ಯಾದಗಿರಿ: ಭಗವಾನ್ ಮಹಾವೀರ ಜಯಂತಿಯ ಅಂಗವಾಗಿ ಮಹಾಮಾರಿ ಕೋರೋನಾ ಭೀತಿಯಿಂದ ಸಂಕಷ್ಟಕ್ಕೆ ಈಡಾಗಿರುವ ಹಸಿದ ಹೊಟ್ಟೆಗೆ ಅನ್ನ ನೀಡಲು ಇಲ್ಲಿಯ ಆಯಾರಕರ್ ಪರಿವಾರದಿಂದ ಪ್ರತಿ ಕುಟುಂಬಕ್ಕೆ ೧೦ಕೆಜಿ ಅಂತೆ ಸುಮಾರು ಒಂದು ಲಕ್ಷ ರೂಪಾಯಿ ಬೆಲೆಯ ೩೦ ಕ್ವಿಂಟಲ್ ಜೋಳ ಪಾಕೀಟುಗಳನ್ನು ವಿತರಿಸುವ ಕಾರ್ಯಕ್ಕೆ ಸೋಮವಾರ ಶಹಪೂರ್ ಪೇಟೆಯಲ್ಲಿ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಇಂತಹ ಸಂದಿಗ್ಧ ಸಮಯದಲ್ಲಿ ಬಡಕುಟುಂಬಗಳಿಗೆ ದಾನ ಮಾಡಲು ಉಳ್ಳವರು ಸ್ವಇಚ್ಛೆಯಿಂದ ಮುಂದೆ ಬರಬೇಕೆಂದು ಅವರು ಕರೆಕೊಟ್ಟರು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲೇ ಇದ್ದು ಸ್ವಚ್ಛತೆಯ ಕಡೆಗೆ ಗಮನಹರಿಸಿದಾಗ ಮಾತ್ರ ರೋಗವನ್ನು ತಡೆಗಟ್ಟಬಹುದು ಎಂದರು.
ಈ ಸಂದರ್ಭದಲ್ಲಿ ಸುಭಾಷ ಆಯಾರ್ಕರ್, ವಿಲಾಸ್ ಪಾಟೀಲ್, ಅಯ್ಯಣ್ಣ ಹುಂಡೆಕಾರ್ ಖಂಡಪ್ಪ ದಾಸನ್ ಡಾ|| ಸಿದ್ದಪ್ಪ ಹೊಟ್ಟೆ, ಬಸವರಾಜ್ ಮೋಟ್ನಳ್ಳಿ, ರಾಜು ಎಂದೆ, ನಾಗೇಂದ್ರ ಜಾಜಿ, ಶೇಖರ್ ಅರಳಿ, ಶಿವಕುಮಾರ್ ಅರುಣಿ ದಶರತ್ ಇನ್ನಿತರರು ಇದ್ದರು ಸುಮಾರು ಒಂದು ೩೦೦ ಕುಟುಂಬಗಳಿಗೆ ಜೋಳ ವಿತರಿಸಲಾಯಿತು