ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಕಲಂ 144 ಮತ್ತು ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಾವಶ್ಯಕ ಓಡಾಡುತ್ತಿದ 120 ಬೈಕ್ ಗಳು ಜಿಲ್ಲಾ ಪೊಲೀಸ್ ಇಲಾಖೆ ನಿನ್ನೆ ರಾತ್ರಿ ಜಪ್ತಿ ಮಾಡಿಕೊಂಡಿದ್ದಾರೆ.
ನಿನ್ನೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆದ ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ನಿಷೇಧಾಜ್ಞೆ ಉಲ್ಲಂಘಿಸಿ ಓಡಾಡುವರ ಬೈಕ್ ಗಳು ಜಫ್ತಿ ಮಾಡಿ, ದಿನಕ್ಕೆ ಕನಿಷ್ಠ 100 ಬೈಕ್ ವಶಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಬೈಕ್ ಜಪ್ತಿಯ ನಂತರ ಕಲಬುರಗಿ ನಗರ ಪೊಲೀಸ್ ಉಪ ಆಯುಕ್ತರಾದ ಕಿಶೋರ ಬಾಬು ಅವರು ಮಾತನಾಡಿ, ಸಚಿವರ ಆದೇಶದಂತೆ ಕೇವಲ 9 ಗಂಟೆಯಲ್ಲಿ 100ಕ್ಕೂ ಹೆಚ್ಚು ಅನಗತ್ಯವಾಗಿ ರಸ್ತೆ ಇಳಿದ ಬೈಕ್ ಜಪ್ತಿ ಮಾಡಿಕೊಳ್ಳಲಾಗಿದ್ದು, ಇದೇ ರೀತಿ ಮುಂದುವರಿದರೆ ಇನ್ನೂ ಹೆಚ್ಚು ವಾಹನಗಳು ಜಪ್ತಿ ಮಾಡಲಾವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಆಸ್ಪತ್ರೆ ಸೇರಿದಂತೆ ತೀರ ಅಗತ್ಯ ಮತ್ತು ತುರ್ತು ಸಂದರ್ಭದಲ್ಲಿ ಮಾತ್ರ ಹೊರಬಂದವರಿಗೆ ಅವಕಾಶವಿದೆ ಇದ್ದನ್ನು ದರ್ಬಳಕ್ಕೆ ಮಾಡಿಕೊಳಬಾರದೆಂದು ಈ ವೇಳೆಯಲ್ಲಿ ತಿಳಿಸಿದರು.