ಫಿವರ್ ಸೆಂಟರ್‌ಲ್ಲಿ ಸಾಮಾಜಿಕ ಅಂತರ ಕಾಯದವರ ಕಂಡು ಬೇಸರಗೊಂಡ ಡಿಸಿ

0
73

ಸುರಪುರ: ನಗರದ ಆರೋಗ್ಯ ಕೇಂದ್ರದಲ್ಲಿ ತೆರೆಯಲಾದ ಫೀವರ್ ಸೆಂಟರ್‌ಗೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿಗಳು ಆಗಮಿಸಿದಾಗ ಫಿವರ್ ಪರೀಕ್ಷೆಗೆ ಬಂದಿದ್ದ ಜನರು ಸಾಮಾಜಿ ಅಂತರವನ್ನು ಕಾಯದೆ ಗುಂಪಾಗಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ನಂತರ ಅಧಿಕಾರಿಗಳೊಂದಿಗೆ ಮಾತನಾಡಿ, ಕೊರೊನಾ ಸಾಂಕ್ರಾಮಿಕ ರೋಗ,ಅದರ ತಪಾಸಣೆಗೆ ಬಂದವರು ಹೀಗೆ ಗುಂಪಾಗಿ ನಿಲ್ಲುವುದನ್ನು ನೀವೆಲ್ಲ ಗಮನಿಸದೆ ಏನು ಮಾಡುತ್ತಿರುವಿರಿ,ಇವರಿಗೆಲ್ಲ ಹೆರಗಡೆಯಿಂದ ಬಂದು ಊಟ ಕೊಡಲು ಯಾಕೆ ಬಿಟ್ಟಿರುವಿರಿ,ಇನ್ನೊಮ್ಮೆ ಯಾರೂ ಹೊರಗಡೆಯಿಂದ ಊಟ ತಂದು ಕೊಡುವುದನ್ನು ನಿರ್ಬಂಧಿಸುವಂತೆ ಖಡಕ್ ಸೂಚನೆ ನೀಡಿದರು.

Contact Your\'s Advertisement; 9902492681

ನಂತರ ತಪಾಸಣೆಗೆ ಬಂದವರು ಹೋಗಲು ಒಂದು ದ್ವಾರ ಮತ್ತು ಹೊರಗಡೆ ಬರಲು ಒಂದು ದ್ವಾರ ನಿರ್ಮಿಸಿ ಹಾಗು ಟಿಹೆಚ್‌ಒ ಕಚೇರಿಗೆ ಹೋಗಲು ಪ್ರತ್ಯೇಕ ದ್ವಾರ ಮಾಡಲು ಸೂಚಿಸಿದರು.ನಂತರ ಟಿಹೆಚ್‌ಒ ಕಚೇರಿಗೆ ತೆರಳಿ ತಾಲೂಕಿನಲ್ಲಿ ಇದುವರೆಗೆ ತಪಾಸಣೆಗೊಳಪಟ್ಟವರ ಕುರಿತು ಮಾಹಿತಿ ಪಡೆದು ತೆರಳಿದರು.

ಈ ಸಂದರ್ಭದಲ್ಲಿ ಕಲಬುರ್ಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ನಳಿನ್ ಕುಮಾರ ಅತುಲ್, ಜಿ.ಪಂ.ಸಿಇಒ ಶಿಲ್ಪಾ ಶರ್ಮಾ,ತಹಸೀಲ್ದಾರ ನಿಂಗಣ್ಣ ಬಿರಾದಾರ್,ತಾ.ಪಂ ಇಒ ಅಂಬ್ರೇಶ,ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here