ಕೊರೋನಾ ಭೀತಿ: ಮುಂದಿನ ಆದೇಶವರೆಗೆ ಪೆಟ್ರೋಲ್ ಬಂಕ್ ಬಂದ್: ಡಿಸಿ ಶರತ್ ಬಿ

0
163

ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿಗೀಡಾಗಿದ್ದ ವೃದ್ದರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮ ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ ಪೆಟ್ರೋಲ್ ಬಂಕ್ ಮುಚ್ಚುವುದು ಅತ್ಯವಶ್ಯಕ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ ಕಾಯ್ದೆ 1973 ರ ಕಲಂ 133 ರನ್ವಯ ಅಧಿಕಾರ ಚಲಾಯಿಸುವ ಮೂಲಕ, ಮುಂದಿನ ಆದೇಶದವರೆಗೆ ಜಿಲ್ಲೆಯ ಎಲ್ಲ ಪೆಟ್ರೋಲ್ ಬಂಕ್ ಮುಚ್ಚುವಂತೆ ಷರತ್ತುಬದ್ಧ ಆದೇಶ ಹೊರಡಿಸಿದ್ದಾರೆ.

Contact Your\'s Advertisement; 9902492681

ಯಾರಿಗೆಲ್ಲ ಸಿಗುತ್ತೆ ಪೆಟ್ರೊಲ್: ಈ ಆದೇಶವು ಸರಕಾರಿ ವಾಹನಗಳಿಗೆ, ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗಳಿಗೆ ಎಲ್ಲಾ ತರಹದ ಅಂಬುಲೆನ್ಸ್ ಗಳಿಗೆ, ಔಷಧ ವ್ಯಾಪಾರಿಗಳಿಗೆ, ಪತ್ರಕರ್ತರಿಗೆ, ಕೇವಲ ಅವಶ್ಯಕ ಸೇವಾ ವ್ಯಾಪ್ತಿಯೊಳಪಡುವ ಇಲಾಖೆಗಳು ಹಾಗೂ ಸರಕಾರಿ ನೌಕರರಿಗೆ ಅನ್ವಯಿಸತಕ್ಕದ್ದಲ್ಲ, ಮೇಲಿನವರು ಇಂಧನ ಭರಿಸುವ ಸಮಯದಲ್ಲಿ ಕಡ್ಡಾಯವಾಗಿ ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿ ಇಂಧನ ಪಡೆಯ ಬಹುದೆಂದು ಸೂಚಿಸಿದ್ದಾರೆ.

ಸುದ್ದಿ ತಿಳಿಯುತಿದಂತೆ ಜನರು ಪೆಟ್ರೋಲ್ ತುಂಬಿಕೊಳಲ್ಲು ಪೆಟ್ರೋಲ್ ಬಂಕ್ ದೌಡಾಯಿಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here