ಕಲಬುರಗಿ: ಅಭಿವೃದ್ಧಿ ಮಾಡುವ ಉತ್ಸಾಹ ಹೊಂದಿರುವ ಡಾ. ಅವಿನಾಶ ಜಾಧವ್ ಗೆ ಗೇಲ್ಲಿಸಬೇಕು ಎಂದು ಎಂದು ಮಾಜಿ ಸಚಿವ, ತೆಲಗು ನಟ ಬಾಬು ಮೋಹನ್ ಅವರು ಮತದಾರಲ್ಲಿ ಮನವಿ ಮಾಡಿದ್ದರು.
ಅವರು ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲ ಭಾಗವಹಿಸಿ ಮಾತನಾಡಿ, ಭಾರತದ ಜನತೆ ಮನಸ್ಸುಗೆದ್ದರುವ ಮೋದಿ ಮೋಡಿ ಮಾಡಿದ್ದಾರೆ. ಅಲ್ಲಿ ಮೋದಿ, ಇಲ್ಲಿ ಯಡಿಯೂರಪ್ಪ ಇಬ್ಬರ ನಡುವೆ ಡಾ. ಅವಿನಾಶರನ್ನುಗೇಲ್ಲಿಸಿದರೆ ಕ್ಷೇತ್ರದ ಅಭಿವೃದ್ದಿ ಸಾಧ್ಯ ಎಂದರು.
ತೆಲಂಗಾಣದಲ್ಲಿ ಸೇವಾಲಾಲ್ ಮತ್ತು ಜಗದಂಬಾದೇವಿ ನಿರ್ಮಿಸಿದ್ದೇನೆ. ಬಂಜಾರಾ ಸಮಾಜದವರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿಮಾಡಿದರು.
ಚಿಂಚೋಳಿಯನ್ನು ದತ್ತಕ್ಕೆಪಡೆದುಕೊಳ್ಳುವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಗನಗೆಲುವಿಗಾಗಿ ದತ್ತನ ದರುಶನ ಪಡೆಯಿರಿ ಸಾಕುಎಂದು ಮಾಜಿಸಚಿವ ಅರವಿಂದಲಿಂಬಾವಳಿಲೇವಡಿಮಾಡಿದರು. ನಾವು ಮೋದಿ ಹೆಸರಿನಲ್ಲಿ ಮತ ಕೇಳ್ತಿವಿ, ನೀವು ರಾಹುಲ್ ಗಾಂಧಿ ಹೆಸರಮೇಲೆಮತ ಕೇಳುತ್ತಿಲ್ಲ. ಯಾಕೆ ಗೊತ್ತಾಅವರ ಹಡಸೆಮೇಲಡಮತಕೇಳಿದರೆಬರುವ ಓಟುಕೂಡ ಬರುವುದಿಲ್ಲ ಎಂದ ಆತಂಕವಿದೆ ಕಾಂಗ್ರೆಸ್ ಮುಖಂಡರಲ್ಲಿ ಎಂದು ಟೀಕಿಸಿದರು. ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶಜಾಧವ್ ರನ್ನು ಗೆಲ್ಲಿಸಿಎಂದು ಮನವಿ ಮಾಡಿದರು.
ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ. ಉಮೇಶ ಜಾಧವ್ ಮಾತನಾಡಿ, ಬಂಜಾರಾ ಸಮಾಜದ ಅಭಿವೃದ್ಧಿಯಾಗಬೇಕಾದರೆ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದರು. ಬಂಜಾರಾ ಸಮಾಜದ ಅಭಿವೃದ್ಧಿಗೆ ಬಿಜೆಪಿ ಶ್ರಮಿಸಿದೆ. ಚಿಂಚೋಳಿ ತಾಲೂಕಿನಲ್ಲಿ ಹಳ್ಳಿ ಹಳ್ಳಿಗಳಿಗೂ ನಾನು ಶಾಸಕನಾಗಿದ್ದಾಗ ರಸ್ತೆ ನಿರ್ಮಿಸಿದ್ದೇನೆ. ನನ್ನ ಪುತ್ರ ಡಾ. ಅವಿನಾಶ ಜಾಧವ್ಗೆ ಒಂದು ಅವಕಾಶ ಕೊಡಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಚಿಂಚೋಳಿಯಲ್ಲಿ ಧರ್ಮ ಯುದ್ದ ನಡೆಯುತ್ತಿದೆ.ರಾಜ್ಯ ರಾಜಕಾರಣದಲ್ಲಿ ಚಿಂಚೊಳಿ ಚುನಾವಣೆ ದಿಕ್ಸೂಚಿಯಾಗಲಿದೆ ಎಂದು ಮಾಜಿ ಸಚಿವ, ಚುನಾವಣೆ ಉಸ್ತುವಾರಿ ವಿ.ಸೋಮಣ್ಣ ಹೇಳಿದರು. ದುರಾಡಳಿತ ನಡೆಸುವತ್ತಿರುವ. ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಬದಲಿಸಲು ಚಿಂಚೋಳಿ ಮತದಾರರು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿಗೆ ರಾಜ್ಯದ ಅಭಿವೃದ್ದಿಗೆ ಆಸಕ್ತಿಯಿಲ್ಲ ಮಗನನ್ನುಗೇಲ್ಲಿಸುವ ಚಿಂತೆಯಲ್ಲಿ ಸಿ.ಎಂ. ಆಡಳಿತ ಸೀಮಿತಗೊಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು. ಕಾಂಗ್ರೆಸ್, ಜೆಡಿಎಸ್ ನಡುವೆ ಕಚ್ಚಾಟ ಶುರುವಾಗಿದೆ. ಫಲಿತಾಂಶ ನಂತರ ಸರ್ಕಾರ ಪತನಗೊಳ್ಳಲಿದೆ ಎಂದರು. ರೈತರ ಸಾಲಮನ್ನಾಮಾಡುವ ವರಡಗೂ ಈ ಯಡಿಯೂರಪ್ಪ ಬಿಡುವುದಿಲ್ಲ. ಅಧಿವೇಶನದಲ್ಲಿ ಕಾಲರ್ ಹಿಡಿದು ಕೇಳುವೆ ಎಂದರು. ಚಿಂಚೋಳಿ ತಾಲೂಕನ್ನು ಗುಡಿಸಲು ರಹಿತ ತಾಲೂಕು ಮಾಡಲು ಪ್ರಯತ್ನಿಸುವೆ ಎಂದರು.