ಕಲಬುರಗಿ: ದೇಶದ್ಯಂತ ಕೊರೊನಾ ಮಹಾಮಾರಿ ಸ್ಟೇಜ್ -3ಗೆ ತಲುಪ್ಪಲಿದ್ದು, ಈ ಮಹಾ ಮಾರಿಯನ್ನು ತಡೆಯುವ ಜವಾಬ್ದಾರಿ ಪ್ರತಿಒಬ್ಬರ ಮೇಲಿದೆ ಹೀಗಾಗಿ ಶುಕ್ರವಾರದ ಜುಮ್ಮಾ ನಮಾಜ್ ಮನೆಯಲ್ಲೇ ಮಾಡಿ ಎಂದು ನಗರಾಭಿವೃದ್ಧಿ ಪ್ರಾಧೀಕಾರದ ಮಾಜಿ ಅಧ್ಯಕ್ಷರಾದ ಡಾ. ಮೊಹಮ್ಮದ್ ಅಜಗರ್ ಚುಲಬುಲ್ ಅವರು ಕಾಲನಡಿಗೆ ನಡೆಸಿ ಮೈಕ್ ಮೂಲಕ ಜಾಗೃತಿ ಮೂಡಿಸಿದ್ದರು.
ಈ ಕುರಿತಂತೆ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮಾತನಾಡುತ್ತಾ, ಈ ಕಾರ್ಯಕ್ಕೆ ಸಾರ್ವಜನಿಕರೆಲ್ಲರೂ ಸಹಕರಿಸಬೇಕು. ಯಾರು ಮನೆಯಿಂದ ಹೊರಗಡೆ ಯಾರು ಬರಬಾರದು ಎಲ್ಲರು ಮನೆಯಲ್ಲಿಯೇ ಇರಬೇಕು, ತೀರ ಅಗತ್ಯವಿದ್ದಾಗ ಮಾತ್ರ ಹೊರಗೆ ಬಂದು ಕೆಲಸ ಮುಗಿದಕ್ಷಣ ಮನೆಗೆ ತರಳಬೇಕೆಂದು ಕರೆ ನೀಡಿದರು.
ನಾಳೆ ಶುಕ್ರವಾರ ಇದ್ದು ಮುಸ್ಲಿಂ ಬಾಂಧವರು ಜುಮ್ಮಾ ನಮಾಝ್ ಮನೆಯಲ್ಲಿ ಮಾಡಬೇಕು. ಅನಾವಶ್ಯಕ ಬೀದಿಗೆ ಬರಬಾರದು ಎಂದು ಮನವಿ ಮಾಡಿ ಜಿಲ್ಲಾಡಳಿತ ಮತ್ತು ಅರೋಗ್ಯ ಇಲಾಖೆಗೆ ಸಂಪೂರ್ಣ ರೀತಿಯಲ್ಲಿ ಸಹಾಕರ ನೀಡಬೇಕು. ಅಲ್ಲದೇ, ದೆಹಲಿ ಸಭೆಯಿಂದ ವಾಪಸ್ ಬಂದವರು ಸ್ವಯಂ ಪ್ರೇರಿತರಾಗಿ ಚಿಕಿತ್ಸೆಗೆ ಮುಂದಾಗಿ ಮಾನವೀಯತೆ ಮೆರೆಯಬೇಕೆಂದು ಅವರು ಕಳಕಳಿಯ ಮನವಿ ಮಾಡಿದರು.