಬಂಕಿಗೆ ಮುಗಿಬಿದ್ದಿದ್ದಾರೆ.

Contact Your\'s Advertisement; 9902492681

ಈ ಸಮಯಕ್ಕೆ ಪಿಎಸ್ಐ  ಶ್ರೀಶೈಲ ಅಂಬಾಟಿ ಸ್ಥಳಕ್ಕೆ ಆಗಮಿಸಿ ಪೆಟ್ರೋಲ್ ಬಂಕಿನ ಮಾಲೀಕರಿಗೆ ನಾಳೆಯಿಂದ ಪೆಟ್ರೋಲ್ ಡೀಸೆಲ್ ಸಾಮಾನ್ಯ ಸಾರ್ವಜನಿಕರಿಗೆ ಹಾಕಕೂಡದು ಎಂದು ಸೂಚನೆ ನೀಡಿದ್ದಾರೆ.

ಈ ವೇಳೆಯಲ್ಲಿ ಪೆಟ್ರೋಲ್ ಡೀಸೆಲ್ ಗಾಗಿ ಮುಗಿಬಿದ್ದ ಜನರನ್ನು ದೂರ ದೂರ ನಿಂತು ಬೇಗ ಬೇಗನೆ ಪೆಟ್ರೋಲ್-ಡೀಸೆಲ್ ತೆಗೆದುಕೊಂಡು ಹೋಗಿ ಎಂದು ಪೆಟ್ರೋಲ್ ಪಡೆಯಲು ಪರದಾಡುತ್ತಿರುವ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳಬೇಕೆಂದು ತಾಕೀತು ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here