ಕಲಬುರಗಿ: ಕೊರೋನಾ ವೈರಸ್ ಸೋಂಕಿನಿಂದ ರೈತರು ಬೆಳೆದ ತರಕಾರಿ ಆಹಾರ ಧಾನ್ಯಗಳು ಮತ್ತು ಹಣ್ಣು-ಹಂಪಲುಗಳು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸರ್ಕಾರವೇ ಖರೀದಿಸಬೇಕು ಮತ್ತು ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ನಯಸವೇರ ಸಂಘಟನೆ ಅಧ್ಯಕ್ಷ ಮೋದಿನ್ ಪಟೇಲ ಅಣಬಿ ಒತ್ತಾಯಿಸಿದ್ದಾರೆ.
ಇಂದು ನಗರಕ್ಕೆ ಆಗಮಿಸಿದ ಕೃಷಿ ಸಚಿವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ ಅವರು 14.06 ಕೋಟಿ ರೈತರಿಗೆ ಕಳೆದ ಸಾಲಿನಲ್ಲಿ ಕಿಸಾನ್ ಸಮ್ಮನ್ ಯೋಜನೆ ಅಡಿಯಲ್ಲಿ ವರ್ಷ 8.5 ಕೋಟಿ ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಕೊರೋನಾ ಪರಿಹಾರ ಘೋಷಣೆಯಲ್ಲಿ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದರು.
ಕೇರಳ ಸರ್ಕಾರವು 1 ಕುಟುಂಬಗಳಿಗೆ ತಿಂಗಳಿಗೆ ಸರಿಹೋಗುವಂತೆ 50ಕೆಜಿ ಆಹಾರಧಾನ್ಯ ಮೂರು ತಿಂಗಳ ನಂತೆ ಬೇಕಾಗುವಷ್ಟು ಕೊಟ್ಟಿದೆ .ಪ್ರತಿ ತಿಂಗಳಿಗೆ ತಲಾ ಒಬ್ಬರಿಗೆ 15 ಕೆಜಿ ಆಹಾರ ಧಾನ್ಯ ಖರ್ಚಾಗುತ್ತೆ .ಆದರೆ ಸರಕಾರ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿರುವುದು ಮತ್ತು ಕೊಡ್ತಾ ಇರೋದು ದುಃಖಕರ ಸಂಗತಿ. ಇದರಿಂದ ಜನರ ಹಸಿವು ನೀಗಿಸುವುದಕ್ಕಾಗಿ ಆಗಲ್ಲ ಆದ್ದರಿಂದ ಸರ್ಕಾರ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಕೊರೋನಾ ಕರಾಳ ಛಾಯೆ ಜನರ ಬದುಕು ಹಿಂಡಿ ಹಿಪ್ಪಿ ಮಾಡಿದ್ದು. ಹಸಿವಿನಿಂದ ಹೊಟ್ಟೆ ತುಂಬಿಸಿಕೊಳ್ಳಲು ಇಲ್ಲಿನ ಬಡ ಮಾತೆಯರು ತಮ್ಮ ಕೊರಳಿನ ಮಾಂಗಲ್ಯ ಮತ್ತು ಕಾಲುಂಗುರ ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಘಟನೆ ನಗರದ ಸಂತ್ರಸ್ವಾಡಿ ಯಲ್ಲಿ ನಡೆದಿದ್ದು ಸರಕಾರ ಎಚ್ಚೇತುಕೊಂಡು ನೆರವು ನೀಡಬೇಕೆಂದು ಒತ್ತಾಯಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ಸಲೀಂ ಅಹ್ಮದ್ ಚಿತ್ತಾಪುರಿ, ಶೇಕ್ ಸಿರಾಜ್ ಪಷಾ, ಸಜಿದ್ ಅಲಿ ರಂಜೋಳವಿ, ಸೈರಾ ಬಾನು ಅಬ್ದುಲ್ ವಾಹಿದ್, ಸಲಿಂ ಸಗರಿ, ಹೈದರಲಿ ಇನಮ್ದಾರ, ಅನೇಕರು ಹಾಜರಿದ್ದರು.