ರೈತ ನಾಯಕ ಲಿಂ.ಮಲ್ಕಣ್ಣಗೌಡ ಪೊಲೀಸ್ ಪಾಟೀಲ್ 20ನೇಯ ವರ್ಷದ ಸ್ಮರಣೋತ್ಸವ

0
133

ಕಲಬುರಗಿ: ಸಮಾಜಸೇವೆ ಆದರ್ಶ ರೈತ ನಾಯಕರು ಕಲ್ಲೂರ ಕೆ ಗ್ರಾಮದ ಹಿರಿಯ ಮುಖಂಡರಾಗಿದ ಲಿಂ.ಮಲ್ಕಣ್ಣಗೌಡ ಪೊಲೀಸ್ ಪಾಟೀಲ್ 20ನೇಯ ವರ್ಷದ ಸ್ಮರಣೋತ್ಸವ.

ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ ಕೆ ಗ್ರಾಮದ ಅವಿಭಕ್ತ ಕುಟುಂಬದ ಸದಸ್ಯರಾಗಿದ ಲಿಂ.ಮಲ್ಕಣ್ಣಗೌಡ ಪಾಟೀಲ ಅವರ ಸ್ಮರಣಾರ್ಥ ಈ ಬಾರಿ ಅತ್ಯಂತ ಸರಳ ಕಾರ್ಯಕ್ರಮ ನಡೆಯಲಿದೆ ಎಂದು ಬಿ.ಎಂ.ಪಾಟೀಲ್ ಕಲ್ಲೂರ ತಿಳಿಸಿದ್ದಾರೆ. ಕೊರೋನಾ ವೈರಸ್ ನಿಮಿತ್ತ ಜನರು ಹೆಚ್ಚು ಸೇರಬಾರದು, ಸರ್ಕಾರದ ಆದೇಶವನ್ನು ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜನರ ಆರೋಗ್ಯವೇ ಎಲ್ಲರ ಆರೋಗ್ಯವಾಗಿದೆ.  ಕುಟುಂಬ ಸದಸ್ಯರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

ಲಿಂ. ಮಲ್ಕಣ್ಣಗೌಡ ಪಾಟೀಲ ಅವರು  ಸಮಾಜ ಸೇವೆ ಅತ್ಯಂತ ಶ್ಲಾಘನೀಯವಾಗಿದೆ. ಊರಿನಲ್ಲಿ ಯಾವುದೇ ಕಾರ್ಯಕ್ರಮ ಇದ್ದರು ಅವರು ಎದುರು ನಿಂತು ಮಾಡುತ್ತಿದ್ದರು. ಸಮಾಜದ ಕಾರ್ಯಗಳು, ಊರಿನಲ್ಲಿ ದೇವಾಲಯದ ಕಟ್ಟುವ, ಜಾತ್ರೆ, ರಸ್ತೆ, ಭಜನೆ, ಹತ್ತಿ, ಜೋಳದ ರಾಶಿಗಳು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದ್ದರು.

ನಮ್ಮ ಊರಿನ ಹಿರಿಯ ಅಣ್ಣಾ ಎಂದು ಕರೆಯುತ್ತಾರೆ. ನಮಗೆ ಸಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅವರು ಮಾರ್ಗದರ್ಶನ ಮಾಡಿದ್ದಾರೆ. ಅವರು ಮಾತುಗಳು ಬಹಳ ನೇರವಾಗಿ ಮತ್ತು ಕಟ್ಟುನಿಟ್ಟಾಗಿ ಹೇಳುತ್ತಿದ್ದರು. ಅವರ ಮಾತುಗಳು ಇಡೀ ಊರಿನ ಜನರು ಕೇಳುತ್ತಿದ್ದರು. ಎಲ್ಲಾ ಕಾರ್ಯಕ್ರಮ ಮನೆಯವರು ಮಾಡಿದಂತೆ ಮಾಡಿ ಮತ್ತೆ ಅವರ ಕೃಷಿ ಚಟುವಟಿಕೆ ಹೋಗುತ್ತಿದ್ದರು. ನಮ್ಮ ಊರಿನಲ್ಲಿ ದಿನಾಲು ಮಲ್ಕಣ್ಣಗೌಡ ಹೆಸರು ನೆನಪು ಮಾಡಿಕೊಳ್ಳುತ್ತಾರೆ. -ಶಿವಾನಂದ ದ್ಯಾಮಗೊಂಡ, ಜೆಡಿಯು ಮುಖಂಡರು, ಸಮಾಜದ ನಾಯಕರು, ಕೃಷಿ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷರು, ಜೇವರ್ಗಿ.

