ಬಜಾಜ್ ಆಟೊ ಫೈನಾನ್ಸ್ ಇಎಂಐ ಕಟ್ಟುವಂತೆ ಒತ್ತಡ

1
156

ಯಾದಗಿರಿ,ಶಹಾಪುರ: ಮಹಾಮಾರಿ ಕರೋನಾ ವೈರಸ್  ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದೆ ಇಂಥ ಸಂದರ್ಭದಲ್ಲಿ ಬಜಾಜ್ ಆಟೊ ಫೈನಾನ್ಸ್ ನವರು ಇಎಂಐ ಕಟ್ಟುವಂತೆ ಗ್ರಾಹಕರಿಗೆ ಒತ್ತಡ ಹೇರುತ್ತಿದ್ದಾರೆ.

ಒಂದೊತ್ತಿಗೂ ಊಟಕ್ಕೆ ತೊಂದರೆ ಇರುವಾಗ ಸಾಕಷ್ಟು ಕಂಪನಿಗಳು ಕೊರೊನ್ ವೈರಸ್  ತಡೆಗಟ್ಟುವ ಹಿನ್ನೆಲೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಆದರೆ ಇಂಥ ಸಂದರ್ಭದಲ್ಲಿ ಬಜಾಜ್ ಆಟೊ ಫೈನಾನ್ಸ್ ನವರು ಇಎಂಐ ಕಟ್ಟುವಂತೆ ಒತ್ತಡ ಹೇರುತ್ತಿರುವುದು ಎಷ್ಟು ಸರಿ ಎಂಬುದು ಕಂಪನಿಯ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

Contact Your\'s Advertisement; 9902492681

ದುಡಿದು ಬದುಕುವ ಜನ ನಾವು ದುಡಿದರೆ ಮಾತ್ರ ಹಣ ಕಟ್ಟಲು  ಸಾಧ್ಯ ಇಲ್ಲದಿದ್ದರೆ ತುಂಬಾ ತೊಂದರೆಯಾಗುತ್ತದೆ ಎಂದು ಆಟೋ ಚಾಲಕ ವೀರೇಶ್ ತಮ್ಮ ಅಳಲನ್ನು ತೋಡಿಕೊಂಡರು ನನ್ನ ವಾಹನದ ಕಂತನ್ನು ಪ್ರತಿ ತಿಂಗಳು ೧ ನೇ ತಾರೀಖಿನಿಂದ ೭ನೇ ತಾರೀಖಿನ ಒಳಗಾಗಿ ಆಟೋ ಕಂತನ್ನು ಕಟ್ಟಬೇಕೆಂದು ಇದ್ದರೂ ಕೂಡ ಎರಡು ಮೂರು ದಿನಗಳಿಂದ ಕಲಬುರ್ಗಿಯ ಬಜಾಜ್ ಆಟೊ ಫೈನಾನ್ಸ್ ತೌಸಿಬ ಖಾನ್ ಎಂಬುವರು ಮೂರು ದಿನಗಳಿಂದ ನಮಗೆ ಫೋನ್ ಮಾಡುತ್ತಾ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಇಎಂಐ ಕಟ್ಟುವುದನ್ನು ಮೂರು ತಿಂಗಳವರೆಗೆ ಮುಂದೂಡಲಾಗಿದೆ ಎಂದು ಆದೇಶ ಹೊರಡಿಸಿದ್ದರೂ ಕೂಡ ಯಾವುದಕ್ಕೂ ಕ್ಯಾರೆ ಎನ್ನದೆ ಅದೇನು ಹೇಳಬೇಡಿ ಅದ್ಯಾವುದೂ ನಮಗೆ ಗೊತ್ತಿಲ್ಲ  ನೀವು ದುಡ್ಡು ಕಟ್ಟಲೇ ಬೇಕು ಎಂದು ಒತ್ತಡ ಹೇರಿ ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೇಳಿದರು.

1 ಕಾಮೆಂಟ್

  1. Please share this to TV media(Public TV). Bajaj Auto Finance Limited recovery team are torturing and like goondas. They work from Bajaj Auto Showroom (Srikalyan Bajaj. Kalaburagi). Owner of Showroom Arun Sir @9964205800 said that, Showroom and Finance people are different and no connection and Showroom not torturing.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here