ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ: 10 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

0
95

ಕಲಬುರಗಿ: ಮಾರ್ಚ್ ೧೭ ರಂದು ನಾಲ್ಕುಜನ ದುಷ್ಕರ್ಮಿಗಳು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ನೇಣು ಬಿಗಿದು ಕೊಲೆಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕೊಲೆಯಾದ ಬಾಲಕಿಯ ಪಾಲಕರಿಗೆ ೧೦ ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕೆಂದು ಉಪ ಮುಖ್ಯಮಂತ್ರಿಗಳು, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ್ ಕಾರಜೋಳ ಅವರಿಗೆ ದಕ್ಷಿಣ ಮತಕ್ಷೇತ್ರದ ಬಿ.ಜೆ.ಪಿ.ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಎನ್ ಯಳಮೇಲಿಯವರು ಅವರು ಮನವಿ ಮಾಡಿದರು.

ಸದರಿ ಪ್ರಕರಣ ಮಾರ್ಚ್ ೧೮ ರಂದು ಎಫ್ ಐ ಆರ್ ಕೇಸ್ ಧಾಖಲಾಗಿದ್ದರೂ  ಒಬ್ಬನನ್ನು ಮಾತ್ರ ಬಂಧಿಸಿದ್ದಾರೆ. ಇನ್ನುಳಿದ ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸ ಇಲಾಖೆ ವಿಳಂಬ ಮಾಡುತ್ತಲಿದೆ. ಕೂಡಲೇ ಇನ್ನುಳಿದ ಅಪರಾಧಿಗಳನ್ನು ಬಂಧಿಸುವಂತೆ ಎಂದು ದಕ್ಷಿಣ ಮತಕ್ಷೇತ್ರದ ಬಿ.ಜೆ.ಪಿ.ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಎನ್ ಯಳಮೇಲಿಯವರು ಅವರು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಅಲ್ಲದೇ ಈ ಸಂದರ್ಭದಲ್ಲಿ ಕೊರೊನಾ ಸಂಬಂಧ ಜಿಲ್ಲೆ ಮತ್ತು ಭಾರತ ಲಾಕ್ ಡೌನ್ ಆದಕಾರಣ, ಈ ಕಾರಣವಿಟ್ಟುಕೊಂಡು ಪೊಲೀಸರು ಇನ್ನುಳಿದ ಅಪರಾಧಿಗಳನ್ನು ಬಂಧಿಸದೇ ಇರುವುದು  ವಿ?ದನೀಯವಾದದ್ದು.  ಮೇಲ್ನೋಟಕ್ಕೆ ಈ ಸಂದರ್ಭದಲ್ಲಿ ಪೊಲೀಸ ಇಲಾಖೆ ಈ ಪ್ರಕರಣವನ್ನು ಮುಚ್ಚಿಹಾಕಲು ಒಳಸಂಚು ನಡೆದಿದೆ ಎಂದು ತಿಳಿದು ಬಂದಿದೆ.   ಒಂದುವೇಳೆ  ಇಂಥ ಹೀನಾಯ ಕೃತ್ಯೆವೆಸಗಿದ ಅಪರಾಧಿಗಳನ್ನು ಬಂಧಿಸದೇ ಇದ್ದರೆ ಜಿಲ್ಲೆ ಮತ್ತು ರಾಜ್ಯಾಧ್ಯಾಂತ ಎಲ್ಲಾ ಪ್ರಗತಿಪರ ಸಂಘಟನೆಗಳು ಕೂಡಿ ಉಗ್ರವಾದ ಹೋರಾಟಕ್ಕೆ ಇಳಿಯುತ್ತೇವೆ.

ಈ ಸಾಮೂಹಿಕ ಅತ್ಯಾಚಾರ ನಿರ್ಭಯಳ ಪ್ರಕರಣದಂತೆ ಬಹು ದೊಡ್ಡದಾಗಿರುತ್ತದೆ. ಇಂಥ ಪ್ರಕರಣದ ದು? ಕಾಮುಕರನ್ನು ಬಂಧಿಸದಿದ್ದರೆ ಮುಂದಿನ ಪರಿಣಾಮ ಪೊಲೀಸ ಇಲಾಖೆ ಸಾರ್ವಜನಿಕರಿಂದ ಕೆಟ್ಟದಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆಂದು  ಕಲಬುರಗಿ ತಾಲೂಕಿನ ಕನ್ನಡ ಸಾಹಿತ್ವ ಪರಿ?ತ್ ಉಪಾಧ್ಯಕ್ಷರು,ಮತ್ತು ಕಲಬುರಗಿ ದಕ್ಷಿಣ ಮತಕ್ಷೇತ್ರದ ಬಿ.ಜೆ.ಪಿ.ರೈತ ಮೋರ್ಚ ಪ್ರಧಾನ ಕಾರ್ಯದರ್ಶಿಯವರಾದ ಭೀಮಾಶಂಕರ ಎನ್ ಯಳಮೇಲಿಯವರು ಗುರುರಾಜ್ ನಿಂಬಾಳ, ರವಿ ಪಾಟೀಲ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here