ಕೊರೋನಾ ಜಾಗೃತಿ ಚಿತ್ರ ಬಿಡಿಸಿ ಜನ ಜಾಗೃತಿಗೆ ಮುಂದಾದ ನಗರಸಭೆ

0
45

ಸುರಪುರ: ಕೊರೋನಾ ದಿನದಿಂದ ದಿನಕ್ಕೆ ತನ್ನ ರಣಕೇಕೆ ಹೆಚ್ಚಿಸುತ್ತಿದೆ,ಇದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ,ಸ್ಥಳಿಯ ಸಂಸ್ಥೆಗಳು ಮತ್ತು ತಾಲೂಕು ಆಡಳಿತ ಹಲವಾರು ವಿಧದಲ್ಲಿ ಕಸರತ್ತು ಮಾಡುತ್ತಿದೆ,ಆದರೆ ಜನರು ಮಾತ್ರ ಇದರ ಪರಿವೆ ಇಲ್ಲದಂತೆ ರೋಡಿಗಿಳಿಯುತ್ತಿದ್ದಾರೆ.

ನಗರದಲ್ಲಿ ಜನರು ಲಾಕ್‌ಡೌನ್ ಮದ್ಯೆಯು ಹೊರಗೆ ಬರುವುದನ್ನು ತಪ್ಪಿಸಲು ನಗರಸಭೆ ಹೊಸ ಪ್ರಯತ್ನಕ್ಕೆ ಮುಂದಾಗಿದೆ.ತಮ್ಮ ಇಲಾಖೆಯ ವಾಹನದ ಮೂಲಕ ಧ್ವನಿವರ್ಧಕ ಬಳಸಿ ಜಾಗೃತಿ ಮೂಡಿಸುವುದರ ಜೊತೆಗೆ ಈಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಕೊರೊನಾ ವೈರಾಣುವಿನ ಚಿತ್ರ ಬಿಡಿಸಿ ಅದರ ಜೊತೆಗೆ ಮನೆಯಿಂದ ಹೊರಗೆ ಬಂದರೆ ನೀನು,ನಿನ್ನ ಜೊತೆಗೆ ಬರುವೆನು ನಾನು ಎಂದು ಬರೆಯುವ ಮೂಲಕ ಕೊರೊನಾದ ಭಯವನ್ನು ಜನರಲ್ಲಿ ಮೂಡಿಸಿದ್ದಾರೆ.

Contact Your\'s Advertisement; 9902492681

ಆನರು ಹೊರಗಡೆ ಬಂದವರು ಇದನ್ನು ದಿಟ್ಟಿಸುತ್ತ ಹೋಗುತ್ತಿರುವುದು ನೋಡಿದರೆ ಜನರು ಇದಕ್ಕು ಅಂತಹ ಮಹತ್ವ ಕೊಡುತ್ತಿಲ್ಲ ಎಂದೆ ಹೇಳಬೇಕಾಗಿದೆ.ಮುಂದಾದರು ನಗರಸಭೆಯ ಇಂತಹ ಪ್ರಯತ್ನಗಳಿಗೆ ಬೆಲೆ ನೀಡಿ ಮನೆಯಿಂದ ಹೊರಬರುವುದನ್ನು ನಿಲ್ಲಿಸುವರೆ ಕಾದು ನೋಡಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here