ಶಹಾಪುರ: ಕರೋನಾ ಎಫೆಕ್ಟ್ ನಿಂದ ಇತ್ತೀಚೆಗೆ ರೈತ ಬೆಳೆದ ಕಲ್ಲಂಗಡಿಯನ್ನು ಮಾರಾಟವಾಗದೆ ಸಂಪೂರ್ಣವಾಗಿ ವೆಸ್ಟ್ ಆಗಿರುವುದು ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಜರುಗಿದೆ.
ಖಾನಾಪುರದ ನಾಗಪ್ಪ ಎಂಬ ರೈತ ೧೦ ಲಕ್ಷ ರೂಪಾಯಿ ಸಾಲ ಸೋಲ ಮಾಡಿ ೫ ಎಕರೆ ತನ್ನ ಸ್ವಂತ ಜಮೀನಿನಲ್ಲಿ ಕಲ್ಲಂಗಡಿಯನ್ನು ಬೆಳೆದಿದ್ದ ಆದರೆ ಈತನ ದುರ್ವಿಧಿ ಅಂತಾರಲ್ಲ ಹಾಗೆ ಕರೋನಾ ಬಂದು ವಕ್ಕರಿಸಿ ಬಿಟ್ಟಿತು.ಯಾರು ಕಲ್ಲಂಗಡಿ ಖರೀದಿಗೆ ಬಾರದೆ ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಎಂದು ಗೋಳು ಅಂತ ತಮ್ಮ ಅಳಲನ್ನು ತೋಡಿಕೊಂಡರು.
ರೈತ ಮುಖಂಡರಾದ ಕಾಂತು ಪಾಟೀಲ್ ಅವರು ಸ್ಥಳಕ್ಕೆ ಧಾವಿಸಿ ಜಮೀನಿನಲ್ಲಿರು ಎಲ್ಲ ಕಲ್ಲಂಗಡಿ ಬೆಳೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿ ನೆರವು ನೀಡಬೇಕು ಎಂದು ಒತ್ತಾಯಿಸಿದರು.
- ವರದಿ: ಬಸವರಾಜ ಸಿನ್ನೂರ.