ಕಲಬುರಗಿ,ಚಿತ್ತಾಪುರ: ಮಹಾಮಾರಿ ಕೊರೊನ್ ಸಾಂಕ್ರಾಮಿಕ ರೋಗ ನಿರ್ಮೂಲನೆಗಾಗಿ ದೇಶದಾದ್ಯಂತ ಲಾಕ್ ಡೌನ್ ಕರೆನೀಡಲಾಗಿದ್ದು, ನಿಯಮಗಳನ್ನು ಉಲ್ಲಂಘಿಸಿದ ಸವಾರರ 50 ದ್ವಿಚಕ್ರ ವಾಹನಗಳನ್ನು ಜಫ್ತಿ ಮಾಡಿಕೊಳ್ಳಲಾಗಿದೆ ಎಂದು ಸಿಪಿಐ ಪಂಚಾಕ್ಷರಿ ಸಾಲಿಮಠ್ ತಿಳಿಸಿದರು.
ಕೊರೊನ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಿಲ್ಲಾ ಆಡಳಿತ ಕಲಂ 144 ಜಾರಿ ಮಾಡಿದ್ದು ದೇಶದಾದ್ಯಂತ ಕರ್ಫ್ಯೂ ಘೋಷಿಸಲಾಗಿದೆ ಜನರು ಅನಾವಶ್ಯಕ ಹೊರಗಡೆ ಓಡಾಡುವುದು ಸಂಪೂರ್ಣ ನಿಷೇಧಿಸಿದ್ದು ತಾಲೂಕಿನ ಕೆಲವು ಕಡೆಗಳಲ್ಲಿ ಅನಾವಶ್ಯಕ ಬೈಕ್ ಗಳ ಓಡಾಡುತ್ತಿರುವುದು ಕಂಡುಬಂದಿವೆ.
ಈ ಸಮಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿವೈಎಸ್ಪಿ ವೆಂಕನಗೌಡ ಪಾಟೀಲ್ ಅವರ ಸೂಚನೆಯಂತೆ ಚಿತ್ತಾಪುರ ಪಿಎಸ್ಐ ಶ್ರೀಶೈಲ ಅಂಬಾಟಿ, ವಾಡಿ ಪಿಎಸ್ಐ ವಿಜಯ್ ಕುಮಾರ್ ಬಾವಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಾಡಿಯಲ್ಲಿ 22 ಚಿತ್ತಾಪುರನಲ್ಲಿ 28 ನಿಯಮ ಪಾಲಿಸದ ಒಟ್ಟು 50 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಲಾಕ್ ಡೌನ್ ಮುಗಿದ ಮೇಲೆ ಕಾನೂನಿನ ಪ್ರಕಾರ ವಾಹನಗಳನ್ನು ಬಿಡಲಾಗುವುದು ಎಂದು ತಿಳಿಸಿದರು.