ಮಾಸ್ಕ್ ಕೊರತೆ ನೀಗಿಸಲು ಮುಂದಾದ ಯುವತಿಯರು: 2500 ಮಾಸ್ಕ್ ಉಚಿತ ವಿತರಣೆಯ ಗುರಿ

0
107
  • ಮಡಿವಾಳಪ್ಪ ಹೇರೂರ

ವಾಡಿ: ಮರಣ ಮೃದಂಗ ಭಾರಿಸುತ್ತಿರುವ ಕೊರೊನಾ ವೈರಸ್ ಮಾನವ ದೇಹ ಪ್ರವೇಶಿಸದಂತೆ ತಡೆಯಲು ಮಾಸ್ಕ್ ಅತ್ಯಂತ ಸುರಕ್ಷತಾ ಕವಚಬಾಗಿದ್ದು, ಎಲ್ಲೆಡೆ ಅವುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೊರತೆಯೂ ಉಂಟಾಗಿದೆ. ದುಡ್ಡು ಕೊಟ್ಟರೂ ಮೇಡಿಕಲ್‌ಗಳಲ್ಲಿ ಮಾಸ್ಕ್‌ಗಳು ಸಿಗುತ್ತಿಲ್ಲ. ಸಾಮಾನ್ಯ ಜನರಿಗೆ ಕೈಗೆಟಕುವಂತಹ ಮಾಸ್ಕ್ ಗಗನಕುಸುಮವಾಗಿವೆ. ಇಂತಹ ಸಂದರ್ಭದಲ್ಲಿ ಜನರಿಗೆ ಉಚಿತವಾಗಿ ಮಾಸ್ಕ್ ವಿತರಿಸಲು ಮುಂದಾಗಿರುವ ಹೊಲಿಗೆ ತರಬೇತಿ ಕೇಂದ್ರವೊಂದರ ಯುವತಿಯರು, ಮುಖಗವಚ ಹೊಲಿಯುವಲ್ಲಿ ನಿರತರಾಗಿದ್ದಾರೆ.

ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಮೆರಿಟ್ಯೂಡ್ ಸ್ಕಿಲ್ ಡೆವಲಪ್‌ಮೆಂಟ್ ಆದೀನದ ಕೌಶಲ್ಯ ಕರ್ನಾಟಕ ಸಂಸ್ಥೆಯ ಹೊಲಿಗೆ ತರಬೇತಿ ಕೇಂದ್ರದ ಸುಮಾರು ೫೦ಕ್ಕೂ ಹೆಚ್ಚು ಜನ ಮುಸ್ಲಿಂ ಯುವತಿಯರು, ಕಳೆದ ಮೂರು ದಿನಗಳಿಂದ ಮಾಸ್ಕ್ ಸಿದ್ಧತೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈಗಾಗಲೆ ೭೦೦ ಮಾಸ್ಕ್‌ಗಳ ಹೊಲಿಗೆ ಕಾರ್ಯ ಪೂರ್ಣಗೊಳಿದ್ದಾರೆ. ಔಷಧ ಲಭ್ಯವಿಲ್ಲದ ಕೊರೊನಾ ವೈರಸ್ ಜನರಲ್ಲಿ ಸಾವಿನ ಭಯ ಹುಟ್ಟಿಸಿದ್ದು, ಕೈಗಳ ಸ್ವಚ್ಚತೆ ಹಾಗೂ ಮಾಸ್ಕ್‌ಗಳ ಸುರಕ್ಷತೆಯೊಂದಿಗೆ ಮಾತ್ರ ವೈರಸ್ ಹರಡದಂತೆ ತಡೆಯಬೇಕಾದ ಅನಿವಾರ್ಯತೆಯಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದರಿಂದ ಮಾಸ್ಕ್‌ಗಳ ಕೊರತೆ ದೊಡ್ಡಮಟ್ಟದಲ್ಲಿದೆ. ಜನರ ಜೀವ ಸುರಕ್ಷತೆ ದೃಷ್ಠಿಯಿಂದ ಬಟ್ಟೆ ಹೊಲೆಯುವ ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಮಾಸ್ಕ್ ಸಿದ್ಧತೆಗೆ ಮುಂದಾಗಿದೆ ಎಂದು ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಮಲ್ಲೇಕಾ ಖಾತೂನ್ ತಿಳಿಸಿದ್ದಾರೆ.