ಪ್ರತಿ ವರ್ಷ ಅಮೋಘಸಿದ್ಧೇಶ್ವರ ಜಾತ್ರೆ, ಮೂರು ವರ್ಷಕ್ಕೊಮ್ಮೆ ಮರಗಮ ಜಾತ್ರೆ, ಶ್ರಾವಣದಲ್ಲಿ ಭಜನೆ, ಮದುವೆ, ಪ್ರವಚನ  ಮುಂತಾದ ಕಾರ್ಯಗಳು ನಡೆಸುತ್ತಿದ್ದರು. ಅವರು ನಿರಂತರ ಕೃಷಿ ಚಟುವಟಿಕೆ, ಕಾಯಕ ನಾಲ್ಕು ಎತ್ತಿನ ಒಕ್ಕಲುತನ ಇವರು ನಡೆಸಿದರು. ಇಪ್ಪತ್ತು ಕೂರಿಗೆ ಹೋಲದಲ್ಲಿ ಸ್ವಂತ  ವ್ಯವಸಾಯ ಮಾಡುವ ಜೊತೆಗೆ ಊರಿನ ಸುತ್ತ ಮುತ್ತಲಿನ ಗ್ರಾಮದ ನ್ಯಾಯಪಂಚಿತಿ ಮಾಡುತ್ತೀದ್ದರು. ಕಲ್ಲೂರ ಬಿ, ಯಂಕಂಚಿ, ಕೂಡಲಗಿ, ಮಹೂರ, ಮಂದೇವಾಲ, ಬಳ್ಳುಂಡಗಿ, ನೆಲೋಗಿ ಎಲ್ಲಾ ಗ್ರಾಮದಲ್ಲಿ ಚಿರಪರಿಚಿತರು ಆಗಿದ್ದರು.

ಯಾವುದೇ ಜಾತಿ, ಧರ್ಮ ನೋಡದೆ ಮಾನವರು ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದರು. ಇಂದಿಗೂ ಊರಿನಲ್ಲಿ ಅವರ ಹೆಸರು ಎಲ್ಲರ ಬಾಯಿಯಲ್ಲಿ ಮತ್ತು ನೆನಪು ಮಾಡಿಕೊಂಡುವ ಯುವಕರಿಗೆ ಹಿರಿಯರು ಹೇಳುತ್ತಾರೆ. ಅವರ ಕಾಲದಲ್ಲಿ ಸಾರಾಯಿ ಮುಕ್ತ ಗ್ರಾಮ ಕೇಲವು ವರ್ಷ ಆಗಿತ್ತು ಕಲ್ಲೂರ ಗ್ರಾಮ. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಅವರ ಸೇವೆ ಮತ್ತು ಕಾರ್ಯ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಬಹುದು.

ಪ್ರತಿ ವರ್ಷ ಇವರ ಸ್ಮರಣಾರ್ಥ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಅಲ್ಪನಗದು ಹಣ ಸುಮಾರು ಹತ್ತು ವರ್ಷಗಳಿಂದ ನಿರಂತರವಾಗಿ ಕಲ್ಲೂರ ಕೆ ಸರಕಾರಿ ಪ್ರೌಢ ಶಾಲೆಯಲ್ಲಿ ನೀಡಲಾಗುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here