ಶಹಾಬಾದ: ಕೊರೋನಾ ರೋಗ ಇಡೀ ವಿಶ್ವಕ್ಕೆ ತಲೆನೋವಾಗಿ ಕಾಡುತ್ತಿದೆ.ಯಾರಿಗಾದರೂ ಕಡು ಬಡವರಿಗೆ ನಿರ್ಗತಿಕರಿಗೆ ಸಹಾಯ ಮಾಡುವ ಮನಸ್ಸಿದ್ದರೇ ಮಾಡಿ.ಇಲ್ಲದಿದ್ದರೇ ಮನೆಯಲ್ಲಿರಿ ಎಂದು ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ ಹೇಳಿದರು.
ಅವರು ನಗರದ ಎಸ್‌ಬಿಐ ಬ್ಯಾಂಕ್ ಆವರಣದಲ್ಲಿ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಬ್ಯಾಂಕ್ ವತಿಯಿಂದ ಆಹಾರ ಧಾನ್ಯಗಳನ್ನು ವಿತರಿಸಿ ಮಾತನಾಡಿ, ಕೊರೋನಾ ಲಾಕ್ ಡೌನ್ ಮಾಡಿದ್ದರಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿರುವುದು ನಿಜ.ಅದರಲ್ಲೂ ಕಡುಬಡವರು ಆಹಾರಕ್ಕಾಗಿ ತೊಂದರೆಪಡಬೇಕಾದ ಪರಿಸ್ಥಿತಿಯುಂಟಾಗಿದೆ.
ಕಡು ಬಡವರಿಗೆ, ನಿರ್ಗತಿಕರಿಗೆ ಆಹಾರದ ಸಮಸ್ಯೆಯಾಗುತ್ತಿರುವುದನ್ನು ಕಂಡು ದೇಶವೇ ಅವರಿಗೆ ಸಹಾಯ ಹಸ್ತ ಚಾಚುತ್ತಿದೆ.ಅದರಂತೆ ನಮ್ಮ ಬ್ಯಾಂಕಿನಿಂದ ನಾವು ಅವರಿಗೆ ೫ ಕ್ವಿಂಟಾಲ್ ಅಕ್ಕಿ, ಅರ್ಧ ಕ್ವಿಂಟಾಲ್ ತೊಗರಿ ಬೇಳೆಯನ್ನು ನೀಡುತ್ತಿದ್ದೆವೆ ಎಂದು ಹೇಳಿದರು.
ಸಹಾಯ ಮಾಡಲು ನಗರದ ಎಸ್‌ಬಿಐ ಬ್ಯಾಂಕ್ ವತಿಯಿಂದ ತಹಸೀಲ್ದಾರ ಅವರಿಗೆ ೫ ಕ್ವಿಂಟಾಲ್ ಅಕ್ಕಿ, ಅರ್ಧ ಕ್ವಿಂಟಾಲ್ ತೊಗರಿ ಬೇಳೆಯನ್ನು ಹಸ್ತಾಂತರ ಮಾಡಿದರು. ತಹಸೀಲ್ದಾರ ಸುರೇಶ ವರ್ಮಾ ಮಾತನಾಡಿ, ಆಹಾರ ಧಾನ್ಯಗಳನ್ನು ನೀಡುವವರು ಅಥವಾ ಸಹಾಯ ಹಸ್ತ ಚಾಚುವವರು ತಾಲೂಕಾಢಳಿತಕ್ಕೆ ಒಪ್ಪಿಸಬೇಕೆಂದು ಮನವಿ ಮಾಡಿದರು.
ಕೊರೊನಾದಿಂದ ಬಚಾವ್ ಆಗಲು ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪರಿಹಾರ.ಯಾರು ಮನೆಯಿಂದ ಅನಾವಶ್ಯಕವಾಗಿ ಹೊರಬರಬೇಡಿ ಎಂದು ಮನವಿ ಮಾಡಿದರು.