ಕಲಬುರಗಿ: ಕೊರೋನಾ ತಡೆಗೆ ವಿಶ್ವದ್ಯಂತ ಸಾಕಷ್ಟು ಪ್ರಯತ್ನ ನಡೆಯುತ್ತಿದ್ದು, ದೇಶದಲ್ಲಿ ಕೋವಿಡ್ -19 ತಡೆಗೆ ಕೇಂದ್ರ ಸರಕಾರ ಲಾಕ್ ಡೌನ್ ಘೋಷಿಸಿ, ಜಿಲ್ಲಾಡಳಿತ ಏ.14ರ ವರೆಗೆ ಕಲಂ 144 ಜಾರಿ ಮಾಡಿ ಆದೇಶ ಹೊರಡಿಸುವ ಮೂಲಕ ಸೋಂಕು ತಡೆಗೆ ಕ್ರಮ ಕೈಗೊಳ್ಳಲಾಗಿದೆ.
ಆದರೆ ನಗರದ ಹೊರ ವಲಯದ ತಾಜ್ ಸುಲ್ತಾನಪುರ ಹತ್ತಿರ ವಿರುವ ಎಪಿಎಂಸಿ ಕೃಷಿ ಮಾರುಕಟ್ಟೆಯಲ್ಲಿ ಜನಜಂಗುಳಿ ಸೇರಿದು ಕಂಡುಬಂದಿದ್ದು, ಸಾಮಾಜಿಕ ಅಂತರ ಕಾಯ್ದು ಕೊಳ್ಳದ ಜನರು ಭಾಗಿಯಾಗಿ ನಿಯಮ ಉಲ್ಲಂಘಿಸುವುದ ಕಂಡು ಬಂತು.
ಇತ್ತೀಚಿಗೆ ಕೇಂದ್ರ ಬಸ್ ನಿಲ್ದಾಣ ಹತ್ತಿರ ವಿರುವ ಕಣ್ಣಿ ತರಕಾರಿ ಮಾರ್ಕೆಟ್ ಬಂದ್ ಮಾಡಿರುವದರಿಂದ ಕೃಷಿ ಮಾರುಕಟ್ಟೆಯಲ್ಲಿ ಹೆಚ್ಚಿದ ಜನ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಈ ಸ್ಥಿತಿಯಿಂದ ಒಂದು ಕಡೆ ಅನುಕೂಲವಾದರೆ ಇನ್ನೊಂದು ಕಡೆ ವೈರಸ್ ಹರಡುವಿಕೆ ಬಗ್ಗೆ ಜನರಲ್ಲಿ ಆತಂಕ ಕಾಡುತ್ತಿದೆ.