Contact Your\'s Advertisement; 9902492681

ಕೊರೊನಾ ವೈರಸ್ ವ್ಯಾಪಿಸುವುದನ್ನು ತಡೆಯಲು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಕರ್ಫ್ಯೂ ಜಾರಿಗೊಳಿಸುವ ಮೂಲಕ ನಗರದಲ್ಲಿ ಜನಸಂದಣಿಯನ್ನು ನಿಯಂತ್ರಿಸಲಾಗಿದೆ. ಮಾಸ್ಕ್ ಧರಿಸದೆ ಓಡಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಈ ಮಧ್ಯೆ ಜನರಿಗೆ ಅಗತ್ಯಕ್ಕೆ ತಕ್ಕಷ್ಟು ಮಾಸ್ಕ್‌ಗಳು ಲಭ್ಯವಾಗುತ್ತಿಲ್ಲ. ಸರಕಾರದಿಂದ ಪೂರೈಕೆಯಾಗುವಲ್ಲಿ ವಿಳಂಬವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೆರಿಟ್ಯೂಡ್ ಸ್ಕಿಲ್ ಡೆವಲಪ್‌ಮೆಂಟ್ ಸಂಸ್ಥೆಯ ಮಹಿಳೆಯರು ಕಡಿಮೆ ದರದಲ್ಲಿ ಉತ್ತಮ ಮಾಸ್ಕ್‌ಗಳನ್ನು ಸಿದ್ದಪಡಿಸಿ ಕೊಡುತ್ತಿರುವುದು ಸ್ವಾಗತಾರ್ಹ ಕಾರ್ಯವಾಗಿದೆ. – ವಿಜಯಕುಮಾರ ಭಾವಗಿ. ಪಿಎಸ್‌ಐ, ವಾಡಿ ಠಾಣೆ.

ಈ ಕುರಿತು ಪ್ರತಿಕ್ರೀಯಿಸಿರುವ ಕೌಶಲ್ಯ ಕರ್ನಾಟಕ ಸಂಸ್ಥೆಯ ಜಿಲ್ಲಾ ಮುಖ್ಯಸ್ಥ ಮಹ್ಮದ್ ಇಮ್ತೀಯಾಜ್, ಕೊರೊನಾ ಜಾಗೃತಿ ಹೆಚ್ಚಾಗುತ್ತಿದ್ದಂತೆ ಜನರು ಮಾಸ್ಕ್‌ಗಳಿಗಾಗಿ ಪರದಾಡುತ್ತಿದ್ದಾರೆ. ವಾಡಿ ನಗರದ ಸಾಮಾನ್ಯ ಜನರಿಗೆ ಒಟ್ಟು ೨೫೦೦ ಮಾಸ್ಕ್‌ಗಳನ್ನು ಸಂಸ್ಥೆ ವತಿಯಿಂದ ಉಚಿತವಾಗಿ ವಿತರಿಸಬೇಕು ಎಂಬ ಸೇವಾ ಮನೋಭಾವದ ಉದ್ದೇಶ ಹೊಂದಲಾಗಿದೆ. ನಮ್ಮ ಗುರಿಯನ್ನು ಮೀರಿ ಸ್ಥಳೀಯರಿಂದ ಬೇಡಿಕೆ ಎದುರಾದರೆ ಅತ್ಯಂತ ಕಡಿಮೆ ದರದಲ್ಲಿ ಮಾಸ್ಕ್‌ಗಳನ್ನು ಹೊಲಿದುಕೊಡಲಾಗುವುದು ಎಂದರು. ಕೊರೊನಾ ರೋಗದಿಂದ ಜನರನ್ನು ರಕ್ಷಿಸಲು ಮಾಸ್ಕ್ ತಯ್ಯಾರಿಕೆಗೆ ಮುಂದಾಗಿರುವ ಹೊಲಿಗೆ ತರಬೇತಿ ಕೇಂದ್ರದ ಸ್ವಯಂ ಉದ್ಯೋಗ ಕೌಶಲ್ಯದ ಯುವತಿಯರ ಈ ಕಾರ್ಯ ಮೆಚ್ಚುವಂತಹದ್ದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here