ರಾಯಚೂರು: ಲಾಕ್ ಡೌನ್ ನಿಂದ ಕೆಂಗೆಟ್ಟ ಸಿಂಧನೂರಿನ ವೆಂಕಟೇಶ್ವರ ಕಾಲೋನಿಯ ನಿವಾಸಿಯಾದ ಗಂಗಮ್ಮ ತನ್ನ ಊರು ಸೇರಿಕೊಳ್ಳಲು ಬೆಂಗಳೂರಿನಿಂದ ತನ್ನೂರು ಸಿಂಧನೂರಿಗೆ ಕಾಲ್ನಡಿಗೆ ಯಲ್ಲಿ ನಡೆದು ಬರುವ ಮಾರ್ಗ ಮಧ್ಯೆ ಹಸಿವು ಮತ್ತು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟರುತ್ತಾಳೆ. ಈ ಸಾವಿಗೆ ರಾಜ್ಯ, ಕೇಂದ್ರ ಸರ್ಕಾರ ಭಾಗದ ಜನಪ್ರತಿನಿಧಿ ಹಾಗೂ ಜಿಲ್ಲಾಡಳಿತವೆ ನೇರ ಹೊಣೆ ಹೊತ್ತು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಕಾ ಪ್ರಕಟಣೆ ನೀಡಿದ ಅವರು, ಜನತೆಯ ಆರೋಗ್ಯದ ಹಿತ ದೃಷ್ಟಿಯಿಂದ ಸಾಮಾಜಿಕ ಅಂತರಕ್ಕಾಗಿ ಲಾಕ್ ಡೌನ್ ನಿರ್ಧಾರ ಒಳ್ಳೆಯದೆ ಆದರೆ ಇದನ್ನು ಘೋಷಣೆ ಮಾಡುವ ಮುನ್ನ ಸಂಬಂಧಿಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದೇಶದ ಕೋಟ್ಯಾಂತರ ವಲಸೆ ಕಾರ್ಮಿಕರು, ಅಲೆಮಾರಿಗಳು ಗಳು, ದಿನಗೂಲಿ ನೌಕರರು ಸೇರಿದಂತೆ ಇತರೆ ದುಡಿಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಆಗತ್ಯ ಇರುವ ಎಲ್ಲಾ ರೀತಿಯ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಲಾಕ್ ಡೌನ್ ಘೋಷಣೆ ಮಾಡಬೇಕಿತ್ತು. ಸರಿಯಾದ ಪೂರ್ವ ಸಿದ್ದತೆ ಗಳಿಲ್ಲದೆ ಏಕಾಏಕಿ ದೇಶವನ್ನು ಲಾಕ್ ಡೌನ್ ಮಾಡಿದ ಪರಿಣಾಮ ದೇಶದ ಕೋಟ್ಯಾನುಗಟ್ಟಲೆ ಜನತೆಯ ಬದುಕನ್ನು ಸರ್ಕಾರ ಬೀದಿಗೆ ತಂದು ನಿಲ್ಲಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶವ್ಯಾಪ್ತಿ ಎಲ್ಲೆಡೆಯೂ ಕೊರೋನಾ ವೈರಸ್ ಕ್ಕಿಂತಲೂ ಹಸಿವು, ಅನಾರೋಗ್ಯ ನೀರಿನ ದಾಹ ಮತ್ತು ಇತ್ಯಾದಿ ಜೀವನಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳಿಗೆ ಸಿಲುಕಿದ ನೂರಾರು ಮಂದಿ ಈಗಾಗಲೇ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ನಮ್ಮ ಕಣ್ಣ ಮುಂದೆ ಇರುವ ಉದಾಹರಣೆ ಎಂದರೆ ನಮ್ಮದೆ ಜಿಲ್ಲೆಯ ಸಿಂಧನೂರಿನ ನಿವಾಸಿ ಗಂಗಮ್ಮಳ ಸಾವು ಈ ಸಾವಿಗೆ ಸರ್ಕಾರದ ನಿರ್ಲಕ್ಷ್ಯ ಮತ್ತು ಈ ನೀತಿಗಳೆ ನೇರ ಕಾರಣ ಕೂಡಲೇ ಗಂಗಮ್ಮಳ ಕುಟುಂಬಕ್ಕೆ ಸೂಕ್ತ ಪರಿಹಾರ ವನ್ನು ನೀಡಬೇಕು. ಮತ್ತು ಇಂತಹ ಪರಿಸ್ಥಿತಿ ಯಲ್ಲಿ ಸಿಲುಕಿಕೊಂಡಿರುವ ಅಸಂಖ್ಯಾತ ಜನ ಸಮುದಾಯವನ್ನು ಪಾರು ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಸ್ಥಳೀಯಾಡಳಿತ, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಬೇಂದು ಆಗ್ರಹಿದ್ದಾರೆ.